ಸಮಾಜದಲ್ಲಿ ಸರ್ವ ಜನಾಂಗದ, ಜೀವಿಗಳ ಒಳಿತಿಗಾಗಿ ತಮ್ಮ ಜೀವನ ಮತ್ತು ಜೀವ ವನ್ನೇ ತ್ಯಾಗ ಮಾಡಿದ ಮಹಾನ್ ಸಂತ ಸೇವಾಲಾಲ ಎಂದು ಯಮನೂರ ಕಟ್ಟಿಮನಿ ಹೇಳಿದರು.

ಕುಕನೂರು:-
ಸದ್ಗುರು ಶ್ರೀ ಸೇವಾಲಾಲ ಮಹಾರಾಜರು ಸಮಾಜದಲ್ಲಿ ಸರ್ವ ಜನಾಂಗದ ಜೀವಿಗಳ ಒಳಿತಿಗಾಗಿ ತಮ್ಮ ಜೀವನ ಮತ್ತು ಜೀವ ವನ್ನೇ ತ್ಯಾಗ ಮಾಡಿದ ಮಹಾನ್ ಸಂತ ಸೇವಾಲಾಲ ಎಂದು ಯಮನೂರ ಕಟ್ಟಿಮನಿ ಹೇಳಿದರು.
ಅವರು ಶನಿವಾರ ದಂದು ಕುಕನೂರ ಪಟ್ಟಣದ ಕಕ್ಕಿಹಳ್ಳಿ ನಡೆದ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪೂಜೆಯನ್ನು ಸಮರ್ಪಿಸಿ ಮಾತನಾಡಿ ಸದ್ಗುರು ಶ್ರೀ ಸೇವಾಲಾಲ್ ಮಹಾರಾಜರ ತತ್ವ ,ಆಚಾರ,ವಿಚಾರ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಪ್ರಗತಿ ಹೊಂದಬೇಕು ಎಂದು ಹೇಳಿದರು.
ಸಮಾಜದ ಮುಖಂಡರಾದ ಮೇಘರಾಜ್ ಬಳಗೇರಿ ಮಾತನಾಡಿ ಅಖಂಡ ಭಾರತ ದೇಶದ ಪ್ರತಿಯೊಬ್ಬ ಸಂತ ಮಹಾಂತರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಅವರು ಕಂಡ ಸಮಾನತೆಯ ಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಅಂದಾಗ ಮಾತ್ರ ನಾವು ಇಂಥ ಜಯಂತಿ ಆಚರಣೆ ಮಾಡುವದು ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ನಮ್ಮ ಸಮಾಜ ಶೈಕ್ಷಣಿಕ,ಸಾಮಾಜಿಕ, ಆರ್ಥಿಕ, ರಾಜಕೀಯ, ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಮಾತನಾಡಿದರು.
ಕುಮಾರ ಬಳಿಗೇರಿ, ಯುವ ಮುಖಂಡರು ಮಾತನಾಡಿ ಸೇವಲಾಲರು ಪ್ರತಿಪಾದಿಸಿದ ಸತ್ಯ,ಅಹಿಂಸೆ,ದುಶ್ಚಟ ನಿರ್ಮೂಲನೆ,ಮೂಢನಂಬಿಕೆಯನ್ನು ಬಿಟ್ಟು ಪ್ರತಿಯೊಬ್ಬರು ಜೀವನದಲ್ಲಿ ಶ್ರೇಯಸ್ಸನ್ನು ಸಾಧಿಸಬೇಕು,ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಸಂಸ್ಕೃತಿ ನೀಡಿ ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ಸಮಾಜದ ಗುರು ಹಿರಿಯರು, ಯುವಮಿತ್ರರು ಭಾಗವಹಿಸಿದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713
