ಪ್ರತಿಭೆ ಬೆಳಗಲು ಪುಸ್ತಕ ಅಧ್ಯಯನ ಅವಶ್ಯ:ಅಶೋಕ ಗೌಡರ್

Breaking news:-ನಿರ್ಭಯ ದೃಷ್ಟಿ ನ್ಯೂಸ್-

ಕುಕನೂರು :- ಕರ್ನಾಟಕ ಸರ್ಕಾರದ “ಪ್ರಾಚ್ಯ ಪ್ರಜ್ಞೆ” ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು 2025-26 ನೇ ಸಾಲಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ* *ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದು ಕೊಪ್ಪಳ ಜಿಲ್ಲೆಗೆ ಕೀರ್ತಿಯನ್ನು ತಂದ ಕುಕನೂರು ತಾಲೂಕು ಮಂಗಳೂರು ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ಪೂರ್ತಿ ಹನುಮಂತಪ್ಪ ಉಪ್ಪಾರಳಿಗೆ ತಾಲೂಕು ಶಿಕ್ಷಣ ಇಲಾಖೆಯ ವತಿಯಿಂದ ಇಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಅಶೋಕ್ ಗೌಡರ ಶಾಲೆಗೆ ಆಗಮಿಸಿ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿ ನಾವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ಸತತವಾಗಿ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಪುಸ್ತಕ ಓದಿನಿಂದ ಜ್ಞಾನ ವಿಕಾಸಕೊಳ್ಳುತ್ತದೆ. ಶ್ರದ್ಧೆ ತಾಳ್ಮೆ ಛಲದಿಂದ ಪುಸ್ತಕ ಓದಿದ ಸ್ಪೂರ್ತಿ ಇಂದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಆದ್ದರಿಂದ ತಾವುಗಳೆಲ್ಲ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನವನ್ನು ಗಳಿಸಿಕೊಂಡು ಬದುಕಿನಲ್ಲಿ ಧ್ರುವತಾರೆಗಳಂತೆ ಬೆಳಗಬೇಕೆಂದು ವಿದ್ಯಾರ್ಥಿಗಳಿಗೆ ಅಶೋಕ್ ಗೌಡರ್ ಕರೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಭಾಷಣ ರಸಪ್ರಶ್ನೆ ಪ್ರಬಂಧ ಹಾಡು ನೃತ್ಯ ಕ್ಲೇ ಮಾಡ್ಲಿಂಗ್ ಚಿತ್ರಕಲೆ ವಿಜ್ಞಾನ ಮಾದರಿ ತಯಾರಿಕೆ ಹೀಗೆ ಇತ್ಯಾದಿ ಕ್ಷೇತ್ರಗಳಲ್ಲಿ ಬೆಳೆಯಲು ಸರಕಾರದಿಂದ ಇಂದು ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳು ಮುಕ್ತವಾಗಿವೆ. ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳಗುವಂತಾಗಬೇಕೆಂದು ಬಿ ಆರ್ ಪಿ ಗಳಾದ ಶ್ರೀ ಶಿವಪ್ಪ ಉಪ್ಪಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಉಪ ಪ್ರಾಚಾರ್ಯರಾದ ಹನುಮಂತಪ್ಪ, ಸಹಶಿಕ್ಷಕರಾದ ಮಾರುತಿ ಬನ್ನಿಗೋಳ, ಕಳಕಯ್ಯ, ಫಯಾಜ್ ಶೇಕ್, ಜಾವೇದ್ ಪಾಷ,ವಿದ್ಯಾರ್ಥಿಯ ಪಾಲಕರದ ಹನುಮಂತಪ್ಪ ಉಪ್ಪಾರ, ವಿಜ್ಞಾನ ಸಹಾಯಕರಾದ ಬಸವರಾಜ್ ಪಟ್ಟಣಶೆಟ್ಟಿ, ಬಾಲಕಿಯರ ಪ್ರೌಢಶಾಲೆಯ ಎಫ್ ಡಿ ಸಿ ಬಸವರಾಜ ಹಾಗೂ ಕೆಪಿಎಸ್ ಮತ್ತು ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಸುದ್ದಿ ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *