ಅಡ್ನೂರ-ರಾಜೂರ-ಗದಗ ಶ್ರೀ ಬೃಹನ್ಮಠ ಲಿಂಗೈಕ ಪಂಚಾಕ್ಷರ ಶಿವಾಚಾರ್ಯರ ಶಿಕ್ಷಣ ಕ್ಷೇತ್ರದಲ್ಲಿ ಮಠಗಳ ಕೊಡುಗೆ ಅಪಾರ

ನಿರ್ಭಯ ದೃಷ್ಟಿ ನ್ಯೂಸ್ ವಿಶೇಷ ಸುದ್ದಿ*******
ಕುಕನೂರು:- ಯಾವುದೇ ಜಾತಿಬೇಧವಿಲ್ಲದೆ ಸರ್ವರಿಗೂ ಶಿಕ್ಷಣ ನೀಡುವ ಮೂಲಕ ಅಕ್ಷರ ದಾಸೋಹದಲ್ಲಿ ತೊಡಗಿರುವ ಮಠಗಳು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದು ಕುಕನೂರು ತಾಲೂಕಿನ ಯಡೆಯಾಪುರ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಬಸವರಾಜ್ ಅಂಗಡಿ ಹೇಳಿದರು.
ರಾಜೂರ-ಅಡ್ನೂರು-ಗದಗ ಪರಮ ಪೂಜ್ಯ ಲಿಂಗೈಕ ಶ್ರೀ ಮದ್ಘನಲಿಂಗ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಅಡ್ನೂರ-ರಾಜೂರ-ಗದಗ ಪೂಜ್ಯರು ಶಿಕ್ಷಣ ಪ್ರೇಮಿಗಳು ಆಗಿದ್ದರು.
ಈಗಿನ ಪರಮ ಪೂಜ್ಯರಾದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗಕೈ ಪೂಜ್ಯರ ಶಿಲಾಮಠ(ಶ್ರೀ ಬೃಹನ್ಮಠ)ವನ್ನು ನಿರ್ಮಿಸಿ ಯಾವುದೇ ಜಾತಿ ಭೇದವಿಲ್ಲದೆ ಸರ್ವರಿಗೂ ಶಿಕ್ಷಣ ನೀಡುವ ಮೂಲಕ ಅಕ್ಷರ ದಾಸೋಹದಲ್ಲಿ ತೊಡಗಿರುವ ಮಠಗಳು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ ಅಂತಹ ಕಾರ್ಯವನ್ನು ಕುಕನೂರು ಮತ್ತು ಯಲಬುರ್ಗಾ ಉಭಯ ತಾಲೂಕುಗಳಲ್ಲಿ 40 ಸರಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಪ್ರೋತ್ಸಾಹ ಮತ್ತು ಬಹುಮಾನವಾಗಿ “ಪಂಚಾಕ್ಷರ ಪ್ರಸಾದ ಸ್ಥಿರ ದತ್ತಿ ನಿಧಿ”ಎಂದು ಐದು ಸಾವಿರ ರೂಪಾಯಿಗಳ ಸ್ಥಿರ ಠೇವಣಿ ಮಾಡಿ ಬಂದ ಬಡ್ಡಿ ಹಣವನ್ನು ಆ ಶಾಲೆಯಲ್ಲಿ ವಿದ್ಯಾರ್ಥಿಗೆ ಬಹುಮಾನವಾಗಿ ಆಶೀರ್ವದಿಸುತ್ತಿದ್ದು ಗದಗ ಜಿಲ್ಲೆಯಲ್ಲಿಯೂ 40 ಸರಕಾರಿ ಪ್ರೌಢ ಶಾಲೆಗಳಿಗೆ ಸ್ಥಿರ ಠೇವಣಿಯನ್ನು ಒಟ್ಟು 80 ಶಾಲೆಗಳಿಗೆ ನೀಡುತ್ತಿದ್ದು ವಿದ್ಯಾರ್ಥಿಗಳು ಇನ್ನು ಎತ್ತರ ಮಟ್ಟ ಬೆಳೆಯಲು ಪ್ರೇರೇಪಿಸಿದಂತಾಗುತ್ತದೆ ಸಧೃಢ ಭಾರತಕ್ಕಾಗಿ ಯುವ ಸಮೂಹದಲ್ಲಿ ಮಠಗಳು ಸ್ಪೂರ್ತಿ ಅಭಿನವ ಪಂಚಾಕ್ಷರ ಶಿವಾಚಾರ್ಯರ ಮಠ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದರು.
ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮಕ್ಕಳು ದೇಶದ ಭವಿಷ್ಯವನ್ನ ರೂಪಿಸುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನು ಗಮನದಲ್ಲಿ ಇಟ್ಟುಕೊಂಡು ಆಲಿಸಿ ಅರ್ಥೈಸಿಕೊಂಡು ಪರೀಕ್ಷೆಗಳನ್ನು ಬರೆದು ತಮ್ಮ ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಗುರು ಹಿರಿಯರಲ್ಲಿ ಪೂಜ್ಯನೀಯ ಭಾವನೆಯನ್ನು ಇಟ್ಟುಕೊಂಡು ಗೌರವ ನೀಡಿದಾಗ ಜೀವನದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯಡಿಯಾಪುರ ಗ್ರಾಮದ ಗುರು ಹಿರಿಯರು ಶ್ರೀಗಳನ್ನು ಸನ್ಮಾನಿಸಿದರು.
ಸಂದರ್ಭದಲ್ಲಿ ರಾಮಪ್ಪ ಹಂಚಿನಾಳ ಎಸ್ ಡಿ ಎಂ ಸಿ ಅಧ್ಯಕ್ಷರು, ಶಂಕ್ರಪ್ಪ ತಳಕಲ್ ನಿವೃತ್ತ ಶಿಕ್ಷಕರು, ಕರಿಯಪ್ಪ ಕುರುಬಟ್ಟ ಹಾಗೂ ಗ್ರಾಮದ ಗುರು ಹಿರಿಯರು ಇತರರು ಇದ್ದರು.
ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713