ನರೇಗಲ್ಲ ಸೆ.೨೯: ಅಕ್ಟೋಬರ್ ೧ರಂದು ಗದಗ ಜಿಲ್ಲಾಡಳಿತದಿಂದ ಜಿಲ್ಲಾಡಳಿತ ಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಲ್ಲಿ ೮೦ ವರ್ಷದ ಮತ್ತು ಮೀರಿದ ಹಿರಿಯರನ್ನು ಗೌರವಿಸಲಾಗುತ್ತದೆ. ಅದನ್ನೆಲ್ಲ ನೋಡಿ ಸಂತೋಷಪಡಲು ನಾವೆಲ್ಲರೂ ಅಲ್ಲಿಗೆ ತೆರಳೋಣ ಎಂದು ನರೇಗಲ್ಲ ಸರಕಾರಿ ನಿವೃತ್ತ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ ಹೇಳಿದರು.
ಅವರು ಪಟ್ಟಣದ ಹಿರೇಮಠದ ಸಭಾಭವನದಲ್ಲಿ ನಡೆದ ಹಿರಿಯ ನಾಗರಿಕರ ಮತ್ತು ಸರಕಾರಿ ನಿವೃತ್ತ ನೌಕರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಘದಲ್ಲಿ ೮೦ ವರ್ಷದ ಹಿರಿಯರೆಂದರೆ ಎಸ್.ಕೆ. ಪಾಟೀಲರಿದ್ದಾರೆ. ಅವರಿಗೂ ಸಹ ಆವತ್ತು ಸನ್ಮಾನ ಜರುಗಲಿದೆ ಎಂದು ತಿಳಿಸಿದರು. ಸರಕಾರ ಕಮ್ಯುಟೇಷನ್ ಅವಧಿಯನ್ನು ಕಡಿಮೆ ಮಾಡುತ್ತಿದೆ ಎಂಬ ಸುದ್ದಿಯಿದೆ. ಅದಕ್ಕಾಗಿ ಅರ್ಹ ಪಿಂಚಣಿದಾರರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿದೆ. ಆದ್ದರಿಂದ ಯಾರು ಅರ್ಹರಿದ್ದೀರೋ ಅವರು ಬೇಗನೆ ನಿಮ್ಮ ಅರ್ಜಿಗಳನ್ನು ಭರ್ತಿ ಮಾಡಿಕೊಡಿ ಎಂದರು.
ಸಭೆಯಲ್ಲಿ ಈಚೆಗೆ ನಿಧನರಾದ ಸಾಹಿತಿ ಎಸ್.ಎಲ್. ಬೈರಪ್ಪನವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಮಾತನಾಡಿ ಬೈರಪ್ಪನವರು ಸಾಕ್ಷಾತ್ ಸರಸ್ವತಿಯ ಪುತ್ರರೆ ಆಗಿದ್ದರು. ಯಾವುದೇ ಕೃತಿಯನ್ನು ರಚನೆ ಮಾಡಬೇಕಿದ್ದರೂ ಅವರು ಅದರ ಬಗ್ಗೆ ಆಳವಾದ ಅಧ್ಯಯನ ಮಾಡಿ ಬರೆಯುತ್ತಿದ್ದರು. ಅವರ ಕೃತಿಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ ಎಂದರು. ಹಿರಿಯ ಸದಸ್ಯ ಡಾ. ಆರ್.ಕೆ. ಗಚ್ಚಿನಮಠ ಬೈರಪ್ಪನವರ ಯಾನ ಕಾದಂಬರಿಯ ಕುರಿತು ಮಾತನಾಡಿದರು.
ಡಾ. ಕೆ.ಬಿ. ಧನ್ನೂರ ಮಾತನಾಡಿ ಊರಿನ ಅಭಿವೃದ್ಧಿಯ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ಊರಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲವೆನ್ನಿಸಿದರೆ ಅವುಗಳ ಬಗ್ಗೆಯೂ ಹಿರಿಯರಾದ ನಾವುಗಳು ಧ್ವನಿ ಎತ್ತಬೇಕಿದೆ ಎಂದರು.
ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಕೆರಿಯವರ ಪ್ರಾರ್ಥಿಸಿ, ಸಭೆಯ ನಡಾವಳಿಗಳನ್ನು ರೂಪಿಸಿದರು. ಶಿವಯೋಗಿ ಜಕ್ಕಲಿ ವಾರ್ಷಿಕ ವಂತಿಕೆಯ ಬಗ್ಗೆ ಸದಸ್ಯರ ಗಮನಕ್ಕೆ ತಂದರು. ಸಭೆಯಲ್ಲಿ ಎಸ್.ಕೆ. ಪಾಟೀಲ, ಎನ್.ಎಚ್. ಚಿಕ್ಕನಗೌಡ್ರ, ಸಿ.ಎ. ಅಂಗಡಿ, ಕೆ.ಕೆ. ದಾಸರ, ವಿ.ಬಿ. ಮೇಟಿ. ಆರ್.ಎಸ್. ಮಠ, ಕೆ.ಎಂ. ಸಂಗನಾಳ, ಎಚ್.ಕೆ. ಜೋಗಿ, ಬಿ.ವಿ. ಬಳಿಗೇರ, ಎಸ್.ಆರ್. ಬಾಗಲಿ, ವೈ.ಆರ್. ಬಸಾಪೂರ, ಎ.ಎ. ಹೊಟ್ಟಿನ, ಎಸ್.ಜಿ. ಮಾಲಗೌಡ್ರ, ಎಸ್.ಬಿ. ಹೊಸಮನಿ, ಎ.ಎಚ್. ಬೇವವಿನಕಟ್ಟಿ, ಜಿ.ಎ. ಬೆಲ್ಲದ, ಬಿ.ಎ. ಕಲಾಲಬಂಡಿ, ಕರಬಸಪ್ಪ ಬಾಸಲಾಪರ ಮುಂತಾದವರು