ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಉದ್ದೇಶ: ಮಹೇಶ ಸಬರದ
ಕುಕುನೂರು ಪಟ್ಟಣದ ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.02 ಮಂಗಳವಾರದಂದು 2025 -26ನೇ ಸಾಲಿನ ಕುಕನೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲ್ಲೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ ಸಬರದ ಮಾತನಾಡಿ ನಮ್ಮದು ವೈವಿಧ್ಯಮಯ, ಸಾಂಸ್ಕೃತಿಕ ದೇಶ. ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಯುವ ಪೀಳಿಗೆಯು ಮಾಡಬೇಕು. ನಮ್ಮ ಸಂವಿಧಾನದಲ್ಲಿ ಹಕ್ಕಿನ ಜೊತೆ ಜವಾಬ್ದಾರಿಗಳೂ ಇದ್ದು ಅದನ್ನು ಅರಿತು ಮುಂದೆ ಸಾಗಬೇಕು. ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಮಕ್ಕಳಲ್ಲಿ ಸಾರ್ವಜನಿಕ ಶಿಷ್ಟಾಚಾರ ಮತ್ತು ಸಂಸ್ಕಾರ ಕಲಿಸುವುದು ನಮ್ಮ ಕರ್ತವ್ಯ. ಪ್ರತಿಭಾ ಕಾರಂಜಿ ಮೂಲಕ ಈ ಕೆಲಸ ಆಗುತ್ತಿದೆ ಎನ್ನಬಹುದು. ಎಲ್ಲ ಮಕ್ಕಳು ಇಂತಹ ವೇದಿಕೆ ಸದುಪಯೋಗ ಪಡೆದು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೆಸರು ಮಾಡಬೇಕು.ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.

ಬಸವಂತಪ್ಪ ದೊಡ್ಡಮನಿ ರಾಜ್ಯಾಧ್ಯಕ್ಷರು ಮಾತನಾಡಿ ಮಕ್ಕಳ ಪ್ರತಿಭೆ ಗುರುತಿಸಿದರೆ ಸೃಜನಶೀಲತೆ ಅರಳಲಿದೆ ಮಕ್ಕಳಲ್ಲಿ ಕುತೂಹಲ ಕೆರಳಿಸುವುದು, ಮಕ್ಕಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಮತ್ತು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದರಿಂದ ಮಕ್ಕಳ ಪ್ರತಿಭೆ ಗುರುತಿಸಿದರೆ ಸೃಜನಶೀಲತೆ ಅರಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಘೂಡುಸಾ ಮಕಂದಾರ್ ಜಿಲ್ಲಾ ಉಪಾಧ್ಯಕ್ಷರು ಮಾತನಾಡಿ ಮಗು ಹುಟ್ಟುತ್ತಲೇ ಪ್ರತಿಭೆಗಳ ಕಣಜ ಆಗಿರುತ್ತದೆ. ಆ ಮನಸ್ಸಿನ ಮಗುವಿನ, ಆಲೋಚನೆಯ ಬಾಗಿಲು ತೆರೆದಾಗ ಪ್ರತಿಭೆ ಹೊರಗೆ ಬರುತ್ತದೆ. ಆದ್ದರಿಂದ ಮಕ್ಕಳನ್ನು ಯಾರೂ ಪ್ರತಿಭಾವಂತ ಮಾಡಲು ಅಗತ್ಯವಿಲ್ಲ. ಪ್ರತಿಭೆ ಅರಳಲು ಅಗತ್ಯವಾದ ವಾತಾವರಣ ಕಲ್ಪಿಸಿದರೆ ಸಾಕು ಎಂದರು.
ದೈಹಿಕ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷರು ಉಮೇಶ ಕಂಬಳಿ ಮಾತನಾಡಿ ಮಕ್ಕಳ ಬೆನ್ನು ತಟ್ಟುವುದು, ಪ್ರತಿಭೆ ಗುರುತಿಸುವುದು ಎಂದರೆ, ಗಾಡಿ ಚಕ್ರಕ್ಕೆ ಕೀಲೆಣ್ಣೆ ಹಾಕಿದಂತೆ. ಕೀಲೆಣ್ಣೆ ಹಾಕಿದರೆ ಚಕ್ರ ಚನ್ನಾಗಿ ಚಲಿಸುತ್ತದೆ. ಪ್ರೋತ್ಸಾಹ, ಪುರಸ್ಕಾರ ಸಿಕ್ಕರೆ ಮಕ್ಕಳ ಪ್ರತಿಭೆ ಅರಳುತ್ತದೆ ಎಂದು ಮಾತನಾಡಿದರು.
