ಕುಕನೂರು: ಪಟ್ಟಣದ ರಾಘವಾನಂದ ಮಠದಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟನೆ ನೆರವೇರಿಸುವ ಮುಖಾಂತರ ಪಟ್ಟಣದ ತಹಶೀಲ್ ಕಾರ್ಯಾಲಯದ ಮುರಳಿದ ರಾವ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.

 

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ

ಜಿಲ್ಲೆಯಲ್ಲಿ ವಿಮೆ ಪರಿಹಾರಕ್ಕೆ ನೆರವಾಗಿ ಅರ್ಜಿ ಸಲ್ಲಿಸಿದವರಿಗೆ ಬೆಳೆ ವಿಮೆ ಬಂದಿಲ್ಲ, ಎಜೆಂಟರುಗಳ ಮೂಲಕ ಸಲ್ಲಿಸಿದ ಅರ್ಜಿಗಳಿಗೆ ವಿಮೆಗಳು ಬಂದಿವೆ. ಜಿಲ್ಲೆಯಲ್ಲಿ ಏಜೆಂಟರಗಳ ಹಾವಳಿ ಹೆಚ್ಚಾಗಿದ್ದು ಅವರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಬೆಳೆ ವಿಮೆ ಪರಿಹಾರಕ್ಕೆ ಹಾಕಿದ ಅರ್ಜಿಗಳು ರಿಜೇಕ್ಟ್ ಆಗುತ್ತಿವೆ. ಎಜೆಂಟರುಗಳ ಮೂಲಕ ಅರ್ಜಿ ಸಲ್ಲಿಸಿದರೆ ಶೇ. 50 -50ರ ಅನುಪಾತದಲ್ಲಿ ರೈತರಿಗೆ ವಿಮೆ ಪರಿಹಾರ ನೀಡುವ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

 

ಇದರಿಂದ ಜಿಲ್ಲೆಯ ಸಮಸ್ತ ರೈತರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಈ ಕೂಡಲೆ ಸಂಬಂದಪಟ್ಟ ಅಧಿಕಾರಿಗಳ ಹಾಗೂ ವಿಮಾ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ದೇವಪ್ಪ ಸೋಬಾನದ ಮಾತನಾಡಿ

ನಮ್ಮ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲಾ, ತಾಲೂಕನ್ನು ಅಭಿವೃದ್ದಿ ಕ್ಷೇತ್ರವನ್ನಾಗಿ ಮಾಡುತ್ತಿದ್ದೇನೆ ಎಂದು ಹೇಳಿ ಕೇವಲ ಸಿಸಿ ರಸ್ತೆ, ಬಿಲ್ಡಿಂಗ್, ಕಟ್ಟಡಗಳನ್ನು, ಶಾಲೆಗಳನ್ನು ಮಾಡಿದರೇ ಅಭಿವೃದ್ದಿಯಲ್ಲಾ, ದೇಶಕ್ಕೆ ಅನ್ನ ಕೊಡುವ ರೈತರ ಕಷ್ಟಗಳಿಗೆ ಸ್ಪಂದಿಸಿದಾಗ ಮಾತ್ರ ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ದಿಯಾಗುತ್ತದೆ ಎನ್ನುವುದನ್ನು ಮರೆತಂತಿದೆ ಎಂದು ಹೇಳಿದರು.

ರೈತರ ಬಗ್ಗೆ ಶಾಸಕ, ಸಚಿವರಿಗಾಗಲಿ ಕಾಳಜಿ ಇಲ್ಲಾ, ಯಾವದೇ ಕ್ಷೇತ್ರದ ಶಾಸಕರೇ ಆಗಿರಲಿ ಒಬ್ಬರಾದರೂ ಸದನದ ಸಭೆಯಲ್ಲಿ ರೈತರ ಪರ ದ್ವನಿ ಎತ್ತಿದ್ದಾರೆಯೇ ಧ್ವನಿ ಎತ್ತಿ ಮಾತನಾಡಿದ್ದರೇ ತೋರಿಸಿ ಎಂದು ಪ್ರಶ್ನಿಸಿದರು.

ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ್ ಮಾತನಾಡಿ

ನಮ್ಮ ಸಂಘಟನೆಯಿಂದ ಮೇ ತಿಂಗಳಲ್ಲಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಮನವಿ ಮಾಡಿತ್ತು, ಸಕಾಲದಲ್ಲಿ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡದೇ ಈಗ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಇದರಿಂದ ರೈತರಿಗೆ ಪ್ರಯೋಜನವಿಲ್ಲಾ. ರೈತರು ಈ ಹಿಂದೆ ವಿವಿಧ ಬೇಡಿಕೆಗಳ ಮನವಿ ಮತ್ತು ಹೋರಾಟವನ್ನು ಮಾಡುತ್ತಿದ್ದಾಗ ಮನವೆಯನ್ನ ಸಲ್ಲಿಸಿದ್ದು ಹೋರಾಟವನ್ನು ಪೊಲೀಸ್ ಇಲಾಖೆ ಮತ್ತು ತಹಶೀಲ್ದಾರ್ ಅವರು ಮಾಧ್ಯಮ ಮಿತ್ರರು ಪ್ರತಿಭಟನೆಯನ್ನು ಕೈಬಿಡುವಂತೆ ಹೇಳಿದ್ದು ನಮ್ಮ ಮನವಿಗಳಿಗೆ ಸ್ಪಂದಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಹೇಳಿದ್ದರು ಇದುವರೆಗೂ ನಮ್ಮ ಬೇಡಿಕೆಗಳ ಮನವಿಗೆ ಸ್ಪಂದಿಸದ ಅಧಿಕಾರಿಗಳು ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಾತನಾಡಿದರು .

ನಂತರ ತಾಲೂಕ ಉಪಾಧ್ಯಕ್ಷ ಮಲ್ಲಪ್ಪ ಚಳ್ಳಮರದ ಮಾತನಾಡಿ ಸರಿಯಾದ ಸಮಯದಲ್ಲಿ ಮಳೆ ಆಗದೆ ರೈತನಿಗೆ ಬೆಳೆ ನಷ್ಟವಾಗಿದೆ.

ರೈತ ಅತಿವೃಷ್ಠಿ, ಅನಾವೃಷ್ಠಿಗೆ ಬಲಿಯಾಗಿದ್ದು ಜಿಲ್ಲೆಯ ಎಲ್ಲಾ ರೈತರು ಕಂಗಾಲಾಗಿ ಬೆಳೆಗೆ ವ್ಯಯಿಸಿದ ಹಣದಷ್ಟು ಬಾರದೇ ರೈತ ಸಾಲದ ಸೂಳಿಗೆ ಸಿಲುಕುವಂತಾಗಿದೆ. ಸರಕಾರ ಕೂಡಲೇ ರೈತರ ನೆರವಿಗೆ ನಿಂತು ತಕ್ಷಣ ಬೆಳೆ ಪರಿಹಾರ ನೀಡಿದರೇ ರೈತರ ಮುಂದಿನ ಕೃಷಿ ಚಟುವಟಿಕೆಗಳಿಗೆ ಅನೂಕೂಲವಾಗಲಿದೆ ಎಂದು ಹೇಳಿದರು.

 

ಮಾತನಾಡಿ ರೈತರು ಬೆಳೆದ ಬೆಳೆ ಕಠಾವು ಮಾಡಿ ಎರಡು ಸಾವಿರ ಮೂರು ಸಾವಿರಕ್ಕೆ ಮಾರಾಟ ಮಾಡಿದ ಒಂದು ತಿಂಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದರಿಂದ

ರೈತರ ಅನೂಕೂಲಕ್ಕಿಂತ ದಲ್ಲಾಳಿಗಳಿಗೆ, ವರ್ತಕರಿಗೆ ಸರಕಾರ ಹೆಚ್ಚು ಅನೂಕೂಲ ಕಲ್ಪಿಸಿದಂತಾಗಿದ್ದು, ಬೆಂಬಲ ಬೆಲೆ ಘೋಷಣೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜೀರ್ ಸಾಬ್ ತಳಕಲ್ ಮಾತನಾಡಿ

ಮುಂದಿನ ದಿನಗಳಲ್ಲಿ ಬರುವ ಅಲಸಂಧಿ, ಹುರುಳಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ಇನ್ನೀತರ ಬೆಳೆಗಳನ್ನು ಖರೀದಿಸಲು ಎಪಿಎಂಸಿಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ ನೊಂದಣಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಶಿವು ಬಂಗಿ, ಹನಮಪ್ಪ ಮರಡಿ, ಮಹಿಳಾ ಘಟಕದ ಗಂಗಮ್ಮ ಹುಡೇದ, ಬಸಪ್ಪ ಮಂಡಲಗಿರಿ,ಯಲ್ಲಪ್ಪ ಕಲಾಲ್, ಬಸಪ್ಪ ಲಾಲ ಗುಂಡರ, ಶರಣಪ್ಪ ಯತ್ನಟ್ಟಿ, ಉಮೇಶ ಬೆದವಟ್ಟಿ, ಬಸವರಾಜ ದಿವಟರ, ಜಾವೇದ್ ಸವಣೂರು, ಕಾಸಿಂ ಸಾಬ ಸಂಗಟಿ, ಚಂದ್ರಯ್ಯ ವಸ್ತ್ರದ, ಮಲ್ಲಪ್ಪ ಹೂಗಾರ,ಕಳಕಪ್ಪ ಕ್ಯಾದಗುಂಪಿ ರೈತ , ತಾಲೂಕ ಘಟಕ ಹಾಗೂ ನಗರ ಘಟಕದ ಸರ್ವ ಪದಾಧಿಕಾರಿಗಳು ಹಾಜರಿದ್ದರು.

ವರದಿ ಚನ್ನಯ್ಯ ಹಿರೇಮಠ ಕುಕನೂರು

By admin

Leave a Reply

Your email address will not be published. Required fields are marked *