ಈಸ್ಟ್ ಪಾಯಿಂಟ್ ಆಸ್ಪತ್ರೆ ಡೈರಿ ಬಿಡುಗಡೆ!

ಕೊಪ್ಪಳ: ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ಆಡಳಿತ ಮಂಡಳಿಯವರು ಕೊಪ್ಪಳ ಶ್ರೀ ಗವಿಮಠದ ಹೆಸರಿನಲ್ಲಿ ಹೊರತಂದ ಡೈರಿಯನ್ನು ನಗರದ ದಿ. ಫಾರ್ಚೂನ್ ಹೋಟೆಲ್ ನಲ್ಲಿ ಪತ್ರಕರ್ತ ಕುಬೇರ ಮಜ್ಜಿಗಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವು ನಾಗನೂರ ಅವರನ್ನು ಸನ್ಮಾನಿಸಲಾಯಿತು. ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್ ಐ ವೆಂಕಟೇಶ್ ನಾಯಕ್, ಕೊಪ್ಪಳ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಶಶಿಕರ ಶೆಟ್ಟಿ, ಸಿದ್ದನಗೌಡ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹುಳ್ಳಿ, ಪತ್ರಕರ್ತ ಹುಸೇನ್ ಪಾಷಾ, ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವೀರಣ್ಣ ಕಂಬಳಿ, ಪೊಲೀಸ್ ಇಲಾಖೆ ಗುಂಡಪ್ಪ ಕುರ್ನಾಳ, ಉದ್ಯಮಿಗಳಾದ ಮಂಜುನಾಥ ಬಂಗಾಳಿ, ನಿಂಗನಗೌಡ ಪಾಟೀಲ್, ರಮೇಶ್ ಹೂವಿನಾಳ ಸೇರಿದಂತೆ ಇತರರು ಇದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713