oplus_1026

ಬುಧವಾರದಿಂದ” ಅಣಿಕಿ ನೋಡ್ಯಾಳ ಹಳ್ಳಕ್ಕ ಕೆಡಿವ್ಯಾಳ” ನಾಟಕ ಪ್ರದರ್ಶನ. 

ಸಂಕಷ್ಟದಲ್ಲಿರುವ ಕಲಾವಿದರನ್ನು ಪೋಷಿಸಿದರೆ ಕಲೆ, ಸಾಹಿತ್ಯ, ಸಂಗೀತ ಬೆಳೆಯುತ್ತದೆ ಎಂದು ಪ್ರೇಮ ಗುಳೇದಗುಡ್ಡ ಹೇಳಿದರು.

Breaking news:-ನಿರ್ಭಯ ದೃಷ್ಟಿ ನ್ಯೂಸ್-

oplus_1026

ಕುಕನೂರು:-

ಮಂಗಳವಾರ ಕುಕನೂರು ಪಟ್ಟಣದ ಕೆಇಬಿ ರಸ್ತೆ ಹತ್ತಿರ ಶ್ರೀ ಶಿವಸಂಗಮೇಶ್ವರ ನಾಟಕ ಸಂಘ ಆಶಾಪುರ ಇವರಿಂದ ಶ್ರೀ ಗುದ್ನೇಶ್ವರ ಜಾತ್ರೆಯ ಅಂಗವಾಗಿ ನಿರ್ಮಿಸಿರುವ ಭವ್ಯ ರಂಗಸಜ್ಜಿಗೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪ್ರೇಮ ಗುಳೇದಗುಡ್ಡ ಮಾತನಾಡಿದರು. ನಿಜವಾಗಿಯೂ ಕಲಾವಿದರ ಬದುಕು ನಾವು ಊಹಿಸುದಷ್ಟು ಸುಖಕರವಾಗಿರಲ್ಲ, ಅದರಲ್ಲೂ, ನಾಟಕರಂಗದ ಕಲಾವಿದರು ಆರ್ಥಿಕವಾಗಿ ಅಸಬಲರಾಗಿರುತ್ತಾರೆ. ಇಂತಹ ಕಲಾವಿದರನ್ನು ಗುರುತಿಸಿ ಸಾಹಿತ್ಯ ಪ್ರೇಮಿಗಳು, ಸಂಸ್ಥೆಗಳು ಪೋಷಿಸಬೇಕು ಎಂದು ವಿನಂತಿಸಿದರು.

ನಂತರ ಮೂರ್ತಿ ಕೊಪ್ಪಳ, ಚಲನಚಿತ್ರ ನಟಿ ಗಂಗಾ ನಕ್ಷತ್ರ ಮಾತನಾಡಿ. ಡಿಸೆಂಬರ್ 3 ಬುಧವಾರದಿಂದ “ಅಣಿಕಿ ನೋಡ್ಯಾಳ ಹಳ್ಳಕ್ಕ ಕೆಡಿವ್ಯಾಳ”ನಾಟಕ ಪ್ರದರ್ಶನ ಪ್ರಾರಂಭ ವಾಗುತ್ತಿದ್ದು. ಕುಕನೂರು ಬಾಬಣ್ಣ ಕಲ್ಮನಿ ಹಾಗೂ ಮಂಡಲಗೇರಿ ವೀರಯ್ಯ ಹಿರೇಮಠ ಯಲಬುರ್ಗಾ ವಿವಿಧ ಗ್ರಾಮಗಳಲ್ಲಿ ಕಲಾವಿದರನ್ನು ಹೊಂದಿದಂತಹ ಗ್ರಾಮವಾಗಿದ್ದು. ಕಲಾವಿದರಿಗೆ ಆಶ್ರಯ ನೀಡುವ ಸ್ಥಾನವಾದ ಕುಕುನೂರು ಪ್ರೇಕ್ಷಕರು ಹಾಗೂ ಸುತ್ತಮುತ್ತಲಿನ ಗ್ರಾಮದ ಕಲಾ ಪ್ರೇಮಿಗಳು ಆಗಮಿಸಿ ನಾಟಕ ಪ್ರದರ್ಶನಗಳನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಈ ನಾಟಕದಲ್ಲಿ ಯಾವುದೇ ಅಶ್ಲೀಲ ಹಾಡು ಮಾತುಗಳು ಇರುವುದಿಲ್ಲ. ಜನಸಾಮಾನ್ಯರು ನಗೆ ಹಾಸ್ಯದಿಂದ ನೋಡುವಂತಹ ಕುಟುಂಬ ಸಮೇತರಾಗಿ ನೋಡುವಂತಹ ನಾಟಕವಾಗಿದ್ದು ನಾಟಕ ನೋಡಿ ಕಲಾವಿದರನ್ನು ಅರಸಬೇಕು ಎಂದು ಹೇಳಿದರು.

ಪ್ರತಿದಿನ ಎರಡು ನಾಟಕ ಪ್ರದರ್ಶನಗಳು ಸಂಜೆ 6- 15ಕ್ಕೆ ರಾತ್ರಿ 9.30 ಕ್ಕೆ

ಸಂದರ್ಭದಲ್ಲಿ ಮಾಲಕರು ಪ್ರೇಮ ಗುಳೇದಗುಡ್ಡ, ಮೂರ್ತಿ ಕೊಪ್ಪಳ, ಕಿರಣ್ ಮಂಗಳೂರು, ರಾಜು ಕೊಪ್ಪಳ, ಮ್ಯಾನೇಜರ್ ವಾಮದೇವ ಕೊಟ್ಟೂರು, ಕಲಾವಿದರು ಗಂಗಾ ನಕ್ಷತ್ರ ಬೆಂಗಳೂರು ಚಲನಚಿತ್ರ ನಟರು, ನೇತ್ರಾ ಹಿರೇಮಠ ವಿಜಯಪುರ, ತೇಜಸ್ವಿನಿ ವಿಜಯಪುರ, ಮಹಾಂತಯ್ಯ ಹಿರೇಮಠ ಗುಳೇಬಾಳ್, ಶಿವು ಬ್ಯಾಡಗಿ, ಮಾರುತಿ ಕಂಬಳಿ ಹಾವೇರಿ, ಕರಿಯಪ್ಪ ಶಿರೂರು, ಹನುಮೇಶ ಈರೂರ ಶಿರೂರು, ಗುರಲಿಂಗಯ್ಯ ತಾಳಿಕೋಟಿ, ಸಂಗಣ್ಣ ಬ್ಯಾಡಗಿ, ವಿಶೇಷ ಸಂಗೀತ ಬಳಗ ಪಂಚು ಎರಗಟ್ಟಿ, ವರುಣ ವಿಜಯಪುರ, ಹಾಗೂ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಆಶಾಪೂರ ಸಂಘದ ಇತರರು ಇದ್ದರು.

 

 *ಸುದ್ದಿ ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್, ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713*

Leave a Reply

Your email address will not be published. Required fields are marked *