ಅತ್ಯಂತ ಸರಳ ಸಂಪನ್ನಗೊಂಡ ಸಿದ್ದಲಿಂಗೇಶ್ವರ ಮಹಾರಥೋತ್ಸವ

ಕುಕುನೂರು ತಾಲೂಕಿನ ಯಡಿಯಾಪುರ ಮಹಾ ಮಹಿಮ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಪಂಚ ಕಳಶ ಮಹಾ ರಥೋತ್ಸವವು ದಿನಾಂಕ 3/1/2026 ರಂದು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಮಹಾ ರಥೋತ್ಸವಕ್ಕೆ ಚಾಲನೆ
ಶ್ರೀ 108 ಷಟಸ್ಥಲ ಬ್ರಹ್ಮ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳುಅರಳೆಲೆ ಹಿರೇಮಠ ಚಳಗೇರಿ.ಪರಮಪೂಜ್ಯ ಶ್ರೀ ಮ ನಿ ಪ್ರ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಆಡ್ನೂರು- ರಾಜೂರು- ಗದಗ.ಶ್ರೀ ಷಟಸ್ಥಲ ಬ್ರಹ್ಮ 108 ಡಾ. ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಇಟಗಿ ಶಾಖಾ ಭೂ ಕೈಲಾಸ ಮೇಲುಗಡ್ಡಿಗೆ ಹಿರೇಮಠ ಚಿಕ್ಕಮ್ಯಾಗೇರಿ. ಅನ್ನದಾನೇಶ್ವರ ಶಾಖಾಮಠ ಮಹಾದೇವಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಶಿವಶಂಕರರವ್ ದೇಸಾಯಿ ಮಾಜಿ ತಾ.ಪಂ.ಸದಸ್ಯರು ಜಾತ್ರಾ ಮಹೋತ್ಸವ ಉದ್ದೇಶಿಸಿ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂದಪ್ಪ ಜವಳಿ ಅಧ್ಯಕ್ಷರು *ಶ್ರೀ ಸಿದ್ದೇಶ್ವರ ಸೇವಾ ಸಮಿತಿ* ವಹಿಸಿದ್ದರು .
ಹರೀಶ್ವರಸ್ವಾಮಿ ಹಿರೇಮಠದ ಕಾರ್ಯದರ್ಶಿಗಳು *ಶ್ರೀ ಸಿದ್ದೇಶ್ವರ ಸೇವಾ ಸಮಿತಿ* ಇವರು ಸರ್ವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕುಕನೂರು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಸಕಲ ಸದ್ಭಕ್ತಾದಿಗಳು ಆಗಮಿಸಿ ತನುಮನ ದನದಿಂದ ಸೇವೆ ಸಲ್ಲಿಸಿ ಶ್ರೀ ಸಿದ್ದೇಶ್ವರನ ಕೃಪೆಗೆ ಪಾತ್ರರಾದರು .ಡಿಯಾಪುರ ಗ್ರಾಮದ ಎಲ್ಲಾ ಹಿರಿಯರಿಗೆ, ಯುವಕ ಮಿತ್ರರಿಗೆ, ಎಲ್ಲಾ ಭಕ್ತಾದಿಗಳಿಗೆ ಶ್ರೀ ಸಿದ್ದೇಶ್ವರ ಸೇವಾ ಸಮಿತಿ ಯಡಿಯಾಪುರ ಅವರಿಂದ ಧನ್ಯವಾದಗಳು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713
