ಕುಕನೂರು ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ

 

 

ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ

 

ಕುಕನೂರು ಪಟ್ಟಣದ ಕುಕನೂರ ಮೆಲೋಡಿಸ್ ಕಲಾ ತಂಡಾ ಹಾಗೂ ಬಸವ ಜನ ಕಲ್ಯಾಣ ಸಾಂಸ್ಕೃತಿಕ ಸಂಸ್ಥೆ ಕುಕುನೂರು ಇವರ ಸಹಯೋಗದಲ್ಲಿ ಕುಕನೂರಿನ ರೈತ ಬಳಗದಿಂದ ಹಾಗೂ ಕಲಾ ಪೋಷಕರಿಂದ ದಸರಾ ಸಂಭ್ರಮ 2025 ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ ಶ್ರೀ ಮಹಾಮಾಯ ರಥೋತ್ಸವ ನಿಮಿತ್ಯ ಇದೇ ಅಕ್ಟೋಬರ್ 1 ಬುಧವಾರ ಕುಕುನೂರು ಪಟ್ಟಣದ ಇಟಗಿ ಮಸೂತಿ ಹತ್ತಿರ ದಸರಾ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಗೀತೋತ್ಸವ ನೆರವೇರಿಸಲಾಗುತ್ತದೆ ಎಂದು  ಅನಿಲ್ ಮಾತನಾಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಮಹಾದೇವ ಮಹಾಸ್ವಾಮಿಗಳು ಅನ್ನದಾನೇಶ್ವರ ಶಾಖಾಮಠ ವಹಿಸಿಕೊಳ್ಳುವರು .ಕಾರ್ಯಕ್ರಮದ ಉದ್ಘಾಟನೆ ಅನಿಲ್  ಆಚಾರ್ ಉದ್ಯಮಿಗಳು ಮತ್ತು ನಾಗರಾಜ್ ದೇಸಾಯಿ ಧರ್ಮಾಧಿಕಾರಿಗಳು ಶ್ರೀ ಮಹಾಮಾಯದೇವಿ ದೇವಸ್ಥಾನ ಇವರು ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ಕಳಕಪ್ಪ ಕಂಬಳಿ ವಹಿಸಿಕೊಳ್ಳುವರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಶಂಬಣ್ಣ ಜೋಳದ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಶ್ರೀ ಅನ್ನದಾನೇಶ್ವರ ಮಠದ ಆಡಳಿತ ಅಧ್ಯಕ್ಷರು, ಶಿವಶಂಕರಯ್ಯ ಲಕ್ಕುಂಡಿಮಠ, ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಗುರುರಾಜ್ ಟಿ. ಪಿ ಎಸ್ ಐ ಕುನೂರ್ ಪಟ್ಟಣ ಪಂಚಾಯತ್ ಅಧಿಕಾರಿಗಳು ಮತ್ತು ಅಧ್ಯಕ್ಷರು ಉಪಾಧ್ಯಕ್ಷರು, ರೈತ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಗ್ರಾಮದ ಗುರುಹಿರಿಯರು ಯುವ ಮುಖಂಡರು ಗಣ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದು.
ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

 

ಸಂಪಾದಕರು:- ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *