ವಿದ್ಯಾರ್ಥಿಗಳ ಬದುಕಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಅಗತ್ಯ: ಸೋಮಶೇಖರ ಹರ್ತಿ

ಕುಕನೂರು ತಾಲೂಕಿನ ಭಾನಾಪುರದ ಸರ್ಕಾರಿ ಶಾಲೆಯಲ್ಲಿ ಮಹಿಳಾ ಧ್ವನಿ ಸಂಸ್ಥೆ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಪ್ಪಳ ಹಾಗೂ ಹೈಬ್ರೀಡ್ ನ್ಯೂಸ್,ಶಾಲೆಯ ಸೃಷ್ಠಿ ಇಕೋ ಕ್ಲಬ್ ವತಿಯಿಂದ ಪವಾಡಗಳ ರಹಸ್ಯ ಬಯಲು ಮತ್ತು ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜಾಗೃತಿ ಮೂಡಿಸುವ ಸಲುವಾಗಿ ಜ್ಯೋತಿ ಬೆಳಗಿಸಿ ಮತ್ತು ಸಸಿ ಹಚ್ಚುವ ಮೂಲಕ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸೋಮಶೇಖರ ಹರ್ತಿ ಉದ್ಘಾಟಿಸಿದರು. ಇತ್ತಿಚೆಗೆ ಶಿಕ್ಷಣವಂತೆ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ, ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಪವಾಡಗಳನ್ನು ನಂಬದೆ ಅದರ ಹಿಂದಿನ ಸತ್ಯವನ್ನು ಅರಿತುಕೊಳ್ಳಿ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ನಾಗಪ್ಪ ಅಗಸಿಮುಂದಿನ ಕಾರ್ಯಕ್ರಮದಲ್ಲಿ ಪ್ರಸ್ತುತ ದಿನಗಳಲ್ಲಿ ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಮೌಢ್ಯದೊಂದಿಗೆ ಬೆರೆತು ಗೊಂದಲದ ವಾತಾವರಣವನ್ನು ಸೃಷ್ಟಿಸಿ ಜನರ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ, ವಿದ್ಯಾರ್ಥಿಗಳು ಪವಾಡಗಳ ಹಿಂದಿನ ಕೈ ಚಳಕ ಮತ್ತು ರಹಸ್ಯವನ್ನು ತಿಳಿದುಕೊಂಡು ಮೌಢ್ಯಾಚರಣೆಗಳಿಂದ ಮುಕ್ತರಾಗಿ ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಅಂಬರೀಶ್ ಕಮ್ಮಾರ, ರಘುನಾಥ ಸಂಗಳದ ಅವರು ವಿಜ್ಞಾನ ರಸಪ್ರಶ್ನೆ ಮತ್ತು ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮಗಳು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಲ್ಲಿ ವಿಜ್ಞಾನ ಅರಿವು ಮೂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ನಾಗಪ್ಪ ಅಗಸಿಮುಂದಿನ, ಬಿ.ಎನ್.ಹೊರಪೇಟಿ, ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ಎಸ್ ಡಿ ಎಂ. ಸಿ ಹಾಗೂ ರಥ ಶಿಲ್ಪಿಗಳಾದ ಡಾ. ಯಲ್ಲಪ್ಪ ಬಡಿಗೇರ, ವಿಜ್ಞಾನ ಶಿಕ್ಷಕಿ ಲಕ್ಷ್ಮೀ ತಮ್ಮನಗೌಡರ, ಪತ್ತಿನ ಸಹಕಾರ ಸಂಘದ ತಾಲ್ಲೂಕು ಅಧ್ಯಕ್ಷರಾದ ಉದಯಕುಮಾರ ತಳವಾರ, ದ.ಕ. ಶಿ. ಸಂಘದ ಅಧ್ಯಕ್ಷರಾದ ಶಿವಾನಂದ ಹೊಸಮನಿ, ಶಿಕ್ಷಕರಾದ ವೀಣಾ ಕುಲಕರ್ಣಿ, ಕಾಶಿ ವಿಶ್ವನಾಥ , ಶಿದ್ಲಿಂಗೇಶ ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ📞 📞 ಕನ್ನಡ 9164386713
