ನೂತನ ಎಸ್ ಡಿ ಎಂ ಸಿ ರಚನೆ:

Breaking news:-ನಿರ್ಭಯ ದೃಷ್ಟಿ ನ್ಯೂಸ್-
ಕುಕನೂರ: ತಾಲೂಕಿನ ಮಂಗಳೂರ ಗ್ರಾಮದ ಕೆಪಿಎಸ್ ಪಾಥಮಿಕ, ಪ್ರೌಡ ಹಾಗೂ ಕಾಲೇಜ್ ವಿಭಾಗದ ಶಾಲಾಭಿವೃಧ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಯಿತು.
ಬುಧವಾರ ನಡೆದ ಸಭೆಯಲ್ಲಿವಿದ್ಯಾರ್ಥಿಗಳ ಪಾಲಕರು, ಮಾಜಿ ಎಸ್ ಡಿಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು. ಗ್ರಾಮ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃಧ್ದಿ ಅಧಿಕಾರಿ, ಸದಸ್ಯರು, ಗ್ರಾಮದ ಮುಖಂಡರು ಇವರ ಸಮ್ಮುಖದಲ್ಲಿ ಎಲ್ಲರ ಒಪ್ಪಿಗೆಯ ಮೇರೆಗೆ ಎಸ್ ಡಿಎಮ್ ಸಿ ರಚನೆ ಮಾಡಲಾಯಿತು.
ಪ್ರಾಥಮಿಕ ಶಾಲಾ ವಿಭಾಗದಿಂದ ಅನಿಲ್ ಕುಮಾರ್ ಎಂ ಕಲ್ಭಾವಿ, ಸಿದ್ದಪ್ಪ ಬಳಿಗಾರ್, ಶರಣಪ್ಪ ಹ್ಯಾಟಿ, ಮಾರುತಿ ಮದಕಟ್ಟಿ, ಪಾಲಾಕ್ಷಗೌಡ ಕೀರ್ತಗೌಡ್ರ, ಪ್ರೇಮಾಂಜಲಿ, ಮಂಜುಳಾ ಕಲ್ಲೂರ್, ಶ್ರೀದೇವಿ ಸೋಮಲಾಪುರ್, ಶ್ರೀದೇವಿ ನಿಂಗಪೂರ್, ಅಂಬ್ರಮ್ಮ ಚಿನ್ನೂರ್, ಪ್ರೌಡಶಾಲಾ ವಿಭಾಗದಿಂದ ನಿಂಗನಗೌಡ ಪೊಲೀಸ್ ಪಾಟೀಲ್, ಫಕೀರಪ್ಪ ಅಂಬಳಿ, ಮಂಜುಳಾ ಗೊಂದಿ, ಕಾಲೇಜ್ ವಿಭಾಗದಿಂದ ಯಮನೂರಪ್ಪ ತಳವಾರ, ನೀಲಮ್ಮ ನಿಂಗಾಪೂರ್, ಲಲಿತಾ ಪೂಜಾರ್ ಅವರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ನೂತನ ಎಸ್ ಡಿಎಮ್ ಸಿ ಸದಸ್ಯರು ಶಾಲಾ ಶಿಕ್ಷಣ ಮತ್ತು ಶಾಲೆಯ ಕೈತೋಟ, ಬಿಸಿಯೂಟ ಹಾಗೂ ಮಕ್ಕಳ ಹಾಜರಾತಿ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು. ಆಯ್ಕೆಯಾದ ಎಸ್ ಡಿಎಮ್ ಸಿ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಗೋಪಾಲಯ್ಯ, ಉಪ ಪ್ರಾಂಶುಪಾಲ ಹನಮಂತಪ್ಪ ಆವಾರದಮನಿ, ಮುಖ್ಯೋಪಾಧ್ಯಯರಾದ ಶಕುಂತಲಾ ಪಾಟೀಲ್, ಶಾಲಾ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪೋಟೋ:ಬುಧವಾರ ಕುಕನೂರ ತಾಲೂಕ ಮಂಗಳೂರ ಗ್ರಾಮದ ಕೆಪಿಎಸ್ ಪ್ರಾಥಮಿಕ, ಪ್ರೌಡ, ಕಾಲೇಜ್ ವಿಭಾಗದ ಎಸ್ ಡಿ ಎಂ ಸಿ ರಚನೆ ಮಾಡಲಾಯಿತು.
ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713