ಲೋಕಕಲ್ಯಾಣಾರ್ಥಕವಾಗಿ ಅಯ್ಯಪ್ಪ ಮಾಲಧಾರಿಗಳಿಂದ ಪ್ರತಿ ಅಮಾವಾಸ್ಯೆ ಅನ್ನ ಸಂತರ್ಪಣೆ

ಕುಕುನೂರು ತಾಲೂಕಿನ ಶ್ರೀ ಮುಷ್ಟಿ ಕಲ್ಲೇಶ್ವರ ದೇವಸ್ಥಾನದಲ್ಲಿ, ಪಂಪಾ ಸನ್ನಿಧಾನ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳಿಂದ ಪ್ರತಿ ಅಮಾವಾಸ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಶ್ರೀ ಗುರು ಅಯ್ಯಪ್ಪ ಸ್ವಾಮಿ ಫೌಂಡೇಶನ್, ಪಂಪಾ ಸನ್ನಿಧಾನ ಕುಕುನೂರು ಮಾಲಾಧಾರಿಗಳಿಂದ ನೆರವೇರಿಸಿಕೊಂಡು ಬರುತ್ತಿದ್ದೇವೆ ಎಂದು ಬಸವರಾಜ ದಿವಟ್ಟರ ಹೇಳಿದರು.
ಕಳಕೇಶ ನಾಯಕ್ ಮಾತನಾಡಿ ಶ್ರೀ ಮುಷ್ಟಿ ಕಲ್ಲೇಶ್ವರನ ಒಂದು ಕೃಪಾ ಆಶೀರ್ವಾದದೊಂದಿಗೆ ನಮ್ಮ ಶ್ರೀ ಗುರು ಅಯ್ಯಪ್ಪ ಸ್ವಾಮಿ ಫೌಂಡೇಶನ್ ಪಂಪ ಸನ್ನಿಧಾನ ಎಲ್ಲಾ ಮಾಲಾಧಾರಿಗಳು ಕೂಡಿಕೊಂಡು ಪ್ರತಿ ಅಮವಾಸಿಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಬರುತ್ತಿದ್ದು, ಕುಕನೂರು ಪಟ್ಟಣ ಮತ್ತು ಸುತ್ತಮುತ್ತಲಿನ ಸದ್ಭಕ್ತರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ಮುಷ್ಟಿ ಕಲ್ಲೇಶ್ವರನ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಜಗತ್ತಿನಲ್ಲಿ ಶ್ರೇಷ್ಠವಾದ ದಾನಗಳಲ್ಲಿ ಅನ್ನ ಪ್ರಸಾದ ದಾನ ಶ್ರೇಷ್ಠವಾಗಿದೆ, ಆದ್ದರಿಂದ ಅನ್ನದಾನದಿಂದ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ, ಸೌಖ್ಯ ,ನೆಲಸುತ್ತದೆ. ಹಾಗೂ ಸರ್ವ ಜನಾಂಗ ಮತ್ತು ರೈತಪಿ ಕುಟುಂಬ ವರ್ಗದವರು ಪ್ರಾಣಿ ಪಕ್ಷಿಗಳು ಜೀವ ಸಂಕೋಲಗಳೆಲ್ಲ ಸುಭಿಕ್ಷವಾಗಿರಲಿ ಎಂದು ಲೋಕಕಲ್ಯಾಣಕ್ಕಾಗಿ ಈ ಒಂದು ಅನ್ನ ಸಂತರ್ಪಣ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಅಶೋಕ ಹಾದಿಮನಿ,ಬಸವರಾಜ ಅಡವಿ, ಶಶಿ ಭಜಂತ್ರಿ, ಪ್ರಕಾಶ ಬಾವಿಮನಿ, ಶರಣಪ್ಪ ಮೇಟಿ, ಮಂಜು ಭಜಂತ್ರಿ, ಸಿದ್ದು ನಿಡಗುಂದಿ, ನಿಂಗಪ್ಪ ಗೊರಲೆಕೊಪ್ಪ, ಗೋವಿಂದ ಇಟಗಿ, ಅಪ್ಪಣ್ಣ ಭಜಂತ್ರಿ, ವೀರೇಶ ಹಲವಾಗಲಿ, ಹಾಗೂ ಶ್ರೀ ಗುರು ಅಯ್ಯಪ್ಪ ಸ್ವಾಮಿ ಫೌಂಡೇಶನ್, ಪಂಪಾ ಸನ್ನಿಧಾನ ಮಾಲ ದಾರಿಗಳು, ಪಟ್ಟಣದ ಸಕಲ ಸದ್ಭಕ್ತಾದಿಗಳು ಇತರರು ಇದ್ದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713
