ಅಯ್ಯಪ್ಪ ಸ್ವಾಮಿ ಇರುಮುಡಿ ಮಹಾಪೂಜಾ ಮತ್ತು ಅನ್ನ ಸಂತರ್ಪಣೆ *******

ಕುಕನೂರು ಪಟ್ಟಣದ ಶ್ರೀ ಮುಷ್ಠಿ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಗುರು ಅಯ್ಯಪ್ಪ ಸ್ವಾಮಿ ಪೌಂಡೇಶನ್ ಪಂಪಾ ಸನ್ನಿದಾನ ಕುಕುನೂರ ಇವರಿಂದ ಅಯ್ಯಪ್ಪ ಸ್ವಾಮಿ ಇರುಮುಡಿ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನೆರವೇರಿಸಲಾಗುತ್ತದೆ ಎಂದ ಅಯ್ಯಪ್ಪಸ್ವಾಮಿ ಮಾಲಾದಾರಿಯಾದ ಬಸವರಾಜ ಅಡವಿ ಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ ಕುಕನೂರು ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತ ಸಮೂಹದಲ್ಲಿ ಭಿನ್ನವಿಸಿಕೊಳ್ಳಬವುದೇನೆಂದರೆ, ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಯ್ಯಪ್ಪ ಸ್ವಾಮಿ ಇರುಮುಡಿ ಮಹಾಪೂಜೆ ಮಹೋತ್ಸವವನ್ನು ಇದೆ ಜನೆವರಿ 3ನೇ ತಾರೀಕು ಶನಿವಾರದಂದು ಶ್ರೀ ಪಳನಿ ಗುರುಸ್ವಾಮಿ ಆಶೀರ್ವಾದದಿಂದ ಶ್ರೀ ಬಸವರಾಜ ಗುರುಸ್ವಾಮಿ ಹಾಗೂ ಅಶೋಕ್ ಹಾದಿಮನಿ ಗುರುಸ್ವಾಮಿ ಹಾಗೂ ಇನ್ನುಳಿದ ಗುರುಸ್ವಾಮಿಗಳ ನೇತೃತ್ವದಲ್ಲಿ, ಶ್ರೀ ಗುರು ಅಯ್ಯಪ್ಪ ಸ್ವಾಮಿ ಫೌಂಡೇಶನ್ ಪಂಪ ಸನ್ನಿಧಾನದಲ್ಲಿ ಇರುಮುಡಿ ಪೂಜೆಯು ನೆರವೇರಲ್ವಡುವುದು. ಕಾರಣ ಸಕಲ ಸದ್ಭಕ್ತಾದಿಗಳು ಆಗಮಿಸಿ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಯಲಬುರ್ಗಾ, ಶ್ರೀ ಅನ್ನದಾನೇಶ್ವರ ಮಠದ ಮಹಾದೇವ ಮಹಾಸ್ವಾಮಿಗಳು, ಇರುಮುಡಿ ಮಹಾಪೂಜೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸುವರು.
ಬೆಳಗ್ಗೆ ಐದು ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯೊಂದಿಗೆ ಇರುಮುಡಿ ಕಾರ್ಯಕ್ರಮ ನೆರವೇರಿಸಲಾಗುತ್ತದೆ. 1: 30 ನಿಮಿಷಕ್ಕೆ ಅನ್ನ ಸಂತರ್ಪಣೆ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಶರಣುಗೋಶ ಮತ್ತು ಭಜನೆ ಹಾಗೂ ಶ್ರೀ ಮಲ್ಲಪ್ರಭ ಮಹಿಳಾ ಡೊಳ್ಳು ಕುಣಿತಾ ಕೊಣ್ಣೂರ ತಾಲೂಕು ನರಗುಂದ ಇವರ ತಂಡದಿಂದ ಶ್ರೀ ಮುಷ್ಟಿಕಲ್ಲಿನಾಥೇಶ್ವರ ದೇವಸ್ಥಾನದಿಂದ ಶ್ರೀ ಚಳ್ಳೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಂತರ ಶಬರಿಮಲೈ ಯಾತ್ರೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಗೌಡ ಹಾದಿಮನಿ ಸ್ವಾಮಿ, ಶಶಿ ಭಜಂತ್ರಿ ಸ್ವಾಮಿ, ಪ್ರಕಾಶ್ ಬಾವಿಮನಿ ಸ್ವಾಮಿ, ಮಂಜು ಭಜಂತ್ರಿ ಸ್ವಾಮಿ, ಮಂಜುನಾಥ್ ಮಂಗಳೂರು ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳು ಇತರರು ಇದ್ದರು.
ಸುದ್ದಿ ಜಾಹೀರಾತು ಪ್ರಕಟಣೆಗಾಗಿ
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713
