ಅಂಬಿಗರ ಚೌಡಯ್ಯ 12ನೇ ಶತಮಾನದ ಶ್ರೇಷ್ಠ ಶರಣ:-ಶರಣಪ್ಪ ರಾೄವಣಕಿ
:
Fast news -ನಿರ್ಭಯ ದೃಷ್ಟಿ ನ್ಯೂಸ್*******
ಕುಕನೂರು- ಅಂಬಿಗರ ಚೌಡಯ್ಯನವರು ನೇರ ನುಡಿ ವಚನಕಾರರಾಗಿದ್ದರು. ಅವರ ಆದರ್ಶ ಮತ್ತು ತತ್ವ ಸಿದ್ದಾಂತ ಮನುಕುಲಕ್ಕೆ ಅನ್ವಯಿಸುತ್ತವೆ. ಯಾರನ್ನು ಮೇಲು-ಕೀಳು ಎನ್ನದೆ ಜಾತಿ-ಭೇದ ಮರೆತು ಎಲ್ಲರನ್ನು ದಡ ಸೇರಿಸುವ ಕಾಯಕವನ್ನು ಮಾಡಿದ್ದಾರೆ ಎಂದು ಶರಣಪ್ಪ ರಾೄವಣಕಿ ಹೇಳಿದರು.
ಕುಕುನೂರು ಪಟ್ಟಣದ ವಿನೋಭಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ, ತಾಲೂಕ ಪಂಚಾಯತ್ ಕುಕನೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ ಹಾಗು ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಎಫ್ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಬುಧುವಾರ ದಿನದಂದು ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪೂಜೆಯನ್ನು ಸಮರ್ಪಿಸಿ ಮಾತನಾಡಿದರು. ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ಅನೇಕ ಶಿವಶರಣರು ಸಮಾನತೆಗಾಗಿ ಶ್ರಮಿಸಿದ್ದಾರೆ. ಕಾಯಕ ನಿಷ್ಠೆಯ ಮತ್ತು ಪ್ರಾಮಾಣಿಕತನದಿಂದ ಜೀವನ ಸಾಗಿಸಿದ ಅಂಬಿಗರ ಚೌಡಯ್ಯ 12ನೇ ಶತಮಾನದ ಶ್ರೇಷ್ಠ ಶರಣರಾಗಿದ್ದರು ಎಂದರು.
ನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ತಮ್ಮ ಹರಿತವಾದ ವಚನಗಳ ಮೂಲಕ ಸಮಾಜದಲ್ಲಿ ಜಾತಿ ಪದ್ಧತಿ ತೊಡೆದು ಹಾಕಲು ಶ್ರಮಿಸಿದ ಮಹಾಪುರುಷರಾಗಿದ್ದಾರೆ. ಚೌಡಯ್ಯನವರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಜೊತೆಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು ಶಿಕ್ಷಣವೇ ಶಕ್ತಿ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ರಾೄವಣಕಿ ಮುಖ್ಯೋಪಾಧ್ಯಾಯರು, ಮರ್ದನ್ ಸಾಬ್ ಎಸ್ ಡಿ ಎಂ ಸಿ ಅಧ್ಯಕ್ಷರು, ಪಾರ್ವತಿ ಹನಸಿ ಎಸ್ ಡಿ ಎಂ ಸಿ ಉಪಾಧ್ಯಕ್ಷರು, ವೀರನಗೌಡ ನಿವೃತ್ತ ಶಿಕ್ಷಕರು, ಸತೀಶ್ ಮಾಲಿಪಾಟೀಲ್ ನಿವೃತ್ತ ಶಿಕ್ಷಕರು, ಈರಣ್ಣ ಕೊನಾರಿ, ಪೀರ್ ಸಾಬ್ ದಪೇದಾರ ಸಿಆರ್‌ಪಿ, ಮೈಬೂಬ್ ಗುಡಿಹಿಂದಲ್, ಪ್ರಭು ಶಿವನಗೌಡ, ಶಾಂತದೇವಿ ಹಿರೇಮಠ, ಶಶಿಕಲ ಟಿ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಮಹೇಶ ಅಸೂಟಿ,ರಾಜಶೇಖರ ಹಿರೇಮಠ , ರವಿ, ವಿಜಯ ನೆರೆಗಲ್, ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಇತರರು ಇದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713