ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಕರೆ:-ಜಾನ್ ಫಿಲಿಪ್ಸ್ 

 

ಕುಕುನೂರು ಪಟ್ಟಣದ ಟ್ರಿನಿಟಿ ಪ್ರಾಥಮಿಕ ಮತ್ತು ಶಾಲೆಯಲ್ಲಿ 2025- 26 ನೇ ಸಾಲಿನ ಉತ್ಕರ್ಷ ಶಾಲಾ ವಾರ್ಷಿಕೋತ್ಸವ ಪಟ್ಟಣದ ಪೊಲೀಸ್ ಸ್ಟೇಷನ್ ಹಿಂದಗಡೆ ಇರುವ ಶಾದಿ ಮಹಲ್ ನಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಟ್ರಿನಿಟಿ ಅಸೋಸಿಯನ್ ಕೊಪ್ಪಳ  ಜಾನ್ ಫಿಲಿಪ್ಸ್  ಮಾತನಾಡಿ ನಮ್ಮ ಸಮಾಜಕ್ಕೆ ಉತ್ತಮವಾದ ಪ್ರಜೆಗಳನ್ನು ನೀಡುವುದು ಟ್ರಿನಿಟಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಉದ್ದೇಶವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರು ಹೇಳುವ ಅಭ್ಯಾಸಗಳನ್ನು ಸರಿಯಾಗಿ ಅಭ್ಯಾಸ ಮಾಡಬೇಕು .ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರುವುದರ ಜೊತೆಗೆ, ಮನೆಯ ಹಿರಿಯರಿಗೂ ಹಾಗೂ ಎಲ್ಲರಿಗೂ ಗೌರವಗಳನ್ನು ಸಲ್ಲಿಸುವುದರೊಂದಿಗೆ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕಾಗಿದೆ ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ ಸಂಸ್ಕಾರಯುತ ಶಿಕ್ಷಣ ಕಲಿಸುವ ಕಾರ್ಯೋನ್ಮುಖರಾಗಬೇಕು. ಹಾಗೆ ಸಾಧಕರ ಸಾಧನೆಗಳನ್ನು ಮೈಗೊಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಶೀದಸಾಬ ಹಣಜಗೇರಿ ಶಾದಿ ಮಹಲ್ ಅಧ್ಯಕ್ಷರು ಮಾತನಾಡಿ ಇಂದಿನ ಸಮಾಜದಲ್ಲಿ ಶಾರೀರಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಹವ್ಯಾಸಗಳನ್ನು ಬೆಳೆಸುವ ಮೂಲಕ ಮಕ್ಕಳ ಮಾನಸಿಕ ದೃಢತೆಯನ್ನು ಬೆಳೆಸಬೇಕು ಎಂದು ಹೇಳಿದರು. ಉತ್ತಮವಾದ ಆಹಾರ ಪದ್ಧತಿಯನ್ನು ಬೆಳೆಸುವುದರೊಂದಿಗೆ ಯಾವುದಾದರೂ ಮಾನಸಿಕ ಸಮಸ್ಯೆಗಳು ಕಂಡುಬಂದರೆ ಅದರ ಬಗ್ಗೆ ಭಯಪಡಬೇಡಿ ಸರಿಯಾದ ಪರಿಹಾರ ಮಾರ್ಗವನ್ನು ಅನುಸರಿಸಬೇಕು. ಮಾನಸಿಕ ಒತ್ತಡದ ನಿವಾರಣೆಗೆ ಯೋಗವನ್ನು ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಶೋಕ ಪತ್ತಾರ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯಲಬುರ್ಗಾ ರವರು ಮಾತನಾಡಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಬೇಕು. ವಿದ್ಯೆ ಮನುಷ್ಯನನ್ನು ಬಾಳಿ ಬೆಳಸುತ್ತದೆ. ಎತ್ತರಕ್ಕೆ ಬೆಳೆದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ ಕೆ ಕಮ್ಮಾರ ಶಾಲಾ ವರದಿ ವಾಚಿಸಿದರು,

ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರಶಸ್ತಿ ನೀಡಲಾಯಿತು.ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಸಂದರ್ಭದಲ್ಲಿ

ರೂತ್ ಭವಾನಿ ಫಿಲಿಪ್ಸ್ ಮ್ಯಾನೇಜಮೆಂಟ್ ಟ್ರಿನಿಟಿ ಸ್ಕೂಲ್, ಸುರೇಂದ್ರಬಾಬು ಮ್ಯಾನೇಜ್ ಮೆಂಟ್ ಟ್ರಿನಿಟಿ ಸ್ಕೂಲ್, ಎಸ್ ಎಸ್ ಕೊಪ್ಪದ ನಿವೃತ್ತ ಮಹೇಶ ಅಸೂಟಿ ಶಿಕ್ಷಕರು ಎಲ್ ಪಿ ಎಸ್ ಅಂಬೇಡ್ಕರ್ ನಗರ, ರಾಧಾ ಸಿದ್ದಪ್ಪ ದೊಡ್ಮನಿ ಪಟ್ಟಣ ಪಂಚಾಯತ್ ಸದಸ್ಯರು, ಅಂಬರೀಶ್ ಮುಖ್ಯೋಪಾಧ್ಯಾಯರು, ಹಾಗೂ ಟ್ರಿನಿಟಿ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಹಾಗೂ ಶಾಲಾ ವಿದ್ಯಾರ್ಥಿ ವೃಂದ ಮತ್ತು ಪಾಲಕರು ಇಬ್ಬರು ಇದ್ದರು.

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ , ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ  ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *