ಸರಳ ಸಜ್ಜನ ವ್ಯಕ್ತಿ ಹಾಲಪ್ಪ ಆಚಾರ :-ವೀರಣ್ಣ ಹುಬ್ಬಳ್ಳಿ

ಯಲಬುರ್ಗಾ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಅವರ 73ನೇ ಹುಟ್ಟುಹಬ್ಬವನ್ನು ತಾಲೂಕ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು, ಮತ್ತು ಅಭಿಮಾನಿ ಬಳಗದವರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹಾಲು, ಬ್ರೆಡ್, ಹಣ್ಣು ,ನೀಡುವ ಮುಖಾಂತರ ಸರಳ ಹುಟ್ಟುಹಬ್ಬ ಆಚರಣೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕ ವಕ್ತಾರರಾದ ವೀರಣ್ಣ ಹುಬ್ಬಳ್ಳಿ ಮಾತನಾಡಿ ಮಾಜಿ ಸಚಿವರಾದ ಹಾಲಪ್ಪ ಆಚಾರ್ ಯಲಬುರ್ಗ ತಾಲೂಕ ಆದ್ಯಾಂತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಶಕ್ತಿಯಾಗಿದ್ದಾರೆ. ಅವರು ತಾಲೂಕಿನಲ್ಲಿ ಎಲ್ಲಾ ಸಮಾಜದೊಂದಿಗೆ ಉತ್ತಮ ಬಾಂಧವ್ಯಗಳನ್ನು ಹೊಂದಿದ್ದಾರೆ. ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ಎಲ್ಲ ಜನಾಂಗದೊಂದಿಗೆ ಅವರ ಸಹಕಾರಕ್ಕಾಗಿ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಈಗಿನ ಯುವ ಸಮುದಾಯಕ್ಕೆ ಹೆಚ್ಚಿನ ಸಮಯ ಅವರ ಆರೋಗ್ಯದ ಕಡೆ, ಅವರು ದುಶ್ಚಟಗಳಿಗೆ ಬಲೆಯಾಗದಂತೆ, ಎತ್ತು ಹೊತ್ತು ಮಾಡಿದ್ದಂತಹ ತಂದೆ ತಾಯಿಗೆ ಋಣ ತೀರಿಸುವ ಹೊಣೆ ಯುವಕರದ್ದಾಗಿದೆ. ಹಾಲಪ್ಪ ಆಚಾರ್ ರವರ ಮುಖ್ಯ ಅಪೇಕ್ಷೆಯಾಗಿತ್ತು. ಅವರು ಪುನಹ ಪುನಹ ಇದನೆ ಹೇಳುತ್ತಿದ್ದರು. ಯುವಕರಿಗೆಲ್ಲ ಮಾರ್ಗದರ್ಶನ ನೀಡುವುದರೊಂದಿಗೆ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ.

ಎಲ್ಲೇ ಕಷ್ಟ ನಷ್ಟ ಸಾವು ನೋವುಗಳು ಸಂಭವಿಸಿದಾಗ ಮೊದಲು ಅಲ್ಲಿಗೆ ಧಾವಿಸಿ, ಅವರಿಗೆ ಸಹಾಯ ಮಾಡಿ ಬರುವ ಗುಣ ಹಾಲಪ್ಪ ಆಚಾರ್ ರವರ ಹುಟ್ಟುಗುಣವಾಗಿದೆ. ಭಾರತೀಯ ಜನತಾ ಪಕ್ಷದಲ್ಲಿ
ಇಂತಹ ಮಹಾನ್ ಶಕ್ತಿ , ಸರಳ ಸಜ್ಜನಿಕೆಯ ರಾಜಕಾರಣಿ ವ್ಯಕ್ತಿ ಹಾಲಪ್ಪ ಆಚಾರ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರಾದ ಶರಣಪ್ಪ ಇಳಗೆರ ,ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಅಮರೇಶ್ ಹುಬ್ಬಳ್ಳಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯರಾದ ವಸಂತ್ ಬಾವಿಮನಿ ,ಬಸಲಿಂಗಪ್ಪ ಕೊತ್ತಲ್, ಕಳಕಪ್ಪ ತಳವಾರ್.ಈರಪ್ಪ ಬಣಕಾರ್, ಅಶೋಕ ಅರಕೇರಿ, ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಬಸವರಾಜ್ ಗುಳಗುಳಿ ,ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕ ಅಧ್ಯಕ್ಷರಾದ ಸಂತೋಶಮಾ ಜೋಷಿ, ಶೀತಲ್ ದೇಸಾಯಿ.ಹಾಗೂ ಪಕ್ಷದ ಹಿರಿಯರಾದ ಶಂಕರ್ ಬಾವಿಮನಿ,ಹನುಮಂತ ರಾಥೋಡ್, ಸುರೇಶ ಗೌಡ ಹೊಸಳ್ಳಿ,ಪರ್ತ್ ಗೌಡ ಹೊಸಳ್ಳಿ ,ವಿಜಯ್ ಜಕ್ಕಲಿ,ಪರಶುರಾಮ ನಾಯಕ್, ಮಲ್ಲಪ್ಪ ಸುರ್ಕೋಡ್, ಬಾಪುಗೌಡ ಪಾಟೀಲ್, ಪ್ರದೀಪ ಕರಂಡಿ,ನೀಲನ್ ಗೌಡ ತಳಗೇರಿ,ಕಳಕನ ಗೌಡ ನಾಗನಗೌಡ, ಶಿವನಗೌಡ ನಾಗನಗೌಡ, ರುದ್ರಯ್ಯ ಬಿಳಗಿಮಠ,ಮಲ್ಲಣ್ಣ ನೆರಗಲ್, ಬಸವರಾಜ್ ಬಾವಿಮನಿ.ಶಂಕರ್ ಬಾವಿಮನಿ ,ದುರ್ಗಪ್ಪ ನಡವಲಮನೆ,ಈಶಪ್ಪ ಗದ್ದಿ,ನಾಗರಾಜ್ ಬಾವಿಮನಿ,ನಾಗರಾಜ್ ಹುಬ್ಬಳ್ಳಿ, ಸಂಗಮೇಶ್ ಬಿದರಿ, ವೀರೇಶ್ ಬಳೆಗಾರ, ಚನ್ನಬಸಯ್ಯ ಜೇಡಿಮಠ,ಪ್ರಶಾಂತ್ ಮ್ಯಾಗೇರಿ,ಪ್ರವೀಣ್ ವಡ್ಡರ್, ಮುಧೋಳ ಗೌತಮ್ ಜೋಶಿ, ಹಾಗೂ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರು ಇತರರು ಇದ್ದರು.
ಸುದ್ದಿ, ಜಾಹೀರಾತಿಗಾಗಿ,
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713