*ಮೂಲ ಪುರುಷರ ಜಯಂತಿಗಳು ಕೇವಲ ಸಮಾಜಗಳಿಗೆ ಸೀಮಿತವಾಗಬಾರದು : ಮಂಜುನಾಥ ನಾಡಗೌಡ,,* 

ಕುಕನೂರು : ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ಸಾರಿದ ರೇಣುಕರ ವಾಣಿಯಂತೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ಮಾನವರು ಬದುಕು ಸಾಗಿಸಬೇಕು ಎಂದು ಮುಖಂಡ ಮಂಜುನಾಥ ನಾಡಗೌಡ ಹೇಳಿದರು.

 

ಅವರು ಭಾನವಾರದಂದು ಪಟ್ಟಣದ ಆದಿ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ಸಮಾಜದ ವತಿಯಿಂದ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ರೇಣುಕರ ಭಾವಚಿತಾರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಮಾತನಾಡಿ ಜಂಗಮ ಸಮಾಜದ ಮೂಲ ಪುರುಷ ರೇಣುಕರು ಕೇವಲ ಒಂದು ಜಾತಿಗೆ ಸೀಮಿತವಲ್ಲಾ ಇವರು ಜಾತಿ ಧರ್ಮಗಳು ಎನ್ನದೇ ಮಾನವ ಧರ್ಮ ಎಂದು ಸಾರಿದವರು ಎಂದರು.

 

ಇಂತಹ ಮಹಾನ್ ಮೂಲ ಪುರುಷರ ಜಯಂತಿಗಳನ್ನು ಕೇವಲ ಸಮಾಜಗಳಿಗೆ ಸೀಮಿತವಾಗಿಸದೇ, ವಿಶ್ವಕ್ಕೆ ಒಳಿತು ಬಯಸಿದ ಮಹಾನ್ ದಾರ್ಶನಿಕರ ಜಯಂತಿಗಳನ್ನು ಈಡಿ ಮಾನವ ಧರ್ಮ ಒಗ್ಗೂಡಿ ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.

 

ನಂತರದಲ್ಲಿ ಜಂಗಮ ಸಮಾಜದ ಮುಖಂಡರಾದ ಶಿವಕುಮಾರ ನಿಗಲಾಪುರಮಠ ಮಾತನಾಡಿ ಎಲ್ಲಾ ಧರ್ಮಗಳಲ್ಲಿನ ವಿಶ್ವ ಮಾನವರ ಜಯಂತಿಗಳನ್ನು ಆಚರಣೆ ಮಾಡುವುದರಿಂದ ಅವರು ಜಗತ್ತಿಗೆ ನೀಡಿದ ತತ್ವಾದರ್ಶಗಳ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಧರ್ಮ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಜೊತೆಗೆ ಸಮಾನತೆಯ ಬಗ್ಗೆ ಸಾರಿದ ಧಾರ್ಶನಿಕರ ಆದರ್ಶ ತತ್ವಗಳಡಿಯಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.

 

ನಂತರ ಹಿರಿಯರಾದ ಚನ್ನಬಸಯ್ಯ ಓಲಿ ಮಾತನಾಡಿ ಆದಿ ಜಗದ್ಗುರು ರೇಣುಕರು ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು, ಅರಿತು ನಡೆಯಬೇಕು ಎಂದರು.

 

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಯ್ಯ ಹತ್ಲಗೇರಿಮಠ, ವೀರಯ್ಯ ದೇವಗಣಮಠ, ಸಿದ್ದಲಿಂಗಯ್ಯ ಬಂಡಿ, ಮಹೇಶ ಕಲ್ಮಠ, ಈಶಯ್ಯ ಶಿರೂರಮಠ, ಮಂಜುನಾಥ ಗೊರ್ಲೆಕೊಪ್ಪ, ಶರಣಯ್ಯ ಸಸಿಮಠ, ಪಂಚಯ್ಯ ಹಿರೇಮಠ, ವೀರಯ್ಯ ಪೂಜಾರ, ಶರಣಯ್ಯ ಹುಣಸಿಮರದ, ಚನ್ನಬಸಯ್ಯ ಹುಣಸಿಮರದ, ಶಶಿ ಓಲಿ, ವಿರುಪಾಕ್ಷಯ್ಯ ಬಂಡಿ, ಸಂಗಯ್ಯ ಬಂಡಿ, ಶರಣಪ್ಪ ಪೋಲಿಸ್ ಚಿಕೇನಕೊಪ್ ಸೇರಿದಂತೆ ಇತರರು ಇದ್ದರು.



ರೇಣುಕರ ತತ್ವ ಸಿದ್ದಾಂತಗಳು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು, ಮಕ್ಕಳನ್ನು ಧರ್ಮ ಜಾಗೃತಿ ನೀಡಿ ಸಂಸ್ಕಾರವಂತರನ್ನಾಗಿ ಮಾಡುವ ಮೂಲಕ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು.

 

 *ಸಿದ್ದಯ್ಯ ಕಳ್ಳಿಮಠ ಸಮಾಜದ ಅಧ್ಯಕ್ಷರು.*



ರೇಣುಕರ ಜಯಂತಿಯನ್ನು ಕೇವಲ ಸಮಾಜ ಆಚರಿಸದೇ ಪ್ರತಿಯೊಬ್ಬರು ಆಚರಿಸುವಂತಾಗಬೇಕು, ಮುಂದಿನ ಜಯಂತಿ ಪೂರ್ವ ನಿಯೋಜನೆಯೊಂದಿಗೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಗೂ ಸಮಾಜದಲ್ಲಿ ಆಚರಿಸುವಂತೆ ಜಾಗೃತಿ ಮೂಡಿಸಬೇಕು.

 

 *ಹರೀಶ ಹಿರೇಮಠ ಜಂಗಮ ಸಮಾಜದ ಯುವ ಮುಖಂಡ.*



ಮಹನೀಯರ ಜಯಂತಿಗಳನ್ನು ಕೇವಲ ಕಾಟಾಚಾರಕ್ಕೆ ಆಚರಿಸದೇ ಪ್ರತಿಯೊಂದು ಸಮುದಾಯದವರನ್ನು ಕರೆದುಕೊಂಡು ಮಹನೀಯರ ಜಯಂತಿ ಆಚರಿಸಬೇಕು, ಹಾಗೂ ಮಹನೀಯರ ಆದರ್ಶಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರು ಲಿಂಗವನ್ನು ಧರಿಸಿಕೊಂಡು ರೇಣುಕರ ಜಯಂತಿಯನ್ನು ಆಚರಿಸಲು ಮುಂದಾಗಬೇಕು.ಇದರಿಂದ ಮುಂದಿನ ಪೀಳಿಗೆಗೆ ಆಚಾರ, ವಿಚಾರ, ಸಂಸ್ಕಾರಗಳನ್ನು ನೀಡಿದಂತಾಗುತ್ತದೆ.

 

 *ಸಿದ್ದಲಿಂಗಯ್ಯಸ್ವಾಮಿ ಹಿರೇಮಠ ಜಂಗಮ ಸಮಾಜದ ಹಿರಿಯರು.*



ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *