*ಚಂದಾ ಎತ್ತಿ ನಡೆಸುವ ದೇವಸ್ಥಾನ ಹಾಗೂ ಸಮಾಜದ ಕಾರ್ಯಕ್ರಮ ಎಂದು ಯಶಸ್ವಿಯಾಗುವುದಿಲ್ಲಾ,,! ಕೆ. ಪಿ ನಂಜುಂಡಿ,,*

 *ಕುಕನೂರು* : ಸಮಾಜದಲ್ಲಿ ಚಂದಾ ಎತ್ತಿ ನಡೆಸುವ ದೇವಸ್ಥಾನಗಳು ಹಾಗೂ ಸಮಾಜ ಕಾರ್ಯಕ್ರಮಗಳು ಎಂದು ಯಶಸ್ವಿಯಾಗಲು ಸಾಧ್ಯವಿಲ್ಲಾ ಎಂದು ಬೆಂಗಳೂರು ಅಖಿಲ ಕರ್ನಾಟಕ ಮಹಾಸಭಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪಿ ನಂಜುಂಡಿ ಹೇಳಿದರು.

ಅವರು ಪಟ್ಟಣದ ಮೌನೇಶ್ವರ ದೇವಸ್ಥಾನದಲ್ಲಿ ತಾಲೂಕ ಆಡಳಿತ ಕುಕನೂರು ಇವರ ಸಂಯುಕ್ತಾಶ್ರಯದಲ್ಲಿ ಅಮರ ಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ ಹಾಗೂ ಶ್ರೀ ಮೌನೇಶ್ವರ ಲಿಂಗು ಪ್ರತಿಷ್ಠಾನೆಯ 24ನೇ ವಾರ್ಷಿಕೋತ್ಸವ ಹಾಗೂ ಉಚಿತ ಉಪನಯನ ಮತ್ತು ಪಂಚ ಲೋಹದ ಮೌನೇಶ್ವರ ಮೂರ್ತಿ ಮೆರವಣಿಗೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮನ್ನು ನಾವು ಮರೆತು ಸಮಾಜಕ್ಕೆ ಸೇವೆ ಮಾಡಬೇಕು, ವಿಚಾರ ಮಾಡಿ ಸೇವೆ ಮಾಡಿದಾಗ ಅದು ವ್ಯಾಪಾರಿಕರಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಸ್ವ ಹಿತಾಸಕ್ತಿಯಿಂದ ತನು, ಮನ, ಧನದಿಂದ ಸಮಾಜ ಸೇವೆ ಮಾಡಿ ಎಂದು ಕರೆ ನೀಡಿದರು.

ರಾಜಕೀಯ ಶಕ್ತಿಗಳನ್ನು ಮೀರಿ ಸರಕಾರಿ ಕೆಲಸ ಕೊಡಿಸಲು ನಮ್ಮ ಸಮಾಜದಿಂದ ಸಾಧ್ಯವಿಲ್ಲಾ, ಮೀಸಲಾತಿ ಸಿಕ್ಕಾಗ ಮಾತ್ರ ನಮ್ಮ ಸಮಾಜದ ಜನ ಎಲ್ಲಾ ರಂಗದಲ್ಲೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಸಮಾಜಗಳ ಬಗ್ಗೆ ಗೊತ್ತಿದ್ದರೇ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯ ಇಪ್ಪತ್ತು ವರ್ಷಗಳಾದರು ನಮ್ಮ ಸಮಾಜದ ಯುವಕರು ಓದಲಾಗುತ್ತಿಲ್ಲಾ, ಕಾರಣ ಮೀಸಲಾತಿ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದವರು ಎಂದು ಮೂರು ಭಾಗಗಳಾಗಿ ಹಂಚಿ ನಮ್ಮನ್ನೆಲ್ಲಾ ಹಿಂದುಳಿಸಿದ್ದಾರೆ.

1977ರಲ್ಲಿ ಹಾವನೂರು ಆಯೋಗದಲ್ಲಿ ಸರಕಾರದ ದೃಷ್ಠಿಯಲ್ಲಿ ನಾವು ದೂರ ಉಳಿದಿದ್ದೇವೆ. ನಮ್ಮವರು ಆಗ ಆಯೋಗದ ಹತ್ತಿರ ಹೋಗದೇ ಇದ್ದ ಕಾರಣ ನಮ್ಮ ಸಮಾಜದವರನ್ನು ಹಿಂದುಳಿದ ವರ್ಗದವರಲ್ಲಿ ಹಾಕಿದ್ದಾರೆ. ನಮ್ಮ ಮೂಲ ಗುಡ್ಡಗಾಡು ವಾಸ, ನಮ್ಮಲ್ಲಿ ಕಮ್ಮಾರರು ಸಹಿತ 77ರಲ್ಲಿ ಎಸ್ಟಿನಲ್ಲಿ ಹಾಕಿದ್ದಾರೆ. ಎಸ್.ಸಿ. ಎಸ್ಟಿ, ಎಸ್. ಸಿ . ಒಬಿಸಿ ಬೇರೆ. 102ಜಾತಿ ಇದ್ದರೇ. ಕುರುಬ ಸಮಾಜ ಹಿಂದುಳಿದ ವರ್ಗದಲ್ಲಿ ಬಲಿಷ್ಠ ಸಮಾಜ ಆದರೆ ಲೆಕ್ಕ ಹಾಕಿದರೇ ನಮ್ಮ ಸಮಾಜ ಪಾತಾಳದಲ್ಲಿದೆ. ಭಾರತ ಸರಕಾರದ ಆದೇಶದ ಪ್ರಕಾರ ನಾವು ಬ್ರಾಹ್ಮಣರಲ್ಲಾ ಅವರಕ್ಕಿಂತ ಶ್ರೇಷ್ಠರು ನಾವು, ಈ ನಾಗರಿಕತೆಯ ಮೂಲ ನಮ್ಮ ವಿಶ್ವಕರ್ಮರು ಎಂದು ಹೆಮ್ಮೆಯಿಂದ ಹೇಳಿದರು.

ಇಪ್ಪತ್ತು ವರ್ಷದಿಂದ ಏನು ಭಾಷಣ ಮಾಡುತ್ತಿದ್ದೇವೋ ಅದನ್ನು ಮಾಡಿದರೇ ಉಪಯೋಗವಿಲ್ಲಾ, ಆದರೆ ನಮ್ಮ ಭಾಷಣ ಸಮಯಕ್ಕೆ ತಕ್ಕಂತೆ ಇರಬೇಕು, ನಮ್ಮ ಜಿಲ್ಲೆಯಲ್ಲಿರುವ ಲಿಂಗನಬಂಡಿಯಲ್ಲಿರುವ ದೇವಸ್ಥಾನಕ್ಕೆ ಮುಕ್ತಿ ಸಿಕ್ಕಿದೆಯಾ ಎಂದು ಪ್ರಶ್ನಿಸಿದರು. ಇಲ್ಲಿಯವರೆ ಆದರೂ ವರವಿ, ಸಿರಸಂಗಿ, ಗೋನಾಳ ತಿಂತಣಿ ದೆವಸ್ಥಾನಗಳು ಏನು ಜಿರ್ಣೋದ್ದಾರ ಕಂಡಿವೆ ಎನ್ನುವ ಬಗ್ಗೆ ಆತ್ಮಾವಲೋಕನವಾಗಬೇಕು, ಯುವಕರು ಮೊದಲು ಜಾಗೃತರಾಗಿ ಸಮಾಜ ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದರು.

ನಂತರ ಹುಬ್ಬಳ್ಳಿ ಧಾರವಾಡ ಪಾಲಿಕೆ ಮಾಜಿ ಮೇಯರ್ ರಾಮಣ್ಣ ಬಡಗೇರ ಮಾತನಾಡಿ ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಲು ನಮ್ಮ ಸಮಾಜ ಮೊದಲು ಸಂಘಟಿತರಾಗಬೇಕು, ನಮ್ಮ ಸಮಾಜ ಬಲಿಷ್ಠರಾಗಲು ಕೆ. ಪಿ ನಂಜುಂಡಿಯವರ ಶ್ರಮ ಸಾಕಷ್ಟಿದ್ದು, ಅವರು ನಮ್ಮನ್ನೆಲ್ಲಾ ಕರೆದುಕೊಂಡು ಸಾಗತ್ತಾ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ತಾಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಭಾಗಿಯಾಗಿ ಮಾತನಾಡಿ ಸ್ವಾಭಿಮಾನದಿಂದ ಸಮಾಜದವರು ನಡೆದಾಗ ಮಾತ್ರ ಸಮಾಜವು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ವೇಳೆ ಗಂಗಾವತಿ ಸಹಕಾರ ರತ್ನ ಪುರಸ್ಕೃತ ನಾಗಲಿಂಗಪ್ಪ ಪತ್ತಾರ ನಮ್ಮ ಸಮಾಜ ಸಂಘಟಿತರಾದಾಗ ಮಾತ್ರ ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ನಿವೃತ್ತ ಶಿಕ್ಷಕ ಕೆ.ಎಸ್ ಪತ್ತಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 51 ಕುಂಭದೊಂದಿಗೆ ನೂತನ ಮೌನೇಶ್ವರ ಪಂಚಲೋಹದ ಮೂರ್ತಿ ಮೆರವಣಿಗೆ 9 ಓಟುಗಳಿಗೆ ಮುಂಜಿ ಹಾಗೂ ಬೈಕ್ ರ್ಯಾಲಿ ನಡೆಯಿತು.

ಕಾರ್ಯಕ್ರಮದ ವೇದಿಕೆ ಸಾನಿಧ್ಯವನ್ನು ಲೇಬಗೇರಿ ನಾಗಮೂರ್ತಿ ಸ್ವಾಮೀಗಳು, ದಿವಾಕರ ಸ್ವಾಮಿಗಳು, ಗುರಪ್ಪಯ್ಯ ಸ್ವಾಮಿಗಳು, ಹರ್ಲಾಪೂರ ಮುತ್ತಪ್ಪಜ್ಜನವರು, ನಾಗಲಿಂಗ ಮಹಾಸ್ವಾಮಿಗಳು ಲೇಬಗೇರಿ, ಶ್ರೀಕಂಠ ಆಚಾರ್, ವಹಿಸಿದ್ದರು. 

ಅಧ್ಯಕ್ಷತೆಯನ್ನು ಮಾನಪ್ಪ ಅರ್ಕಸಾಲಿ ವಹಿಸಿದ್ದರು. ಈ ಸಂದರ್ಭದಲ್ಲಿ ಅಶೋಕ ಬಡಿಗೇರ, ಅಮರೇಶ ಪತ್ತಾರ, ನಿಂಗಪ್ಪ ಡಿ. ಬಡಿಗೇರ ತಳಕಲ್, ಖಾಸಿಂಸಾಬ ತಳಕಲ್, ಮಹಾದೇವಪ್ಪ ಕಮ್ಮಾರ, ಅಶೋಕ ಪತ್ತಾರ, ಶರಣಪ್ಪ ಬಡಿಗೇರ, ಕಾಳೇಶ ಬಡಿಗೇರ, ರತ್ನಮ್ಮ ಬಡಿಗೇರ, ವಿರೇಶ ಪತ್ತಾರ, ಮಂಜುನಾಥ ಬನ್ನಿಕೊಪ್ಪ, ಬಸನಗೌಡ ಮಾಲಿಪಾಟೀಲ್, ಮುರಳಿಧರ ಕುಲಕರ್ಣಿ, ಈರಣ್ಣ ಬಡಿಗೇರ್, ಸೇರಿದಂತೆ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಮುಖಂಡರು ಇದ್ದರು.


 

ನಾವು ಐದುನೂರು ಕಿ. ಮೀ ದೂರದಿಂದ ಬಂದಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಇದರಲ್ಲಿ ಆಯೋಜಿಸಿರುವ ಸಂದೇಶಗಳನ್ನು ಮೊದಲು ತಿಳಿದುಕೋಳ್ಳಬೇಕು. ಅದಕ್ಕೆ ರಾಯರಡ್ಡಿಯವರು ಇಂತಹ ಕಾರ್ಯಕ್ರಮಕ್ಕೆ ಬರುವುದಿಲ್ಲಾ, ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಜನ ಕಾರ್ಯಕ್ರಮ ವಿಕ್ಷೀಸಿ ಅದರ ಸಂದೇಶ ತಿಳಿದುಕೊಂಡಾಗ ಮಾತ್ರ ಸಂಘಟನೆ ಮಾಡಿದ ಕಾರ್ಯಕ್ರಮ ಸಾರ್ಥಕವಾಗುತ್ತದೆ.

 *ಕೆ. ಪಿ ನಂಜುಂಡಿ ಅಧ್ಯಕ್ಷರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ.*


 

ವಿಶ್ವಕರ್ಮ ನಾಡಿಗೆ ಸಾಕಷ್ಟು ಕೊಡುಗೆ ಕೊಟ್ಟ ಸಮಾಜವಾದರು ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಇದು ನಮ್ಮ ಮುಂದಿನ ಪೀಳಿಗೆಗೆ ಮಾರಕವಾಗಿದ್ದು, ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಬಲಿಷ್ಠರನ್ನಾಗಿ ಮಾಡಿದಾಗ ಮಾತ್ರ ನಮ್ಮ ಸಮಾಜದ ಜನ ಎಲ್ಲಾ ರಂಗಗಳಲ್ಲೂ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ. 

ನಮ್ಮ ಸಮಾಜದಲ್ಲಿ ಶಿಕ್ಷಣವಂತರು ಸಮಾಜದ ಜನರನ್ನು ಕೈಹಿಡಿದು ನಡೆಸಿದಾಗ ಮಾತ್ರ ಸಮಾಜ ಅಭಿವೃದ್ದಿಯಾಗಲು ಸಹಕಾರಿಯಾಗುತ್ತದೆ. 

ಜಕಣಾಚಾರಿಯವರ ಸಾವಿರಾರು ವರ್ಷಗಳ ಇತಿಹಾಸವಿರುವ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಕಾರಣ ಅವರ ಶಿಲ್ಪ ಕಲೆ ಇಂದಿಗೂ ಕೂಡಾ ಪ್ರಸ್ತುತವಾಗಿದ್ದು, ಅದರಂತೆ ನಮ್ಮ ಸಮಾಜದ ಜನ ಅಚ್ಚಳಿಯದೇ ಉಳಿಯುವ ಕೆಲಸ ಮಾಡಬೇಕು.

 *ಕೊಪ್ಪಳ ವಿಶ್ವಕರ್ಮ ಸಮುದಾಯಾಭಿವೃದ್ದಿ ನಿಗಮ ನಾಮ ನಿರ್ದೇಶಕರು, ಜಿಲ್ಲಾ ಸಮಾಜ ಉಪಾಧ್ಯಕ್ಷ ದೇವೇಂದ್ರ ಬಡಿಗೇರ.*

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *