*ಕ್ಲಸ್ಟರ್ ಮಟ್ಟದ ಎಫ್. ಎಲ್‌. ಎನ್. ಕ್ಲಸ್ಟರ್ ಮಟ್ಟದ ಹಬ್ಬ*

*ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ : ಗೌರಿ**

ಕುಕನೂರು: ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಮಾಡಬೇಕು ಎಂದು ಉಪನ್ಯಾಸಕಿ ಗೌರಿ ಯವರು ಹೇಳಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಮಂಗಳೂರಿನಲ್ಲಿ 2025 26ನೇ ಸಾಲಿನ ಕ್ಲಸ್ಟರ್ ಮಟ್ಟದ ಎಫ್ ಎಲ್ ಏನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ.

ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು. ಕಲಿಕೆಯನ್ನು ಸಂತೋಷದಾಯಕ ಅನುಭವವನ್ನಾಗಿ ಮಾಡಲು ಆಯೋಜಿಸಲಾಗುವ ಒಂದು ವಿಶೇಷ ಕಾರ್ಯಕ್ರಮವಾಗಿದ್ದು. ಇದು ಕಲಿಕಾ ಚೇತರಿಕೆ ಕಾರ್ಯಕ್ರಮದ ಅಂಗವಾಗಿದೆ. ಇದರಲ್ಲಿ ಮಕ್ಕಳನ್ನು ಚಟುವಟಿಕೆಗಳ ಮೂಲಕ ಗುರುತಿಸಬಹುದು ಎಂದರು.
ಕಲಿಕೆ ಎನ್ನುವುದು ಪುಸ್ತಕದಿಂದ ಕಲಿಯುವಂತದ್ದು ಅಲ್ಲ ಅನುಭವದಿಂದ ಕಲಿಯುವಂತದ್ದು,
ಈ ಕಲಿಕಾ ಹಬ್ಬದಲ್ಲಿ ಕಸದಿಂದ ರಸ ಮಾಡುವ ಶಕ್ತಿಯನ್ನು ತುಂಬಿದೆ,
ಒಂದು ಹೊತ್ತಿನ ಊಟ ಕಡಿಮೆಯಾದರೂ ಸರಿ ಶಿಕ್ಷಣ ನೀಡಿ ಎನ್ನುವ ಅಂಬೇಡ್ಕರ್ ಅವರ ವ್ಯಾಖ್ಯವನ್ನು ಪಾಲಿಸಿ,
ಶಿಕ್ಷಣ ಎನ್ನುವುದು ಹುಲಿ ಹಾಲು ಇದ್ದಂತೆ ಅದನ್ನು ಕುಡಿದವನು ಘರ್ಜಿಸಲೇಬೇಕು,
ಉತ್ತಮ ಶಿಕ್ಷಣ ಪಡೆದುಕೊಂಡವರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಸಾಧ್ಯ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಬಿ ಆರ್ ಪಿ ರವಿ ಮಳಗಿ ಮಾತನಾಡಿ
ಎಫ್ಎಲ್ಎನ್ ಕಲಿಕಾ ಹಬ್ಬ ಒಂದರಿಂದ ಐದನೇ ತರಗತಿಯವರೆಗೆ ನಡೆಯುವ ಪಠ್ಯೇತರ ಚಟುವಟಿಕೆಯಾಗಿದೆ,
ಮಕ್ಕಳಿಗೆ ಕನ್ನಡದ ವಿಷಯದಲ್ಲಿ ಗಣಿತ ವಿಷಯದಲ್ಲಿ ಸಂಭ್ರಮದೊಂದಿಗೆ ಚಟುವಟಿಕೆಗಳೊಂದಿಗೆ ಮಕ್ಕಳನ್ನು ಗುರುತಿಸಿ ಅವರಿಗೆ ನಡೆಸುವಂತಹ ಒಂದು ಚಟುವಟಿಕೆ ಆಗಿದೆ,
ಈ ಕಲಿಕಾ ಹಬ್ಬದಲ್ಲಿ ಒಟ್ಟು ಹನ್ನೊಂದು ಸ್ಪರ್ಧೆಗಳಿರುತ್ತವೆ ಆದರೆ ನಾವು ಇಲಾಖೆಯ ವತಿಯಿಂದ ಏಳು ಸ್ಪರ್ಧೆಗಳಿಗೆ ಅವಕಾಶವನ್ನು ತೆಗೆದುಕೊಳ್ಳಲಾಗಿದೆ,
ಅದರಲ್ಲಿ ಗಟ್ಟಿ ಓದು, ಸಂತೋಷದಾಯಕ ಗಣಿತ,ರಸಪ್ರಶ್ನೆ, ಆರೋಗ್ಯ ಮತ್ತು ಪೌಷ್ಟಿಕಾಂಶ, ಪೋಷಕರ ಹಾಗೂ ಶಿಕ್ಷಕರ ಸಂಬಂಧ ಕುರಿತು ಚಟುವಟಿಕೆ ಇರಬಹುದು,
ಮಕ್ಕಳಲ್ಲಿ ತೊಡಗಿರುವಂತ ಪ್ರತಿಭೆಯನ್ನು ಕನ್ನಡ ಮತ್ತು ಗಣಿತ ವಿಷಯಗಳಲ್ಲಿ ಸ್ಪರ್ಧೆ ಹಾಗೂ ಚಟುವಟಿಕೆಯ ಮೂಲಕ ತಿಳಿದುಕೊಳ್ಳಲು ಅಂಬೇಡ್ಕರ್ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ
ಅನ್ನಪೂರ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಟಿ.ಜಿ ದಾನಿ ಅಕ್ಷರ ದಾಸೋಹ ಅಧಿಕಾರಿ ಯಲಬುರ್ಗಾ, ಶಿವಪ್ಪ ಉಪ್ಪಾರ ಬಿ ಆರ್ ಪಿ, ಸುರೇಶ ಮಡಿವಾಳರ, ಮಹಾವೀರ ಕಲಬಾವಿ, ರಾಘವೇಂದ್ರ ಹಳ್ಳಿ, ನಾಗರಾಜ ಪ್ರಭಾರಿ ಮುಖ್ಯೋಪಾಧ್ಯಾಯ, ಯಮನೂರಪ್ಪ ಭಜಂತ್ರಿ ಶಿಕ್ಷಕರು, ನಾಗರಾಜ ಜನಾದ್ರಿ, ಸುನಿತಾ ಬೆಣಕಲ, ಶಕುಂತಲಾ, ಪನ್ನಗ ದೇಶಪಾಂಡೆ, ರವಿ ಅಗೋಲಿ, ಚನ್ನಬಸಮ್ಮ, ಬಾಲರಾಜ ಚಲವಾದಿ, ಬಸವರಾಜ ಪೂಜಾರ್, ಫಕೀರಪ್ಪ ಮೂಲಿಮನಿ, ಶಂಕ್ರಪ್ಪ ಕವಡಿಮಠ, ಮುದುಕಪ್ಪ ಕಂದಗಲ್, ಬಸವನಗೌಡ ಪಾಟೀಲ್, ರಮೇಶ್ ಪೂಜಾರ, ಲಿಂಗಪ್ಪ ನರಸಾಪುರ, ಮಂಗಳೇಶ್ ಯಲಿಗಾರ್, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರಗಳು ಗ್ರಾಮದ ಗುರು ಹಿರಿಯರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು ಶಿಕ್ಷಕರು, ಶಿಕ್ಷಕಿಯರು ಶಾಲಾ ವಿದ್ಯಾರ್ಥಿಗಳು ಇತರರು ಇದ್ದರು.

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *