ಜ.26/27 ಬೈರನಾಯಕನಹಳ್ಳಿ, ಮಾರುತೇಶ್ವರ ಜಾತ್ರಾ ಮಹೋತ್ಸವ

ಕುಕನೂರು ತಾಲೂಕಿನ ಬೈರನಾಯಕನಹಳ್ಳಿಯ ಶ್ರೀ ಮಾರುತೇಶ್ವರ ಐದನೇ ವರ್ಷದ ರಥೋತ್ಸವದ ಕಾರ್ಯಕ್ರಮಗಳು ಜನೇವರಿ 26 ಸೋಮವಾರದಿಂದ ಪ್ರಾರಂಭಗೊಂಡು ಜನವರಿ 27 ಮಂಗಳವಾರ ರಥೋತ್ಸವದೊಂದಿಗೆ ಸಂಪನ್ನಗೊಳ್ಳುವುದು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕುಕನೂರು ತಾಲೂಕಿನ ಭೈರನಾಯಕನಹಳ್ಳಿಯಲ್ಲಿ ಶ್ರೀ ಮಾರುತೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 26 ದಂದು ಸಾಯಂಕಾಲ 4:00 ಗಂಟೆಗೆ ಶ್ರೀ ಮಾರುತೇಶ್ವರನಿಗೆ ಬ್ರಾಹ್ಮಣೋತ್ತಮರಿಂದ ಅಭಿಷೇಕ ಪೂಜೆ ನಡೆಯುತ್ತದೆ ಹಾಗೂ ಸಂಜೆ 6 ಗಂಟೆಗೆ ಅರ್ಚಕರವರ ಮನೆಯಿಂದ ಶ್ರೀ ಮಾರುತೇಶ್ವರನ ಆಭರಣಗಳ ಪೆಟ್ಟಿಗೆ ಹಾಗೂ ಬೆಳ್ಳಿ ಮೂರ್ತಿಯು ಶ್ರೀ ಮಾರುತೇಶ್ವರನ ದೇವಸ್ಥಾನಕ್ಕೆ ತರುವುದು. ರಾತ್ರಿ 8 ಗಂಟೆಗೆ ಗ್ರಾಮದ ಮಾಲಿಗೌಡರ ಮನೆಯಿಂದ ಗ್ರಾಮದ ಭಕ್ತಾದಿಗಳಿಂದ ಮೆರವಣಿಗೆ ಮೂಲಕ ಕಳಸ ತರುವುದು ಮತ್ತು ಕಳಸವನ್ನು ಗೋಪುರಕ್ಕೆ ಏರಿಸುವುದು ರಾತ್ರಿ 10:00 ಗಂಟೆಗೆ ಅಗ್ನಿಕುಂಡದಲ್ಲಿ ಅಗ್ನಿ ಸ್ಪರ್ಶ ಮದ್ದು ಸುಡುವುದು ನೆರವೇರುವುದು. ನಂತರ ಜಾತ್ರೆಗೆ ಬಂದ ಸರ್ವಭಕ್ತರಿಗೂ ಅನ್ನ ಸಂತರ್ಪಣೆ ನೆರವೇರುವುದು. ನಂತರ ಭಕ್ತಾದಿಗಳಿಂದ ಹರಕೆ ಸೇವೆ ಕಾರ್ಯಕ್ರಮಗಳು ನೆರವೇರುತ್ತವೆ.
ಹಾಗೂ ಜನವರಿ 27 ಸೋಮವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 4:00 ಗಂಟೆಗೆ ಶ್ರೀ ಮಾರುತೇಶ್ವರನ ಕಳಸಾರೋಹಣ ಪೊಲೀಸ್ ಪಾಟೀಲ್ ಮನೆವರಿಂದ ತರುವುದು 4: 30 ಗಂಟೆಗೆ ಶ್ರೀ ಮಾರುತೇಶ್ವರನ ದೇವಸ್ಥಾನದಿಂದ ಡೊಳ್ಳು, ಭಜನೆ, ಕಳಸ, ಕನ್ನಡಿ, ಬಾಜಾ ಭಜಂತ್ರಿ ಸಕಲ ವಾದ್ಯಗಳೊಂದಿಗೆ ದೈವದವರ ಸಂಗಡ ಮೆರವಣಿಗೆಯಿಂದ ದೇವರಕೋಣೆಗೆ ತಲುಪುವದು. ನಂತರ 5:00 ಗಂಟೆಗೆ ಗಂಗಾ ಪೂಜೆ 5:30 ಕ್ಕೆ ಪಾಯಸ ಪವಾಡ ನಂತರ ಅರ್ಚಕರ ಮನೆಯಿಂದ ಬರಿಬಾನ ತರುವುದು. ನಂತರ ಶ್ರೀ ಅಜ್ಜನವರು ಭಕ್ತರನ್ನು ಕರೆದುಕೊಂಡು ಅಗ್ನಿಕುಂಡದಲ್ಲಿ ಅಗ್ನಿ ಹಾಯುವರು. ನಂತರ 9 ಗಂಟೆಗೆ ಶ್ರೀ ಮಾರುತೇಶ್ವರನ ಉತ್ಸವಕ್ಕೆ ಹಿರೇಹಳ್ಳಿಯವರ ಮನೆಯಿಂದ ಎಡೆ (ನೈವೇದ್ಯ) ತರುವುದು. 10 ಗಂಟೆಗೆ ಮಾರುತೇಶ್ವರನ ಉತ್ಸವ ಎಳೆಯುವುದು. ಮಧ್ಯಾಹ್ನ 12 ಗಂಟೆಗೆ ಜಾತ್ರೆಗೆ ಆಗಮಿಸಿದ ಎಲ್ಲಾ ಸಕಲ ಸದ್ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮತ್ತು ಮಧ್ಯಾಹ್ನ 1:00 ಗಂಟೆಯಿಂದ ಸಾಯಂಕಾಲ 4:00 ವರೆಗೆ ಮುಂಗೈ ಆಟಗಳು ಜರುಗುವವು. ಹಾಗೂ ಮಂಗಳೂರು ಗ್ರಾಮದ ಭಕ್ತಾದಿಗಳು ಶ್ರೀ ಮಾರುತೇಶ್ವರನ ರಥೋತ್ಸವಕ್ಕೆ ಹಗ್ಗವನ್ನು ಭಕ್ತಿಯಿಂದ ಕೊಡಿಸಿರುತ್ತಾರೆ ಹಾಗೂ ನೆಲಜೇರಿ ಗ್ರಾಮದ ಭಕ್ತಾದಿಗಳಿಂದ ರುದ್ರಾಕ್ಷಿ ಸರ, ಮೆರವಣಿಗೆಯ ಮೂಲಕ ತರುವುದು. ಸಾಯಂಕಾಲ 5:30ಕ್ಕೆ ರಥೋತ್ಸವ ಜರಗುವುದು.
ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ, ವೀರಭದ್ರ ಮಹಾಸ್ವಾಮಿಗಳು ಸಾ/ ಅಂಕಲಿಮಠ, ಸಿದ್ದರಾಮಯ್ಯ ನೀಲಕಂಠಯ್ಯ ಸ್ವಾಮಿಗಳು ಹಿರೇಮಠ ಕುದುರೆಮೋತಿ, ಸಂಗಯ್ಯ ಶರಣಯ್ಯ ಸ್ವಾಮಿಗಳು ಹಿರೇಮಠ ಬೈರನಾಯಕನಹಳ್ಳಿ ವಹಿಸಿಕೊಳ್ಳುವರು.
ಶ್ರೀ ಮಾರುತೇಶ್ವರನ ಜಾತ್ರೆಗೆ ಆಗಮಿಸಿ ಸಕಲ ಸದ್ಭಕ್ತಾದಿಗಳು ಶ್ರೀ ಮಾರುತೇಶ್ವರನ ಕೃಪೆಗೆ ಪಾತ್ರರಾಗಿ ಎಂದು ಬೈರನಾಯಕನಹಳ್ಳಿಯ ಶ್ರೀ ಮಾರುತೇಶ್ವರ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ,ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713