ಹಲಗೇರಿ ಶಾಲಾ ಮಕ್ಕಳಿಂದ ಸೇವೆ  ಶ್ರೀ ಗವಿಮಠದ ಸೇವಾ ಕಾರ್ಯ

ಕೊಪ್ಪಳ: ತಾಲೂಕಿನ ಹಲಗೇರಿ ಗ್ರಾಮದ ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆ ವಿದ್ಯಾರ್ಥಿಗಳು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಶ್ರೀ ಗವಿಮಠದ ಸೇವಾ ಕಾರ್ಯ ಮಾಡುವ ಮೂಲಕ ಶ್ರೀಮಠದ ಕೃಪೆಗೆ ಪಾತ್ರರಾದರು. 

ಬೆಳಗ್ಗೆ 9 ಗಂಟೆಗೆ ನಾಲ್ಕು ಬಸ್ ನಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಆಗಮಿಸಿ ಭಕ್ತಾಧಿಗಳಿಗೆ ಮಹಾಪ್ರಸಾದ ನೀಡುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು. ಸಾಯಂಕಾಲ 5 ಗಂಟೆಯವರೆಗೆ ಸೇವೆ ಸಲ್ಲಿಸಿ ಮುರುಳಿ ಗ್ರಾಮಕ್ಕೆ ತೆರಳಿದರು. 

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವನಗೌಡ ಪಾಟೀಲ್, ಗವಿಸಿದ್ದನಗೌಡ ಪಾಟೀಲ್, ಶಾಂತನಗೌಡ ಪಾಟೀಲ್, ಶರಣಪ್ಪ ಬಿನ್ನಾಳ, ತಿಪ್ಪಯ್ಯ ಹಿರೇಮಠ, ಕಳಕನಗೌಡ, ಶ್ರೀ ರಾಜರಾಜೇಶ್ವರಿ ಶಾಲೆಯ ಸಂಸ್ಥಾಪಕ ವೀರಣ್ಣ ಕಂಬಳಿ, ಪಿಯು ಕಾಲೇಜ್ ಉಪನ್ಯಾಸಕರಾದ ವೀರೇಶ್ ಕಾತರಕಿ, ಸಿದ್ದಾರಡ್ಡಿ ಮೇಟಿ, ಶರಣಪ್ಪ ಮಾಗಳದ, ಕೊಟ್ರಪ್ಪ, ಶರಣಬಸವರಾಜ 

 ಶಿಕ್ಷಕರಾದ ಗವಿಸಿದ್ದಯ್ಯ ಸಸಿಮಠ, ಅಶ್ವಿನಿ ಸೋಮನಕಟ್ಟಿ, ಮಹೇಶ್ವರಿ ಪತ್ತಾರ, ಪವಿತ್ರ ಅಂಗಡಿ, ಚಾಲಕರಾದ ಸುರೇಶ, ಮಹಾಂತೇಶ್, ಶಶಿಕುಮಾರ್, ಸಹದೇವಪ್ಪ ಅಕ್ಕಿ ಸೇರಿದಂತೆ ಇತರರು ಇದ್ದರು.

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *