ವಿವೇಕಾನಂದರ ಚಿಂತನೆಗಳ ಪಾಲನೆಯಿಂದ ಯಾವುದೇ ಸಮಸ್ಯೆ ಮೆಟ್ಟಿ ನಿಲ್ಲಲು ಸಾಧ್ಯ- ಶ್ರೀ ಚೈತನ್ಯಾನಂದ ಸ್ವಾಮೀಜಿ

ಕುಕನೂರು:- ಇಂದಿನ ಯುವ ಜನಾಂಗದಲ್ಲಿ ಧೈರ್ಯ ಆತ್ಮವಿಶ್ವಾಸ ಕ್ಷೀಣಿಸುತ್ತಿದೆ, ವಿವೇಕಾನಂದರ ಆದರ್ಶಗಳನ್ನು ಪಾಲಿಸಿದಲ್ಲಿ ಯಾವುದೇ ಸಮಸ್ಯೆ, ಸವಾಲುಗಳನ್ನು ಮೆಟ್ಡ ನಿಲ್ಲಲು ಸಾಧ್ಯ ಎಂಬುದಾಗಿ ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕುಕನೂರು ತಾಲೂಕಿನ ಬಾನಾಪುರದ ಬಳಿಯ ಕೊಪ್ಪಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕೊಪ್ಪಳ ವಿಶ್ವವಿದ್ಯಾಲಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 164ನೇ ಜನ್ಮ ದಿನಾಚರಣೆ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮನುಷ್ಯ ಕೇವಲ ಮಾಂಸದ ಮುದ್ದೆಯಲ್ಲ, ಅವನು ಜೀವ ರಾಶಿಗಳಲ್ಲಿಯೇ ಅತಿ ವಿವೇಕವನ್ನು ಹೊಂದಿರುವ ಜೀವ. ಅವನಲ್ಲಿ ಅದಮ್ಯ ಚೇತನ, ಶಕ್ತಿ ಇದೆ. ಅದನ್ನು ಯಿವ ಜನಾಂಗ ಎಚ್ಚರಿಸಿಕೊಳ್ಳುವ ಮೂಲಕ ಹಾಗೂ ನಿರಂತರ ಉತ್ಸಾಹ, ಸತತ ಪ್ರಯತ್ನ, ತಾಳ್ಮೆಯ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ. ಎಸ್. ವಿ.ಡಾಣಿಯವರು ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಸೇರಿದಂತೆ ಅನೇಕ ಮಹನೀಯರ ಅನುಭಾವ ನುಡಿಗಳು, ವಿಚಾರಗಳ ಪಾಲನೆಯಾಗಬೇಕಾಗಿದೆ. ಬುದ್ದ, ಬಸವ, ಅಂಬೇಢ್ಕರ, ಲೋಹಿಯಾ ಸೇರಿದಂತೆ ಹಲವು ಮಹಾತ್ಮರು ಶೋಷಿತರ ಧ್ವನಿಯಾಗಿ ಸೇವೆಗೈದಿದ್ದಾರೆ. ಇಂತಹವರ ಅನುಭವ ನುಡಿಗಳ ಪಾಲನೆ, ಆಚರಣೆ ಸದ್ಯದ ಅಗತ್ಯತೆಯಾಗಿದೆ ಎಂದರು.

ಇದೇ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ ಬಿ. ಜಾಬಗೌಡರ ಅವರು ಮಾತನಾಡಿ, ಯಾರಲ್ಲಿ ಅದಮ್ಯ ಶಕ್ತಿ,ವಿವೇಚನೆ, ಹಾಗೂ ಛಲ ಇರುತ್ತದೆಯೋ ಅವರೆ ನಿಜವಾದ ಯುವಕರು. ಯುವಕರು ಸದೃಢರಾದರೆ, ದೇಶ ಸದೃಢವಾಗುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ವಿ.ವಿ ನೂತನ ಕುಲ ಸಚಿವರಾದ ಡಾ. ವೈ.ಬಿ.ಅಂಗಡಿಯವರು, ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ಮಾತನಾಡಿ, ಯುವಕರು ಸ್ವಾವಲಂಬನೆ ಬದುಕನ್ನು ಸಾಗಿಸುವ ಮೂಲಕ ಸಾಧನೆ ಮೆರೆಯಲು, ಈ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಲು ತಿಳಿಸಿದರು. ಈ ವೇಳೆ ನೂತನ ಕುಲಪತಿಗಳಾದ ಪ್ರೊ ಎಸ್.ವಿ. ಡಾಣಿಯವರಿಗೆ,ಕುಲಸಚಿವರಾದ ಡಾ. ವೈ.ಬಿ.ಅಂಗಡಿಯವರಿಗೆ, ಶ್ರೀ ಚೈತನ್ಯಾನಂದ ಸ್ವಾಮೀಜಿಗಳಿಗೆ ,ವಿಠ್ಠಲ ಜಾನಗೌಡರಿಗೆ, ಪ್ರೊ.ತಿಮ್ಮಾರೆಡ್ಡಿ ಮೇಟಿಯವರಿಗೆ ಸನ್ಮಾನಿಸಲಾಯಿತು . ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ,ಪ್ರಾರ್ಥನೆ ಪುಷ್ಪಾರ್ಪಣೆ ಸಹ ಮಾಡಲಾಯಿತು
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಉಷಾ ಪ್ರಾರ್ಥಿಸಿದರು, ಪ್ರಾದ್ಯಾಪಕರಾದ ಡಾ ಗೀತಾ ಪಾಟೀಲ ಸ್ವಾಗತಿಸಿದರು, ಡಾ ಬಸವರಾಜ ಗಡಾದ ನಿರೂಪಣೆ ಮಾಡಿದರು, ಡಾ. ವೀರೇಶ ಉತ್ತಂಗಿ ವಂದಿಸಿದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713