*ಸಾವಿರಾರು ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ಜರುಗಿದ,,! ಗುದ್ನೇಶ್ವರ ಸ್ವಾಮಿ ಪಂಚ ಕಳಸ ಮಹಾ ರಥೋತ್ಸವ,,*

*Breaking news:- ನಿರ್ಭಯ ದೃಷ್ಟಿ ನ್ಯೂಸ್*
ಕುಕನೂರು : ಪಟ್ಟಣದ ಗುದ್ನೇಶ್ವರ ಸ್ವಾಮಿಯ (ರುದ್ರಮುನೀಶ್ವರ) ಪಂಚ ಕಳಸ ಮಹಾ ರಥೋತ್ಸವವು ಗುರುವಾರ ಸಾಯಂಕಾಲ 04ಗಂಟೆಗೆ ತಾಲೂಕಿನ ಬಿನ್ನಾಳ ಬಸವೇಶ್ವರನ ನಂದಿಕೋಲ ಆಗಮನದ ನಂತರ ನೆರೆದ ಸಾವಿರಾರು ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಂದು ಬೆಳಗ್ಗೆಯಿಂದ ಗುದ್ನೇಶ್ವರ ದೇವಸ್ಥಾನದಲ್ಲಿ ವಿಷೇಶ ಪೂಜೆ, ಅಭಿಷೇಕ ಕಾರ್ಯಕ್ರಮಗಳು ಜರುಗಿದವು.
ಜಾತ್ರೋತ್ಸವದ ಅಂಗವಾಗಿ ಪರ ಗ್ರಾಮದ ಭಕ್ತಾಧಿಗಳ ದಂಡು ಆಗಮಿಸಿ ಬಿಡಾರ ಹೂಡಿದ್ದು, ಸ್ವಾಮಿಯ ದೇವಸ್ಥಾನದಲ್ಲಿ ತಮ್ಮ, ಹರಕೆ ಇಷ್ಟಾರ್ಥಗಳನ್ನು ಪೂರೈಸುತ್ತಿರುವುದು ಹಾಗೂ ಹಣ್ಣು, ಕಾಯಿ, ಕರ್ಪೂರ ಮಾಡಿಸಲು ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾಯ್ದು ನಿಂತು ಸ್ವಾಮಿಯ ದರ್ಶನಾಶಿರ್ವಾದ ಪಡೆದರು.
ಜಾತ್ರೆಗೆ ಪರ ಸ್ಥಳಗಳಿಂದ ಭಕ್ತಾಧಿಗಳು ಟ್ರ್ಯಾಕ್ಟರ್, ಟಾಟಾ ಎಸಿ, ಟಂ ಟಂ, ಕಾರು, ಜೋಡೆತ್ತಿನ ಬಂಡಿ, ಆಟೋ, ಬೈಕ್ ಗಳಲ್ಲಿ ಜಾತ್ರೆಗೆ ನಾ ಮುಂದು, ತಾ ಮುಂದು ಎಂದು ಹೋಗುತ್ತಿರುವುದು ಕಂಡು ಬಂದಿತು.
ಜಾತ್ರೋತ್ಸವದಲ್ಲಿ ಪಟ್ಟಣ ಪಂಚಾಯತಿ,
ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆಯವರು, ಗುದ್ನೇಪ್ಪನಮಠದ ಸ್ಥಳೀಯ ಯುವಕರು, ಮುಖಂಡರು ಜಾತ್ರೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರಮಿಸುವುದು ಕಂಡು ಬಂದಿತು.
ಸಾಯಂಕಾಲ 04ಗಂಟೆಯಾಗುತ್ತಿದ್ದಂತೆ ಬಿನ್ನಾಳ ಬಸವೇಶ್ವರನ ನಂದಿಕೋಲ ಆಗಮನವಾಗುತ್ತಿದ್ದಂತೆಎತ್ತ ನೋಡಿದರೂ ಜನ ಸಾಗರ ಕಿಕ್ಕಿರಿದು ನಿಂತು ರಥೋತ್ಸವದಲ್ಲಿ ಭಾಗಿಯಾಗಿ ಅದ್ದೂರಿ ಜಯಘೋಷದೊಂದಿಗೆ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮರೆದರು, ಜಾತ್ರೋತ್ಸವದಲ್ಲಿ ಯಾವುದೇ ಅವಘಡಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಕುಕನೂರು ಠಾಣೆಯ ಪಿಎಸ್ಐ ಟಿ. ಗುರುರಾಜ್ ಬೀಗಿ ಪೋಲಿಸ್ ಬಂದೋಬಸ್ತ್ ನಿಯೋಜನೆಗೊಳಿಸಿದ್ದರು.
ಜಾತ್ರೋತ್ಸವದಲ್ಲಿ ವಿವಿಧ ಬಗೆಯ ಮಕ್ಕಳ ಆಟದ ಸಾಮಾನಿನ ಅಂಗಡಿ, ಬಳೆ ಅಂಗಡಿ, ಮೀಠಾಯಿ ಅಂಗಡಿ, ಜೋಕಾಲಿ, ಬಟ್ಟೆ ಬರೆ, ಜ್ಯೂಸ್, ಗೋಬಿ ಅಂಗಡಿಗಳಂತು ಸಾವಿರಾರು ಜನರು ಕಿಕ್ಕಿರಿದು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿತು, ಒಟ್ಟಾರೇ ಹದಿನೈದು ದಿನಗಳ ಕಾಲ ಗುದ್ನೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ.
*ಮಠದಲ್ಲಿ ಅನ್ನ ಸಂತರ್ಪಣೆ :* ಗುದ್ನೇಶ್ವರ ಸ್ವಾಮಿ ಮಠದ, ನೀಲಗುಂದ ಮಠದ ಪ್ರಭುಲಿಂಗ ದೇವರು ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಪ್ರತಿ ವರ್ಷ ಅನ್ನ ಸಂತರ್ಪಣೆ ನಡೆಸುತ್ತಿರುವುದು ವಿಶೇಷವಾಗಿದ್ದು, ಪ್ರತಿಯೊಬ್ಬ ಭಕ್ತಾಧಿಗಳು ಪ್ರಭುಲಿಂಗ ದೇವರ ದರ್ಶನ ಆಶಿರ್ವಾದ ಪಡೆದು ಪುನಿತರಾಗುವುದು ಕಂಡು ಬಂದಿತು.
ಈ ಜಾತ್ರೋತ್ಸವದ ಇನ್ನೊಂದು ವಿಶೇಷತೆ ಮದುವೆಯಾದ ನೂತನ ದಂಪತಿಗಳು ಈ ಪಂಚ ಕಳಸದ ತೇರಿಗೆ ಬಂದು ಉತ್ತತ್ತಿ ಬಾಳೆ ಹಣ್ಣು ಸಮರ್ಪಿಸಿ, ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರೇ ಬರುವ ವರ್ಷದಲ್ಲಿ ಖಂಡಿತ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವದಂತು ಸತ್ಯ.
ಸುದ್ದಿ ಜಾಹಿರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713