ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳ ಓದು-ಬರಹ ಮತ್ತು ಗಣಿತ ಪ್ರಾವೀಣ್ಯತೆ ವೃದ್ಧಿ-:ಮಹೇಶ ಸಬರದ 

ಕುಕನೂರು : ಸ್ಪಷ್ಟ ಓದು ಶುದ್ಧ ಬರಹ ಮತ್ತು ಸರಳ ಗಣಿತದ ಪ್ರಾವೀಣ್ಯತೆಯನ್ನು ತೋರ್ಪಡಿಸಲು ಸೂಕ್ತ ವೇದಿಕೆಯಾಗಿ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಎಂದು ಮಹೇಶ ಸಬರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರು ಅಭಿಪ್ರಾಯಪಟ್ಟರು.

2025 -26 ನೇ ಸಾಲಿನ ಕುಕನೂರು ಗ್ರಾಮೀಣ ಕ್ಲಸ್ಟರ್ ಮಟ್ಟದ ಎಫ್ ಎಲ್ ಏನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಡೂರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಜ್ಯೋತಿ ಉದ್ಘಾಟನೆ ನೆರವೇರಿಸುವ ಮೂಲಕ ಮಾತನ್ನಾಡುತ್ತಾ ಕಲಿಕೆಯ ಕಾಠಿಣ್ಯತೆ ಸುಲಭೀಕರಿಸಿ ವಿದ್ಯಾರ್ಥಿಗಳಿಗೆ ಕಲಿಸಲು ಎಫ್ ಎಲ್ ಎನ್. ಎಂಬಂತಹ ಇಲಾಖಾ ಯೋಜನೆಗಳಿಂದ ಕಲಿಕಾ ಮಟ್ಟವನ್ನು ಸುಧಾರಿಸುವುದರೊಂದಿಗೆ ವಾತಾವರಣ ಸೃಷ್ಟಿಯಾಗುತ್ತಿದೆ. ಸಂತಸದಾಯಕ ಕಲಿಕಾ ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಇಲಾಖಾಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಇವರೊಂದಿಗೆ ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ಅತ್ಯಮೂಲ್ಯವಾಗಿದೆ ಎಂದರು.

ಇತರ ಶಾಲೆಗಳಿಗಿಂತ ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆಯೆಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಯಲು ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಮಾರುತಿ ತಳವಾರ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಕನೂರು ಹೇಳಿದರು.

ಪ್ರಾಸ್ತಾವಿಕ ನುಡಿಯನ್ನು ಸಿ ಆರ್ ಪಿ ಪೀರಸಾಬ್ ದಪೇದಾರ್ ಮಾತನಾಡಿ  ಶಿಕ್ಷಣವೆಂದರೆ ಕೇವಲ ಪಾಠಪುಸ್ತಕಗಳ ಜ್ಞಾನವಲ್ಲ. ಅದು ಮಗುವಿನ ಆತ್ಮವಿಶ್ವಾಸವನ್ನು ಬೆಳೆಸುವ ಶಕ್ತಿ, ಅವನ ಭವಿಷ್ಯವನ್ನು ರೂಪಿಸುವ ದೀಪವಾಗಿದೆ.ಇಂದು ನಾವು ನೋಡುತ್ತಿರುವ ಈ FLN ಕಲಿಕಾ ಹಬ್ಬ ಮಕ್ಕಳಲ್ಲಿ ಮೂಲ ಓದು, ಬರವಣಿಗೆ ಮತ್ತು ಗಣಿತದ ಬಲಿಷ್ಠ ಅಡಿಪಾಯವನ್ನು ನಿರ್ಮಿಸುವ ಅತ್ಯಂತ ಮಹತ್ವದ ಪ್ರಯತ್ನವಾಗಿದೆ.ಬಲವಾದ ಅಡಿಪಾಯವಿದ್ದರೆ ಭವಿಷ್ಯದ ಕಟ್ಟಡವು ಸದೃಢವಾಗಿರುತ್ತದೆ.ಒಂದು ಮಗು ಚೆನ್ನಾಗಿ ಓದಲು ಕಲಿತರೆ ಅದು ತನ್ನ ಬದುಕನ್ನು ತಾನೇ ಓದಲು ಕಲಿತಂತೇ. ಒಂದು ಮಗು ಲೆಕ್ಕ ಮಾಡಲು ಕಲಿತರೆ ಜೀವನದ ಸಮಸ್ಯೆಗಳನ್ನು ಪರಿಹರಿಸುವ ಧೈರ್ಯವನ್ನು ಅದು        ಗಳಿಸಿಕೊಂಡಂತೇ.ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿರುವ ಪ್ರತಿಭೆಯ ರುತಿಸಿ, ಅವರಿಗೆ “ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಕೊಡುತ್ತವೆ.ಇದೇ ನಿಜವಾದ ಶಿಕ್ಷಣದ ಜಯ.

ಗಣ್ಯಮಾನ್ಯರೇ, ನಿಮ್ಮ ಮಾರ್ಗದರ್ಶನ, ಆಶೀರ್ವಾದ ಮತ್ತು ಬೆಂಬಲ ಈ ರೀತಿಯ ಶಿಕ್ಷಣಾತ್ಮಕ ಚಟುವಟಿಕೆಗಳಿಗೆ ಬಲವಾಗಬೇಕು.ಶಾಲೆ, ಮನೆ ಮತ್ತು ಸಮಾಜ ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಬೆಳಗುತ್ತದೆ.ನಾವು ಇಂದು ಮಕ್ಕಳಲ್ಲಿ ಒಂದು ಚಿಕ್ಕ ಬೆಳಕು ಹಚ್ಚಿದರೆ, ಅದೇ ಬೆಳಕು ನಾಳೆ ಸಮಾಜವನ್ನು ಬೆಳಗಿಸುತ್ತದೆ.ಮಕ್ಕಳ ಕಲಿಕೆಯನ್ನು ಹಬ್ಬದಂತೆ ಆಚರಿಸುವ ಈ ಸಾರ್ಥಕ ಪ್ರಯತ್ನ ನಿರಂತರವಾಗಿ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ವೀರಣ್ಣ ಚೌಡಿ ಎಸ್ ಡಿ ಎಂ ಸಿ ಅಧ್ಯಕ್ಷರು ಮಾತನಾಡಿ ಇಂದು ಗ್ರಾಮದಲ್ಲಿ ಮಕ್ಕಳಿಗೆ ಇಂತಹ ಕಲಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತುಂಬಾ ಸಂತೋಷವೆನಿಸುತ್ತದೆ. ಕಲಿಕೆಯಿಂದ ಹಿಂದುಳಿದ ಮಕ್ಕಳು ಕಲಿಯಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟ ಇಲಾಖೆಯವರಿಗೆ ಧನ್ಯವಾದಗಳನ್ನು ತಿಳಿಸಿದರು.

ಆಡೂರ ಗ್ರಾಮದ ಮುಖಂಡರು ಹಾಗೂ ಹಿರಿಯರು ದೇವೇಂದ್ರಪ್ಪ ಶಿರೂರು ಮಾತನಾಡಿ ಮನುಷ್ಯನಾಗಿ ಜನ್ಮ ತಾಳಿದ ಮೇಲೆ ಸ್ವಾರ್ಥಕ ಬದುಕು ನಡೆಸಬೇಕು. ವಿದ್ಯಾರ್ಥಿ ಜೀವನದಲ್ಲಿ ಏನಾದರೂ ಸಾಧಿಸುವ ಮೂಲಕ ಜೀವನ ಸ್ವಾರ್ಥಕತೆ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಸ್ವಾಗತ ನಿರೂಪಣೆಯನ್ನು ಶಿಕ್ಷಕ ಕಲ್ಮೇಶ್ ಹಿರೇಮಠ ನೆರವೇರಿಸಿದರು.

ಅಕ್ಕಮಹಾದೇವಿ ಅಧಿಕಾರಿ ಶಿಕ್ಷಕಿ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಗಪ್ಪ ಕಿಂದ್ರಿ ಮುಖ್ಯೋಪಾಧ್ಯಾಯರು,ಲಿಂಗರಡ್ಡಿಪ್ಪ ಕರುಮುಡಿ, ಸಿದ್ದನಗೌಡ ರಬ್ಬನಗೌಡ ಪಿ ಡಿ ಓ, ಶಾಂತ ಹಿರೇಮಠ ಮಹಿಳಾ ಕಾರ್ಯದರ್ಶಿ, ಪ್ರಭು ವಕ್ಳದ, ಪ್ರಭು ಶಿವನಗೌಡ, ಉಮೇಶ್ ಕಂಬಳಿ, ಅಬ್ದುಲ್ ಕಲೀಲ್, ಸಂಗಪ್ಪ ರಾಜೂರ, ರಾಜಶೇಖರ್ ಹಿರೇಮಠ, ನಾಗರಾಜ ಹನಸಿ, ಶಿವಕುಮಾರ ಮುತ್ತಾಳ, ಮಹೇಶ ಬೆದವಟ್ಟಿ , ಸಂಗಪ್ಪ ಕೊಪ್ಪದ, ಪ್ರಭುರಾಜ್ ಮುತ್ತಾಳ, ಚಾಂದಾಹುಸೇನ್ ಮುಕ್ಕಪ್ಪನವರ್, ಮೌನೇಶ್ ಪತ್ತಾರ್, ರಮೇಶ ನಾಗೋಜಿ, ಫಕೀರಪ್ಪ ಚಲವಾದಿ, ಕೊಟ್ರೇಶಿ ಗೊಂದಿ, ಶರಣಪ್ಪ ತೊಂಡಿಹಾಳ, ಸುರೇಶ ಹೊಸಮನಿ, ಯಮನೂರಪ್ಪ ನಾಯಕ, ಹಾಗೂ ಗ್ರಾಮದ ಹಿರಿಯರು ಮುಖಂಡರು ಮತ್ತು ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರುಗಳು ಗ್ರಾಮದ ಗುರುಹಿರಿಯರು ವಿದ್ಯಾರ್ಥಿಗಳು ಇತರರು ಇದ್ದರು. 

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *