*ಸಮಾಜ ಸೇವೆಯೇ ನಿಜವಾದ ಸಾಧನೆ ಎಂಬ ಸಂದೇಶವನ್ನು ಸಾರಿದವರು ಸಂತಕವಿ ಸರ್ವಜ್ಞ:-ಜಿ ಎಂ ಹೊಸಮನಿ*

 

ಕುಕನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 20/02/2026 ದಂದು ತ್ರಿಪದಿ ಬ್ರಹ್ಮ ಕವಿ ಸರ್ವಜ್ಞ ರವರ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾದ ಜಿ. ಎಂ. ಹೊಸಮನಿ ಪೂಜೆಯನ್ನು ಸಲ್ಲಿಸಿ ಮಾತನಾಡಿ

 ಶ್ರೀ ಸರ್ವಜ್ಞ ಕವಿಯು ಎಲ್ಲಾ ಜ್ಞಾನ ಬಲ್ಲವರಾಗಿದ್ದರು ಸರಳ ಸಜ್ಜನಿಕೆ ಸ್ವಭಾವದ ವ್ಯಕ್ತಿತ್ವ ಹೊಂದಿದವರಾಗಿದ್ದರು.ಸಮಾಜ ಸೇವೆಯೇ ನಿಜವಾದ ಸಾಧನೆ ಎಂಬ ಸಂದೇಶವನ್ನು ಸಾರಿದವರು ಸಂತಕವಿ ಸರ್ವಜ್ಞ ಆಗಿದ್ದಾರೆ ಎಂದು ಅವರು ಹೇಳಿದರು.ಅವರ ಬಾಲ್ಯ ಜೀವನದ ಬಗ್ಗೆ ವಿದ್ಯಾರ್ಥಿ ಗಳಿಗೆ ತಿಳಿಸಿದರು.

 ಶಿಕ್ಷಕರಾದ ಶರಣಪ್ಪ ಗುಡ್ಲಾನೂರ ಮಾತನಾಡಿ ಸರ್ವಜ್ಞ ಅವರೊಬ್ಬ ಶ್ರೇಷ್ಠ ಕವಿ ಸಂತನಾಗಿ ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದರು.ಸಾವಿರಾರು ತ್ರಿಪದಿಗಳನ್ನು ರಚಿಸಿ ಜನ ಮನ ಗೆದ್ದ ಕವಿಯಾಗಿದ್ದರು ಸರ್ವಜ್ಞನ ವಚನಗಳು ಇಂದಿಗೂ ಕನ್ನಡಿಗರ ನಾಲಗೆಯಲ್ಲಿ ನಲಿಯುತ್ತಿವೆ. ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ತೀಡಿದ ಒಬ್ಬ ಸಮಾಜ ಸುಧಾರಕನಾಗಿದ್ದನು. ಹಾಗೂ ಸಮಾಜದಲ್ಲಿನ ಅನಿಷ್ಟ ಪದ್ದತಿಗಳನ್ನು ,ಮೂಢ ನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ಆದರ್ಶ ಸಮಾಜ ನಿರ್ಮಾಣ ಮಾಡಿದರು.ಅವರ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.  

 

ಈ ಸಂದರ್ಭದಲ್ಲಿ

ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ವಿ. ಕೆ. ಬಂಡಿವಡ್ಡರ ,ಎಸ್. ಜೆ .ಪಾಟೀಲ್, ಬಿ ವಿ ಲಕ್ಷಾಣಿ, ವಿ. ಬಿ. ಕಟ್ಟಿ,ಆರ್. ಡಿ. ರಾಥೋಡ, ವಿ. ಆರ್. ಹಿರೇಮಠ,ಡಿ. ಡಿ. ಜೋಗಣ್ಣವರ್ ,ಎಸ್ ಎಂ ಹಿರೇಮಠ,ಆರ್ ಬಿ ತಳವಾರ, ಮಂಜುಳಾ, ಮಹೇಶ, ಭುವನೇಶ್ವರಿ ,ಮೃತ್ಯುಂಜಯ ವಿದ್ಯಾರ್ಥಿಗಳು ಹಾಜರಿದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *