oplus_1026

_”ಮಗ ಹೋದರು ಮಾಂಗಲ್ಯ ಬೇಕು”ಡಿಸೆಂಬರ್ 3 ಬುಧವಾರದಿಂದ ನಾಟಕ ಪ್ರದರ್ಶನ ವೈಭವದಿಂದ ಪ್ರಾರಂಭ”_

ಕುಕನೂರು:-ಜನಪದ ಆಧುನಿಕತೆ ಮೇರುಗಲ್ಲಿ ವಿನಾಶದ ಅಂಚಿಗೆ ತಲುಪಿದ್ದು, ಕಲಾವಿದರು ತಮ್ಮ ಕಲೆ ಅಭಿವ್ಯಕ್ತಿಗೊಳಿಸಲಾಗದೆ ಮೂಲೆಗುಂಪಾಗಿದ್ದಾರೆ. ಕಲೆಯನ್ನು ಉಳಿಸಿ ಬೆಳೆಸುವುದನ್ನು ಮೈಗೊಡಿಸಿಕೊಳ್ಳಬೇಕಾಗಿದೆ ಎಂದು ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿ ಮಾಲಕರಾದ ಮಲ್ಲಿಕಾರ್ಜುನ ಎಸ್ ಮಡ್ಡಿ ತಿಳಿಸಿದ್ದಾರೆ. ಕುಕುನೂರು ಪಟ್ಟಣದ ಶ್ರೀ ಗುದ್ನೇಶ್ವರ ಜಾತ್ರಾ ಅಂಗವಾಗಿ ಎಸ್ ಬಿ ಐ ಬ್ಯಾಂಕ್ ಹಿಂದುಗಡೆ ಬನ್ನಿಕಟ್ಟಿಯವರ ಜಾಗದಲ್ಲಿ ನಿರ್ಮಿಸಿರುವ ಭವ್ಯ ರಂಗಸಜ್ಜಿಕೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಡಿಸೆಂಬರ್ ಮೂರರಿಂದ “ಮಗ ಹೋದರು ಮಾಂಗಲ್ಯ ಬೇಕು”ಅರ್ಥಾತ್:-ಹೆತ್ತವಳ ಹಾಲು ವಿಷವಾಯಿತು ಎಂಬ ಸುಂದರ ನಾಟಕ ಪ್ರದರ್ಶನ ನೆರವೇರುತ್ತಿದ್ದು. ಯಾವುದೇ ರೀತಿಯಾದ ಅಶ್ಲೀಲ ಸಂಭಾಷಣೆ ಇರುವುದಿಲ್ಲ. ಜನರೆಲ್ಲ ನಕ್ಕು ನಲಿಯುವಂತಹ ಫುಲ್ ಕಾಮಿಡಿ ಹೊಂದಿದಂತಹ ಸಂಸಾರಸ್ಥರು ಹಾಗೂ ಹಿರಿಯರು ಮಕ್ಕಳು ನೋಡುವಂತಹ ನಾಟಕವಾಗಿದ್ದು. ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಸಮಸ್ತ ಹಳ್ಳಿಗಳ ವೀಕ್ಷಕರಲ್ಲ ಆಗಮಿಸಿ ನಾಟಕ ಯಶಸ್ವಿಗೊಳಿಸಬೇಕು “ಮಗ ಹೋದರು ಮಾಂಗಲ್ಯ ಬೇಕು”ಈ ನಾಟಕದಲ್ಲಿ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಸಿರುವ ಖ್ಯಾತ ಚಲನಚಿತ್ರ ನಟ ಟೆನ್ನಿಸ್ ಕೃಷ್ಣ ಹಾಗೂ ದಾರಾವಾಹಿನಿ ನಟಿ ಹಾಗೂ ಮಜಾ ಟಾಕೀಸ್ ಖ್ಯಾತಿಯ ಮಲ್ಲಿಕಾ ಹಾಗೂ ಪ್ರಮುಖ ಹಾಸ್ಯ ಪಾತ್ರದಲ್ಲಿ ಗಿಣಿ ರಾಮ ದಾರಾವಾಹಿ ನಟ ಬಸವರಾಜ ತಿರ್ಲಾಪೂರ ಇವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ನಾಟಕವು ವ್ಯಕ್ತಿಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜನಸಾಮಾನ್ಯರ ಹಾಡು ಭಾಷೆಯ ಮೂಲಕ ಮನಸ್ಸಿಗೆ, ಹಾಗೂ ಸಾಮ್ರಾಜ್ಯಕ್ಕೆ ಸಂದೇಶವನ್ನು ನೀಡುವಂತಹದಾಗಿದೆ.

ಕಣ್ಮರೆಯಾಗಹತ್ತಿವೆ ವೃತ್ತಿರಂಗ ಭೂಮಿ ಕಲಾವಿದರ ಜೀವನ, ಬೆಳೆದು ಇಂದಿನ ಆಧುನಿಕ ಜನರ ಬದುಕಿನ ಸತ್ಯಾಂಶಗಳನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿದೆ. ಕಲಾವಿದರೂ ಅವರ ಕಲೆಗೆ ಸೂಕ್ತ ಬೆಲೆ ಇಲ್ಲದೇ ಅವಸಾನದ ಅಂಚಿನಲ್ಲಿವೆ ರಂಗಭೂಮಿ ಕಲಾವಿದರನ್ನು ಉಳಿಸಬೇಕು: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮಾಧ್ಯಮದ ಗೀಳು ಸ್ಥಳೀಯ ಕಲೆಗಳು ನಾಶವಾಗಲು ಪ್ರಮುಖ ಕಾರಣವಾಗಿದೆ. ನೂರು ವರ್ಷಗಳ ಕಾಲದಿಂದಲೂ 1008 ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿ ರಂಗಭೂಮಿ ವೃತ್ತಿಜೀವನ ಕಟ್ಟಿಕೊಂಡು 30 ರಿಂದ 40 ಕಲಾವಿದರ ಕುಟುಂಬಗಳ ಜೀವನ ನಿರ್ವಹಣೆಗೆ ಆಸರೆಯಾಗಿ ನಡೆದುಕೊಂಡು ಬಂದಿದೆ.ಆದ್ದರಿಂದ ವೃತ್ತಿ ರಂಗಭೂಮಿ ಕಲಾವಿದರನ್ನು ಸರ್ಕಾರಗಳು ಗುರುತಿಸಿ ಸೌಲಭ್ಯಗಳನ್ನು ನೀಡಬೇಕು ಎಂದರು.

 

ಈ ಸಂದರ್ಭದಲ್ಲಿ ಗುರುಲಿಂಗಯ್ಯ ಬರಗಿ, ಲಕ್ಷ್ಮಣ್ ಮಹೇಂದ್ರಗಿ, ಶ್ರೀಕಾಂತ್ ಪಾಟೀಲ ಧಾರವಾಡ, ಮಂಜುಳಾ ಕೂಡ್ಲಿ, ನಿಜಗುಣ ಹಿರಿಯೂರು, ರಾಮ ಶೆಟ್ಟಿ ಕೂಡ್ಲಿ, ಶಂಕರ ಬಾಗೇವಾಡಿ ನಿಡಗುಂದಿ, ಲಕ್ಷ್ಮಿ ಭದ್ರಾವತಿ, ನಾಗಪ್ಪ ಯರಗಟ್ಟಿ. ಹಾಗೂ ಶ್ರೀ ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿ ರಂಗಭೂಮಿ ಕಲಾವಿದರನ್ನು ಇತರರು ಇದ್ದರು.

 

 *ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713*

Leave a Reply

Your email address will not be published. Required fields are marked *