ಎಲೆಮರೆಯ ಪ್ರತಿಭೆಗೆ ಪ್ರೋತ್ಸಾಹ ಅವಶ್ಯ- ಶಿಕ್ಷಕರು ಹನುಮಂತಪ್ಪ ಎನ್ ಉಪ್ಪಾರ.

Breaking news:-ನಿರ್ಭಯ ದೃಷ್ಟಿ ನ್ಯೂಸ್
ಕುಕನೂರು: ಎಷ್ಟೋ ಪ್ರತಿಭೆಗಳು ಇನ್ನೂ ಎಲೆಮರಿಯಲ್ಲಿಯೇ ಉಳಿದು ಅವಕಾಶ ಸಿಗದೇ ವಂಚಿತರಾಗುತ್ತಿದ್ದಾರೆ. ಅಂತಹ ಪ್ರತಿಭೆಗಳಲ್ಲಿ ಮಂಗಳೂರಿನ ಸಿದ್ದಯ್ಯ ಮನ್ನಾಪುರ ಕೂಡ ಒಬ್ಬರು.
ಅದ್ಭುತ ಪ್ರತಿಭಾವಂತನಾಗಿರುವ ಸಿದ್ದಯ್ಯನಿಗೆ ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಲಿಂಗ ನಗರ ಮಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಈತನೊಬ್ಬ ಅಪರೂಪದ ಉದಯೋನ್ಮುಖ ಕಲಾವಿದ. ಅನುಪಯುಕ್ತ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಇಂದು ನಮ್ಮ ಶಾಲೆಗೆ “ನಮ್ಮ ಶಾಲೆಯ ಮಾದರಿ” ಬಸ್ಸು, ಹಡಗು, ವಿಮಾನ ಮತ್ತು ಶ್ರೀರಾಮ ಮಂದಿರದ ಮಾದರಿಗಳನ್ನು ಮಾಡಿಕೊಂಡು ಶಾಲಾ ಮಕ್ಕಳ ಕಲಿತೆಗೆ ಸಹಾಯಕವಾಗಲೆಂದು ತನ್ನ ಕಲಾ ಸೇವೆಯ ಮಾದರಿಗಳನ್ನು ಉಚಿತವಾಗಿ ನೀಡಿದ್ದು ನಿಜಕ್ಕೂ ಶ್ಲಾಘನೀಯ. ಈತನಲ್ಲಿರುವ ಕಲಾ ಪ್ರತಿಭೆ ಎಲ್ಲರ ಗಮನವನ್ನು ಸೆಳೆಯಿತು. ನಿಜಕ್ಕೂ ಮುಂದೆ ಈತನೊಬ್ಬ ಅದ್ಭುತ ಕಲಾವಿದನಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲವೆಂದು ಮುಖ್ಯ ಶಿಕ್ಷಕರಾದ ಹನುಮಂತಪ್ಪ ಉಪ್ಪಾರ ಸನ್ಮಾನಿಸಿ ಮಾತನಾಡಿದರು. ಷಟಸ್ಥಲ ಬ್ರಹ್ಮಿ ಸಿದ್ದಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಅರಳಲೇ ಹಿರೇಮಠ ಮಂಗಳೂರು ಸಣ್ಣ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಪಡಬಾರದ ಕಷ್ಟವನ್ನು ಅನುಭವಿಸಿ ಮಂಗಳೂರಿನ ಮಠಕ್ಕೆ ಬಂದು ಸುಮಾರು 15 ವರ್ಷಗಳ ಸತತವಾಗಿ ಪರಮಪೂಜ್ಯರ ಪೂಜಾ ಸೇವ ಕರ್ತನಾಗಿ ಶ್ರೀಮಠಕ್ಕೆ ಬಂದವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುವುದರ ಜೊತೆಗೆ ಮಠದ ಒಬ್ಬ ಪೂಜ್ಯರ ಕೂಡ ಸಿದ್ದಯ್ಯನನ್ನು ಮಗನಂತೆ ನೋಡಿಕೊಂಡು ಅವನಿಗೆ ಬೇಕಾದ ಶಿಕ್ಷಣವನ್ನು ವೇದ ಜ್ಯೋತಿಷ್ಯವನ್ನು ಎಲ್ಲವನ್ನೂ ಕೂಡ ಕಲಿಸಿ ಅವನನ್ನ ಸ್ವಂತ ಮಗನಾಗಿ ನೋಡಿಕೊಳ್ಳುತ್ತಿದ್ದಾರೆ.
