ಮಂಗಳೂರಲ್ಲಿ ಮಂಗಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕರವೇ 19ನೇ ವರ್ಷದ ವಾರ್ಷಿಕೋತ್ಸವ ಸನ್ಮಾನ ಸಮಾರಂಭ

ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಶ್ರೀ ಮಂಗಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಂಗಳೇಶ್ವರ ಕಲ್ಯಾಣ ಮಂಟಪದ ಹತ್ತಿರ ಕರವೇ 19ನೇ ವಾರ್ಷಿಕೋತ್ಸವ ಸಂಗೀತದ ವೈಭವ ಹಾಗೂ ಸಾಧಕರಿಗೆ ಗೌರವ ಸನ್ಮಾನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಹಿರೇಮಠ ಮಂಗಳೂರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು.
ನಂತರ ಕಾರ್ಯಕ್ರಮ ಉದ್ಘಾಟಿಸಿ ಬಸನಗೌಡ ಪೊಲೀಸಪಾಟೀಲ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕರವೇ ಮಾತನಾಡಿ ಮಂಗಳೂರು ಗ್ರಾಮದಲ್ಲಿ ಸುಮಾರು 19 ವರ್ಷಗಳಿಂದ ಸತತವಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ಘಟಕದ ಎಲ್ಲಾ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದರು. ಮುಂದಿನ 20ನೇ ವರ್ಷದ ಕರವೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕರವೇ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡ್ರ ಈ ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಕರೆಸುವುದಾಗಿ ಹೇಳಿದರು.
ಈರಪ್ಪ ಕುಡಗುಂಟಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮಾತನಾಡಿ ಮಂಗಳೂರು ಗ್ರಾಮದ ಕರವೇ ಕಾರ್ಯಕರ್ತರು ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಂದಿನ ವರ್ಷ ಸಾಮೂಹಿಕ ವಿವಾಹಗಳನ್ನು ಈ ಗ್ರಾಮದಲ್ಲಿ ಮಾಡಲಿ ಆ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಕಳಕಪ್ಪ ಕಂಬಳಿ ಮಾಜಿ ತಾಲೂಕ ಪಂಚಾಯತ ಉಪಾಧ್ಯಕ್ಷರು ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ಘಟಕದವರು ಈ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀರನ್ನ ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
ವಿಶ್ವನಾಥ ಮರಿಬಸಪ್ಪನವರ ಮಾಜಿ ತಾಲೂಕು ಪಂಚಾಯತ ಉಪಾಧ್ಯಕ್ಷರು ಮಾತನಾಡಿ ನಮ್ಮ ಮಂಗಳೂರು ಗ್ರಾಮದ ಕರವೇ ಕಾರ್ಯಕರ್ತರು ಪ್ರತಿ ವರ್ಷ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿಸಿ ಈ ಗ್ರಾಮದ ಜನರಿಗೆ ಮನೋರಂಜನೆ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.
ನಿಂಗನಗೌಡ್ರ ಎಸ್. ಮಾಲಿಪಾಟೀಲ ಜಿಲ್ಲಾ ಗೌರವಾಧ್ಯಕ್ಷರು ಕರವೇ ಗದಗ ಮಾತನಾಡಿ ಸುಮಾರು 19 ವರ್ಷಗಳಿಂದ ನಮ್ಮ ಗ್ರಾಮದ ಶ್ರೀ ಮಂಗಳೇಶ್ವರ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ಘಟಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನ ಗುರುತಿಸಿ ಸನ್ಮಾನ ಮಾಡುತ್ತಿರುವುದು ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮಾಡುತ್ತಾ ಬರುತ್ತಿದೆ ಎಂದರು. ಮುಂದಿನ ವರ್ಷ 20ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಕರವೇ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡ್ರ ಕರೆಸಿ ಉಚಿತ ಸಾಮೂಹಿಕ ವಿವಾಹ ಮಾಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಭುವನೇಶ್ವರಿ ತಾಯಿಗೆ ಪುಷ್ಪ ನಮನ ಮಾಡಲಾಯಿತು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಶರಣಪ್ಪ ಉಮಚಗಿ ಉಪನ್ಯಾಸಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆ ಮಂಗಳೇಶ ಎಲಿಗಾರ ಶಿಕ್ಷಕರು ಸ್ವಾಗತ ರವೀಂದ್ರನಾಥ ಕೊಟ್ರಪ್ಪ ತೋಟದ ಪತ್ರಕರ್ತರು ಸರ್ವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿ.ಗಿರೀಶಾನಂದ ಜ್ಞಾನ ಸುಂದರ ಜಿಲ್ಲಾಧ್ಯಕ್ಷರು ಕೊಪ್ಪಳ ಕರವೇ, ರವಿಕುಮಾರ ಎಂ. ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು, ಬಸವರಾಜ ಬಳ್ಳಾರಿ ಜಿಲ್ಲಾಧ್ಯಕ್ಷರು ಸರಕಾರಿ ನೌಕರ ಸಂಘ ಗದಗ,ಶಿವಪುತ್ರಪ್ಪ ಶಿವಶಿಂಪಿ,ಈರಣ್ಣ ಹಳ್ಳಿಕೇರಿ, ಎಂ. ಬಿ. ಅಳವಂಡಿ,ಹನುಮಂತ ಬೆಸ್ತರ, ರಮೇಶ ಹಾಲವರ್ತಿ,ಸಂಗಮೇಶ ಗದಗ,ಶರಣಪ್ಪ ಹ್ಯಾಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಮಂಜುನಾಥ ಬಂಡಿ ಸದಸ್ಯರು ವಿ ಎಸ್ ಎಸ್ ಎನ್, ಪ್ರಶಾಂತ ಅಳವಂಡಿ, ಮುತ್ತಣ್ಣ ಬಾರಿನರ, ಬಸವರಾಜ ಪೂಜಾರ, ಅನಿಲ ಕಲ್ಲಬಾವಿ ಪತ್ರಕರ್ತರು,ಪ್ರಸನ್ನ ಹಿರೇಮಠ ಪತ್ರಕರ್ತರು, ರವಿ ಆಗೋಲಿ ಪತ್ರಕರ್ತರು,ಅಂಬಳೆಪ್ಪ ಉಪ್ಪಾರ, ನೀಲನಗೌಡ್ರ ಪೋಲೀಸಪಾಟೀಲ, ಕಳಕೇಶ ಬಂಡ್ರಕಲ್, ವಿರೇಶ ಇಟಗಿ,ಶರಣಪ್ಪ ಎಮ್ಮಿ, ಕಳಕೇಶ ಹಡಪದ, ಸಂಜೀವ ಹಡಪದ, ಶ್ರೀನಿವಾಸ ಕೀರ್ತಗೌಡ್ರ ಬಸವರಾಜ ಕಾಡಮ್ಮನವರ, ಭರಮಪ್ಪ ಎಮ್ಮಿ, ಈರಣ್ಣ ಎಮ್ಮಿ, ಶಿವು ಉಮಚಗಿ,ಆನಂದ ಬಡಿಗೇರ, ಮಲ್ಲಪ್ಪ ಹೂಗಾರ,ಮುತ್ತು ಲಾಡಿ,ಪ್ರಕಾಶ ತೊದ್ಲ್, ಸಂತೋಷ ಪೊಲೀಸಪಾಟೀಲ,ಸಂಗಯ್ಯ ವಣಗೇರಿಮಠ, ಹಾಗೂ ಅನೇಕ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಂತರ ರಸಮಂಜರಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713