ನಂತರ ಮೌಲಾನಾ ಆಜಾದ್ ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ ಪತ್ತಾರ ಮಾತನಾಡಿ ಇಂದು ಪುರಸ್ಕಾರಗೊಂಡ ಮಕ್ಕಳಿಗೆ ನಾನೊಂದು ಕಿವಿಮಾತು ಹೇಳಲು ಬಯಸುತ್ತೇನೆ. ನೀವು ಯಾವ ಕಲಿಕೆಯ ಕುತೂಹಲ ಮತ್ತು ಅಧ್ಯಯನಶೀಲತೆಯನ್ನು ಕಳೆದುಕೊಳ್ಳಬಾರದು. ಇಲ್ಲದಿದ್ದರೆ ನಿಮ್ಮೊಳಗಿನ ಪ್ರತಿಭೆ ಬಾಡುತ್ತದೆ. ಮೊಬೈಲ್, ಗೀಳು ನಿಮ್ಮಲ್ಲಿರುವ ಸಾಮರ್ಥ್ಯವನ್ನು ಕೊಂದು ಪ್ರತಿಭಾಶೂನ್ಯ ಹೊಂದುತ್ತದೆ. ವೀಡಿಯೊ ಗೇಮ್‌ಗಳು ಕೇವಲ ನಿರ್ವಹಿಸಲು ಹೀಗಾಗಿ ಮೊಬೈಲ್ ಬಿಡಿ-ಪುಸ್ತಕ ಹಿಡಿ-ಮೈದಾನದ ಕಡೆ ನಡಿ ಎನ್ನುವುದನ್ನು ಮಕ್ಕಳು ಪಾಲಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಚಟುವಟಿಕೆಗಳು,ಕಲಿಕೆಯ ಕುತೂಹಲ, ಅಧ್ಯಯನಶೀಲತೆಯನ್ನು ಬದುಕಿನ ಕೊನೆಗೆ ಕ್ಷಣದವರೆಗೂ ಪಾಲಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಕುಕುನೂರು ತಾಲೂಕ ಅಧ್ಯಕ್ಷರು ಸುರೇಶ ಅಬ್ಬಿಗೇರಿ ಮಾತನಾಡಿ ಇಂತಹ ವೇದಿಕೆಯನ್ನು ಒದಗಿಸಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಆಯೋಜನೆಯಿಂದ ಸಾಧ್ಯ ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟದ ಪಾಠಗಳಿಂದ ದೂರ ಆಗಿದ್ದಾರೆ. ಅಜ್ಜ-ಅಜ್ಜಿ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಅದಕ್ಕೇ ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆಯೂ ಕಾಣುತ್ತಿಲ್ಲ ಕತೆಗಳನ್ನು ಕೇಳುವ ಮೂಲಕ ಮಕ್ಕಳ ಕಲ್ಪನಾ ಜಗತ್ತು ವಿಪರೀತ ವಿಕಾಸಗೊಳ್ಳುತ್ತಿತ್ತು. ಮಕ್ಕಳಲ್ಲಿರುವ ಪ್ರತಿಭೆ ಇಂತಹ ವೇದಿಕೆಯಿಂದ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು.
ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳಿಗೆ ಮಿಮಿಕ್ರಿ, ಕ್ಷೇಮಾಡ್ಲಿಂಗ್, ಛದ್ಮವೇಷ, ಆಶುಭಾಷಣ, ಭರತನಾಟ್ಯ, ರಂಗೋಲಿ, ಚರ್ಚಾಸ್ಪರ್ಧೆ, ಕಥೆ ಹೇಳುವುದು, ಕವನ, ಪದ್ಯವಾಚನ, ಪ್ರಬಂಧ ರಚನೆ, ಜಾನಪದ ನೃತ್ಯಮ ಗಝಲ್, ಕವಾಲಿ, ಚಿತ್ರಕಲೆ, ಭಾವಗೀತೆ ಮುಂತಾದ 14 ವಿಭಾಗಕ್ಕೆ ಸೇರಿದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಕೀರ ಬೇಗಮ್ ನೆರವೇರಿಸಿದರು.
ಈ ಸಂದರ್ಭದಲ್ಲಿ
ಲಲಿತಮ್ಮ ಯಡೆಯಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷರು, ಮಹೇಶ್ ಅಸೂಟಿ ಬಿ ಆರ್ ಎಲ್, ಪೀರ್ ಸಾಬ್ ದಪೇರಾ ಸಿಆರ್‌ಪಿ, ಶಿವಪ್ಪ ಈ ಬೇರಿ ಬಿ ಆರ್ ಪಿ, ಮಂಜುನಾಥಯ್ಯ ತೆಗ್ಗಿನಮಠ ಸಿಆರ್‌ಪಿ, ಮುತ್ತಣ್ಣ ಎಚ್. ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು, ಶೇಖಪ್ಪ ದಾಸರ, ಎಚ್ ಎಂ ನದಾಫ ಸಿಆರ್‌ಪಿ, ಕೃಷ್ಣಮೂರ್ತಿ ಗದಾರಿ ಪ್ರಾಚಾರ್ಯರು, ಮಹಾವೀರ ಕಳಬಾವಿ, ಪ್ರಭು ಶಿವನ ಗೌಡ್ರು, ಸುರೇಶ್ ಮಡಿವಾಳರ, ಶಿವಪ್ಪ ಉಪ್ಪಾರ ನೊಡಲ್ ಅಧಿಕಾರಿಗಳು ಬಿ ಆರ್ ಪಿ, ಮಾರುತಿ ತಳವಾರ್, ಕೃಷ್ಣವೇಣಿ ಮುಖ್ಯೋಪಾಧ್ಯಾಯರು ಶಾಂತಾದೇವಿ ಹಿರೇಮಠ, ಹುಲಿಗೆಮ್ಮ ವಜ್ರಬಂಡಿ, ಹಾಗೂ ಶಾಲಾ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು ಅಧ್ಯಕ್ಷರು ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ,ಪೋಷಕರು ಇತರರು ಇದ್ದರು.
ಸುದ್ದಿ ಜಾಹೀರಾತಿಗಾಗಿ ,ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713