ಭೀಕರ ರಸ್ತೆ ಅಪಘಾತ : ಎರಡು ಬೈಕ್ ಗಳ ಮದ್ಯ ಮುಖಾಮುಖಿ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ!!

ಕುಕನೂರು : ತಾಲೂಕಿನ ಭಾನಾಪುರ ಗ್ರಾಮದ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಈ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಭಾನಾಪುರ ಬಳಿ ಇರುವ ಕಾವೇರಿ ಪೆಟ್ರೋಲ್ ಪಂಪ್ ಎದುರುಗಡೆ ಈ ಘಟನೆ ನಡೆದಿದ್ದು, ಈ ಘಟನೆ ಪರಿಣಾಮ ಭಾನಾಪುರ ಗ್ರಾಮದ ಶ್ರೀಶೈಲ್ ಹಿರೇಮಠ (30 ವರ್ಷ), ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಮಾರುತಿ ಶಿವಪ್ಪನವರ (50ವರ್ಷ) ಮೃತರು ಎಂದು ಗುರುತಿಸಲಾಗಿದೆ.

ಘಟನೆ ವಿವರ
ಮೃತ ಮಾರುತಿ ಶಿವಪ್ಪನವರ ಎಂಬಾತ ಕೊಪ್ಪಳದ ಕಡೆಯಿಂದ ಕುಕನೂರು ಕಡೆಗೆ ಬರುತ್ತಿದ್ದ, ಅದೇ ರೀತಿ ಮೃತ ಶ್ರೀಶೈಲ್ ಎಂಬಾತ ಭಾನಾಪುರನಿಂದ ಕಾವೇರಿ ಪೆಟ್ರೋಲ್ ಬಂಕ್ ಕಡೆಗೆ ರಾಂಗ್ ರಸ್ತೆಯಲ್ಲಿ ಬಂದಿದ್ದರು ಎನ್ನಲಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನುಳಿದ ಹಿಂಬದಿ ಸವಾರರು ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾತಿಗಿದ್ದು, ಇನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿ , ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713