ಎಫ್ಎಲ್ಎನ್ ಕಲಿಕಾ ಹಬ್ಬ ,ಕಲಿಕೆಯಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ:-ಮಹೇಶ ಸಬರದ

ಇತರ ಶಾಲೆಗಳು ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿದಿದ್ದಾರೆ ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಮಾರುತಿ ತಳವಾರ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಕನೂರು ಹೇಳಿದರು.

ಕುಕನೂರು ತಾಲೂಕಿನ ಗೊರ್ಲೆಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇಟಗಿ ಕ್ಲಸ್ಟರ್ ಮಟ್ಟದ 2025 -26ನೇ ಸಾಲಿನ. ಎಫ್ ಎಲ್ ಏನ್ ಕಲಿಕಾ ಹಬ್ಬ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹೇಶ ಸಬರದ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳ ಚಟುವಟಿಕೆಗಳು ಮಾತ್ರ ನಡೆಯುತ್ತವೆ. ಸರ್ಕಾರಿ ಶಾಲೆಯ ಕಿರಿಯ ಪ್ರಾಥಮಿಕ ಮಕ್ಕಳ ಕಲಿಕೆಯ ಬಗ್ಗೆ ಸಮುದಾಯದ ಗಮನ ಸೆಳೆಯುವಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗಿದೆ. ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಆಯಾಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಮಕ್ಕಳು, ಕಲಿಕೆಯ ಸಾಫಲ್ಯತೆಯನ್ನು ಪ್ರದರ್ಶಿಸುತ್ತಾರೆ ಸದವಕಾಶವಾಗಿ ಈ ಕಲಿಕಾ ಹಬ್ಬ ರೂಪುಗೊಂಡಿತು.ಕ್ಲಸ್ಟರ್ ಇತರ ಶಾಲೆಗಳು ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಯಲು ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಮಾರುತಿ ತಳವಾರ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಕನೂರ ಪ್ರತಿಯೊಬ್ಬ ವಿದ್ಯಾರ್ಥಿಗಳು ಯಾವುದೇ ವಿದ್ಯಾಭ್ಯಾಸದ ಬಗ್ಗೆ ಅದರಲ್ಲಿ ಸೋಲಿನ ಬಗ್ಗೆ ಚಿಂತಿಸದೆ, ಸೋಲು-ಗೆಲುವುಗಳ ಸಮಾನ ಸ್ವೀಕಾರದ ಮನೋಭಾವವನ್ನು ಎಳೆಯ ಮಕ್ಕಳಲ್ಲಿ ಬೆಳೆಸಲು ಇಂತಹ ಚಟುವಟಿಕೆಗಳು ಬೇಕು. ಶಾಲಾ ಸರ್ಕಾರಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ, ದಾಖಲಾತಿಯನ್ನು ಸುಧಾರಿಸುವ,ಸಮುದಾಯದೊಂದಿಗೆ ಬಾಂಧವ್ಯ ವೃದ್ಧಿಸುವ ಸೇತು ಕಾರ್ಯಕ್ರಮವನ್ನು ನಾವೆಲ್ಲರೂ ಯಶಸ್ವಿಗೊಳಿಸೋಣ.ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯನ್ನು ಪ್ರಸ್ತುತಪಡಿಸಲು ಅವಕಾಶವಿದೆ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಹೇಳಿದರು.
ಶೇಕಪ್ಪ ದಾಸರ ಸಿ ಆರ್ ಪಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ನೆರವೇರಿಸಿದರು.
ಚನ್ನಪ್ಪ ಗೌಡ ಮಾಲಿ ಪಾಟೀಲ್ ಗ್ರಾಮದ ಹಿರಿಯರು ಹಾಡಿನೊಂದಿಗೆ ಶಾಲೆಯ ಅಭಿವೃದ್ಧಿಯನ್ನು ಪ್ರಾರಂಭಿಸಿದರು.
ಸ್ವಾಗತ ಭಾಷಣವನ್ನು ಶಿಕ್ಷಕಿ ಮಂಜುಳಾ ನೆರವೇರಿಸಿದರು.
ಈರಣ್ಣ ಕೊನ್ನಾರಿ ಶಿಕ್ಷಕರ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಜಯ ಹಿರೇಮಠ ಮುಖ್ಯೋಪಾಧ್ಯಾಯರು,ಶರಣಗೌಡ ಮಾಲಿ ಪಾಟೀಲ್ ಎಸ್ ಡಿ ಎಂ ಸಿ ಅಧ್ಯಕ್ಷರು, ರತ್ನಾ ಎಸ್ ಡಿ ಎಂ ಸಿ ಉಪಾಧ್ಯಕ್ಷರು, ಲಿಂಗರಡ್ಡಿಪ್ಪ ಕರುಮುಡಿ, ಖಾದರ ಭಾಷಾ ಸೋಂಪುರ ಸಿಆರ್‌ಪಿ,ಪೀರಸಾಬ್ ದಪೇದಾರ ಸಿಆರ್‌ಪಿ, ಕರಬಸಯ್ಯ ಬಿನ್ನಾಳ, ಶರಣಯ್ಯ ಇಟಗಿ, ಶಿವಯ್ಯ ಅರಕೇರಿ, ಬಸಯ್ಯ ಹಿರೇಮಠ, ರುದ್ರಯ್ಯ ಸ್ವಾಮಿ,ಪ್ರಭಾಕರ ಅರ್ಕಲ್, ವೀರನಗೌಡ ಪಾಟೀಲ್ ನಿವೃತ್ತ ಶಿಕ್ಷಕರು, ಬಾಬುಸಾಬ್ ಕಿಲ್ಲೇದೆ , ಚನ್ನಬಸಯ್ಯ ಮುಖ್ಯೋಪಾಧ್ಯಾಯರು, ಗಿರಿಜಾ ಧರ್ಮಸಾಗರ, ಅಕ್ಕಮಹಾದೇವಿ ಹಿರೇಮಠ, ಬಸಮ್ಮ ಹಳ್ಳಿ, ಶೇಖಪ್ಪ ಅಂಗಡಿ, ಮಂಜುನಾಥ ಗೊನ್ನಳ್ಳಿ, ರವಿ ಲಮಾಣಿ, ಕಲ್ಲಯ್ಯ ಮೂಲಿಮನಿ, ಅರುಣ್ ಕುಮಾರ್ ಮನ್ನಾಪುರ, ಪ್ರಭು ವಕ್ಳದ, ರುದ್ರಯ್ಯ, ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಗುರುಹಿರಿಯರು ವಿದ್ಯಾರ್ಥಿಗಳು ಇತರರು ಇದ್ದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713