ಸಿದ್ದಯ್ಯ ಒಬ್ಬ ಅಪರೂಪದ ತಾಜಾ ಪ್ರತಿಭೆ. ಈತನ ಕಲೆಯನ್ನು ಕಂಡು ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಮಕ್ಕಳ ಕಲಿಕೆಗೆ ಸಹಾಯಕವಾಗುವ ಅತ್ಯಂತ ಉಪಯುಕ್ತ ಪಾಠೋಪಕರಣಗಳು ಮಕ್ಕಳ ಕಲಿಕೆಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ ಉದಾಹರಣೆಗೆ ಕೃಷಿ ಉಪಕರಣಗಳು ತಬಲ ಹಾರ್ಮೋನಿಯಂ ವೀಣೆ ಮನೆ ದೇವಾಲಯ ಬಸ್ಸು ರೈಲು ಹಡಗು ವಿಮಾನ ಹವಮಾನ ನಕ್ಷೆ ಕೇದಾರನಾಥ ದೇವಸ್ಥಾನ ಶ್ರೀರಾಮ ಮಂದಿರ ಇತ್ಯಾದಿಗಳು ಎಲ್ಲರ ಗಮನವನ್ನು ಕಳೆಯುತ್ತವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಕನೂರು ತಾಲೂಕಿನ ಪ್ರಧಾನ ಕಾರ್ಯದರ್ಶಿ ಮಹಾವೀರ ಕಲಭಾವಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪತ್ರಿಕೆ ವಿತರಣೆ ಮತ್ತು ಕಳೆದ ಕೆಲವು ವರ್ಷಗಳಿಂದ ಪತ್ರಿಕಾ ವರದಿಗಾರರಾಗಿ ನಿಸ್ವಾರ್ಥ ಸೇವೆಯಿಂದ ಸಮಾಜದ ಸರ್ವತೋಮುಖ ಏಳಿಗೆಗೆ ಅವಿರತವಾಗಿ ಶ್ರಮಿಸುತ್ತಿರುವ ಮಂಗಳೇಶ ಶಿವಪ್ಪ ಮೆತಗಲ್ ಇವರನ್ನು ಶಾಲೆಯ ಪರವಾಗಿ ಮತ್ತು ಮಂಗಳೂರು ಶಿಕ್ಷಕರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಶ್ರೀಮತಿ ಪನ್ನಗ ದೇಶಪಾಂಡೆ, ದೇವಪ್ಪ ವಾಲ್ಮೀಕಿ, ಆನಂದ ಚಿನ್ನೂರ್, ಅಂಬೇಡ್ಕರ್ ಶಾಲೆಯ ಮಲ್ಲಿಕಾರ್ಜುನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ನನಗೆ ಪೂಜ್ಯರೇ ತಂದೆ ತಾಯಿ ಇಷ್ಟೆಲ್ಲಾ ನನ್ನನ್ನು ದೊಡ್ಡವನನ್ನಾಗಿ ಮಾಡಿ ನನಗೆ ಬೇಕಾದ ಎಲ್ಲಾ ವಿದ್ಯೆಗಳನ್ನು ಕೊಟ್ಟು ನನ್ನನ್ನು ಮಗನಾಗಿ ನೋಡಿಕೊಳ್ಳುತ್ತಿರುವಂತಹ ಗುರುಗಳು ಅವರ ಒಂದು ಸೇವ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಸಿದ್ದಯ್ಯ
ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713