ಅಸುರಕ್ಷಿತ (ಕಾಂಡೋಮ್ ರಹಿತವಾಗಿ) ಲೈಂಗಿಕ ಸಂಪರ್ಕದಿಂದ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹೆಚ್.ಐ.ವಿ./ಏಡ್ಸ್
ಡಾ ಸಿ.ಎಮ್. ಹಿರೇಮಠ

ಕುಕನೂರು ತಾಲೂಕಿನ ಮಂಗಳೂರು ನ ಸುವರ್ಣಗಿರಿ ಡಾ. ಚನ್ನಮಲ್ಲಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನ ಕುರಿತು ಮಾತನಾಡಿದ ಅವರು ಯುವಜನತೆ ಹೆಚ್.ಐ.ವಿ./ಏಡ್ಸ್ ಕುರಿತು ಅರಿತು ವರ್ತಿಸಬೇಕು ಎಂದ ಅವರು ಅಸುರಕ್ಷಿತ(ಕಾಂಡೊಮ್ ರಹಿತವಾಗಿ) ಸಂಪರ್ಕದಿಂದ, ಹೆಚ್.ಐ.ವಿ. ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೆ ಪಡೆಯುವದರಿಂದ, ಸೋಂಕಿತ ತಾಯಿ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ, ಎದೆ ಹಾಲಿನ ಮೂಲಕ ಹಾಗೂ ಸೋಂಕಿತ ಸೂಜಿ, ಸಿರಿಂಜ್, ಹರಿತವಾದ ಸಲಕರಣೆಗಳನ್ನು ಸಂಸ್ಕರಿಸದೆ ಬಳಸುವದರಿಂದ ಹೆಚ್.ಐ.ವಿ./ಏಡ್ಸ್ ಹರಡುತ್ತದೆ ಎಂದರು.
ಸೋಂಕಿತರಲ್ಲಿ ತಿಂಗಳಿಗೂ ಅಧಿಕ ಜ್ವರ, ಶೇ10% ತೂಕ ಕಡಿಮೆ ಆಗುವದು, ಹಸಿವಾಗದಿರುವದು, ಅತಿಸಾರ ಬೇಧಿ, ಚರ್ಮದ ಖಾಯಿಲೆಗಳು, ಬಾಯಿಯಲ್ಲಿ ಹುಣ್ಣುಗಳು HIV/AIDS ಲಕ್ಷಣಗಳಾಗಿರುತ್ತವೆ ಎಂದ ಅವರು ಯುವಜನತೆ & ಸಾರ್ವಜನಿಕರು ಹೆಚ್.ಐ.ವಿ. ಸೋಂಕು ಹರಡುವ 4 ಮಾರ್ಗಗಳಿಂದ ದೂರ ಇರಬೇಕು ವಿವಾಹದವರೆಗೆ ಬ್ರಹ್ಮಚರ್ಯೆ ಪಾಲಿಸಬೇಕು ಅಸುರಕ್ಷಿತ ಲೈಂಗಿಕ ಕ್ರಿಯೆ ಮಾಡಬಾರದು, ಹಚ್ಚೆ ಹಾಕಿಸಿಕೊಳ್ಳುವಾಗ ಹೊಸದಾದ ಸೂಜಿ ಬಳಸುವ ಕುರಿತು ಖಚಿತ ಪಡಿಸಿಕೊಳ್ಳಬೇಕು ಆಗ ಮಾತ್ರ ಹೆಚ್.ಐ.ವಿ./ಏಡ್ಸ್ ಹರಡುವಿಕೆ ತಡೆಯಬಹುದು ಎಂದು ತಿಳಿಸಿ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕರಾದ ಸಲೀಂ ಪಾಷಾ ರವರು1988 ರ ಸಂದರ್ಭದಲ್ಲಿ HIV/AIDS ಅತಿಯಾಗಿ ಹರಡಿ ಅದರಿಂದಾದ ಸಾವು ನೋವುಗಳನ್ನು ತಡೆದು ಜಾಗೃತಿ ಮೂಡಿಸುವ ಸಲುವಾಗಿ WHO ಮಾರ್ಗದರ್ಶನ ದಂತೆ 1988 ರಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಆಪ್ತಸಮಾಲೋಚಕ ಅಮರೇಶ ಮಾತನಾಡಿ ಯುವಜನತೆ ಹೆಚ್.ಐ.ವಿ. ಸೋಂಕಿಗೆ ಒಳಗಾಗುವ ಸನ್ನಿವೇಶಗಳ ಕುರಿತು ತಿಳಿಸಿ ಅಂತಹ ಸನ್ನಿವೇಶಗಳಲ್ಲಿ ಜಾಗೃತರಾಗಿ ವರ್ತಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದ್ಯಾಪಕರಾದ H G ಬೊಮ್ಮನಾಳ ರವರು ಮಾತನಾಡಿ HIV/AIDS ಖಾಯಿಲೆ ಕೇವಲ ದೇಹಕ್ಕೆ ಮಾತ್ರವಲ್ಲ ಮಾನಸಿಕವಾಗಿಯೂ ತುಂಬಾ ಗಾಸಿ ಮಾಡುತ್ತದೆ ಹಾಗಾಗಿ ವಿದ್ಯಾರ್ಥಿಗಳು ಇಂತಹ ಖಾಯಿಲೆಗಳ ಕುರಿತು ಜಾಗೃತರಾಗಿ ಇದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಧ್ಯಾಪಕರಾದ ಗುರುಲಿಂಗಮ್ಮ ರವರು ನಿರೂಪಿಸಿದರು, ಅತಿಥಿ ಉಪನ್ಯಾಸಕರಾದ ಅಣ್ಣಪ್ಪ ಪೂಜಾರ, ಅಭಿಜಿತ್ ರೆಡ್ಡಿ, ಗವಿಸಿದ್ದಪ್ಪ, ಬಸವರಾಜ ರಾಠೋಡ, ಉಪಸ್ಥಿತರಿದ್ದರು.
ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713