ಕೊಪ್ಪಳ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 4 ಅಭ್ಯರ್ಥಿಗಳು ವಿಜಯಶಾಲಿ

ಕುಕನೂರು:-ಜ.13-
ಮಂಗಳವಾರ ದಂದು ನಡೆದ ಕೊಪ್ಪಳ ಜಿಲ್ಲಾ ಯೋಜನಾ ಸದಸ್ಯರುಗಳ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಚುನಾವಣೆಯಲ್ಲಿ 6 ಜನ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದು.

ಭಾರತೀಯ ಜನತಾ ಪಾರ್ಟಿಯ 4 ಅಭ್ಯರ್ಥಿಗಳಾದ ಪರಶುರಾಮ ನಮಂತಪ್ಪ ನಾಯಕ್, ಬಾಲರಾಜು ಯಲ್ಲಪ್ಪ ಗಾಳಿ, ಶಿವನಗೌಡ ಮರಿಗೌಡ ಪುಂಡಗೌಡ್ರು, ಸೋಮಶೇಖರಪ್ಪ ವಿರೂಪಾಕ್ಷಪ್ಪ ಭೇರಗಿ, ಕಾಂಗ್ರೆಸ್ ಅಭ್ಯರ್ಥಿಗಳಾದ ಈಶಪ್ಪ ಅಮರಪ್ಪ ಇಟ್ಟಂಗಿ, ಕಲ್ಲಬಾಗಿಲಮಠ ಸಿದ್ದೇಶ ಕುಮಾರ, ವಿಜಯಶಾಲಿಗಳಾದರು.

ಭಾರತೀಯ ಜನತಾ ಪಾರ್ಟಿಯ ನಾಲ್ಕು ಜನ ಅಭ್ಯರ್ಥಿಗಳು ವಿಜಯಶಾಲೆಗಳಾಗಿ ಹೊರಹೊಮ್ಮಿದ್ದಕ್ಕೆ ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಸಿಹಿ ಹಂಚುವ ಮುಖಾಂತರ ಮುಖಾಂತರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಾಂತೇಶ್ ಹೂಗಾರ ಮಾತನಾಡಿ ಈ ಚುನಾವಣೆಯು ಮುಂದಿನ ದಿನಗಳಲ್ಲಿ ಬರುವಂತಹ ಎಂ.ಪಿ, ಎಂ. ಎಲ್. ಎ ಚುನಾವಣೆಯಲ್ಲಿ ವಿಜಯಶಾಲಿಗಳಾಗುವ ಮುನ್ಸೂಚನೆ ನೀಡಿದೆ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಬಸವರಾಜ ಕ್ಯಾಟರ್ ಒಳ್ಳೆಯ ಸಂಘಟನೆ ಮತ್ತು ಮಾರ್ಗದರ್ಶನದ ಮೇರೆಗೆ ಇಂದು ನಾಲ್ಕು ಜನ ಸದಸ್ಯರುಗಳು ಅತ್ಯಂತ ಪ್ರಚಂಡ ಬಹುಮತದಿಂದ ಬಂದದ್ದು ,ಕುಕನೂರು, ಭಾಗ್ಯನಗರ, ತಾವರಗೇರಿ, ಕನಕಗಿರಿ ಹಾಗೂ ಕಾರಟಿಗಿಯ ಪಟ್ಟಣ ಪಂಚಾಯಿತಿಯ ಚುನಾಯಿತ ಸದಸ್ಯರುಗಳಿಗೆ ಸಂಘಟನೆಗೆ ಮತ್ತು ಗೆಲುವಿಗೆ ಕಾರಣವಾದ ಭಾರತೀಯ ಜನತಾ ಪಕ್ಷದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದರು.

 

ಈ ಸಂದರ್ಭದಲ್ಲಿ
ಬಸವರಾಜ ಹಾಳಕೇರಿ,
ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಜಗನ್ನಾಥ ಭೋವಿ, ಮಲ್ಲಿಕಾರ್ಜುನ್ ಚೌದರಿ, ವೀರೇಶ್ ಸಬರದ, ಕರಿಬಸಯ್ಯ ಬಿನ್ನಾಳ, ಮಂಜುನಾಥ ಮಾಲಗಿತ್ತಿ, ಸಾಧಿಕ ಪಾಶ ಕಾಜಿ, ನೀಲಕಂಠಪ್ಪ ಬಣ್ಣದ ಬಾವಿ, ನಾಗರಾಜ ನಿಕ್ಕಂ, ನಾಗರಾಜ ಮ್ಯಾಳಿ, ಲಕ್ಷ್ಮಣ ಕಾಳೆ, ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರು ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಮತ್ತು ಕುಕುನೂರಿನ ನಾಗರಿಕರು ಇತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *