ಜಲವನ್ನು ಹಿತಮಿತವಾಗಿ ಬಳಕೆ ಮಾಡಿ ಜಲ ರಕ್ಷಣೆ ಮಾಡಿ:-ಪ್ರಕಾಶ ರಾವ್

ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಲಬುರ್ಗಾ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವ ತಳಕಲ್ ಗ್ರಾಮ ಪಂಚಾಯತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ತಳಕಲ್ ಗ್ರಾಮದಲ್ಲಿ 594ನೇ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಹೀರಾಬೇಗಂ ಅವರು ಉದ್ಘಾಟನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕೊಪ್ಪಳ ಜಿಲ್ಲಾ ನಿರ್ದೇಶಕರಾದ ಪ್ರಕಾಶ ರಾವ್ ಮಾತನಾಡಿ ಶುದ್ಧ ನೀರು ನಮ್ಮ ಜೀವನಕ್ಕೆ ಅವಶ್ಯವಾಗಿರುವ ಪಂಚಭೂತಗಳಲ್ಲಿ ನೀರು ಒಂದು ಪ್ರಮುಖವಾಗಿದೆ ನೀರು ಇಲ್ಲದೆ ನಮ್ಮ ಜೀವನವೇ ಇಲ್ಲ ಜೀವದಾರಕವಾಗಿರುವ ಈ ನೀರನ್ನು ನಾವು ಯೋಗ್ಯ ರೀತಿಯಲ್ಲಿ ಬಳಕೆ ಮಾಡಬೇಕು ನೀರನ್ನು ಪೋಲು ಮಾಡದೆ ಹಿತಮಿತವಾಗಿ ಬಳಸಬೇಕು ಎಂದು ತಿಳಿಸಿದರು. ನಮಗೆ ಕಾಯಿಲೆಗಳು ಬರುವುದು ಕಲುಷಿತ ನೀರು ಸೇವನೆ ಮಾಡಿದ್ದರಿಂದಲೇ ಬರುತ್ತದೆ ಆದಾ ಕಾರಣ ಎಲ್ಲರೂ ಜಲವನ್ನು ಹಿತಮಿತವಾಗಿ ಬಳಕೆ ಮಾಡಿ ಜಲ ರಕ್ಷಣೆ ಮಾಡಿ ಕುಡಿಯಲು ಮತ್ತು ಅಡುಗೆ ಮಾಡಲು ಶುದ್ದ ನೀರನ್ನು ಬಳಕೆ ಮಾಡಿ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರನಗೌಡ ಚನ್ನವೀರಗೌಡ ಮಾತನಾಡಿ ನಮ್ಮ ಪಂಚಾಯತಿ ಭಾಗದಲ್ಲಿ ನೀರು ಕುಡಿಯಕ್ಕೆ ಯೋಗ್ಯ ಇಲ್ಲದ ನೀರು ಇದೆ, ಎಲ್ಲರ ಆರೋಗ್ಯ ದೃಷ್ಟಿಯಿಂದ ಶುದ್ದ ನೀರು ಬಳಸಿಕೊಳ್ಳಿ ಘಟಕದ ಪ್ರಯೋಜನೆ ನಮ್ಮ ಊರಿನ ಜನ ಪಡೆದುಕೊಳ್ಳಬೇಕು ಧರ್ಮಸ್ಥಳ ಸಂಸ್ಥೆಯ ಕೆಲಸ ತುಂಬಾ ಉಪಯುಕ್ತವಾಗಿದೆ ಅದನ್ನು ಬೆಳಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮ ತಾಲೂಕ ಯೋಜನಾಧಿಕಾರಿಗಳು ಗಣೇಶ ಸ್ವಾಗತಿಸಿದರು ಶುದ್ದಗಂಗಾ ಮೇಲ್ವಿಚಾರಕರು ಶಿವಾನಂದ ಅಕ್ಕಿ ಧನ್ಯವಾದ ಹೇಳಿದರು.
ಫಕ್ಕೀರಪ್ಪ ಬೆಲ್ಲಾಮುದ್ಧಿ ಸೇವಾ ಪ್ರತಿನಿಧಿಗಳು ವಲಯದ ಮೇಲ್ವಿಚಾರಕರು,ನಂದಾ ಮೇಡಂ ಮೇಲ್ವಿಚಾರಕರು, ಗ್ರಾಮ ಪಂಚಾಯತಿ ಸದಸ್ಯರಾದ ತಿಮ್ಮಣ್ಣ ಚೌಡಿ, ಸಿರಾಜುದ್ದೀನ್ ಕೊಪ್ಪಳ, ಬಾಳ ರೆಡ್ಡಿ ಸೋಮರೆಡ್ಡಿ, ಗಂಗಾರಡ್ಡಿ ಸೋಮರಡ್ಡಿ, ವೀರೇಶ ಬಿಸನಹಳ್ಳಿ, ಚೈತ್ರ ಹಿರೇಗೌಡ್ರು, ಗೀತಾ ತಟ್ಟಿ, ನವಜೀವನ ಸಮಿತಿಯ ಅಧ್ಯಕ್ಷರಾದ ಷಣ್ಮುಖಯ್ಯ ಚಂಡೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿಗಳು ವಲಯದ ಮೇಲ್ವಿಚಾರಕರು ಸಂಘದವರು ಊರಿನ ನಾಗರಿಕ ಬಂಧುಗಳು ಭಾಗವಹಿಸಿದ್ದರು.
ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713