ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ

ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ, ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲಬುರ್ಗಾ ಕಂದಾಯ ಇಲಾಖೆ ಕುಕನೂರು ಗ್ರಾಮ ಪಂಚಾಯತಿ ಬಳಗೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆಯನ್ನು ಬಳಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ರಂಗಸ್ವಾಮಿ ಜೆ. ಹಿರಿಯ ಸಿವಿಲ್ ನ್ಯಾಯಾಧೀಶರು ಉದ್ಘಾಟಿಸಿ ಮಾತನಾಡಿ ಹಣವನ್ನು ಕೊಟ್ಟು ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ. ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ. ಗುಣಮಟ್ಟದ ವಸ್ತುವನ್ನು ನ್ಯಾಯಯುತ ಬೆಲೆಗೆ ಪಡೆದುಕೊಳ್ಳುವ ಎಲ್ಲಾ ಹಕ್ಕು ಗ್ರಾಹಕನಿಗಿದೆ. ವಸ್ತುವಿನ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಯವಾದರೆ ಅದನ್ನು ಪ್ರಶ್ನಿಸುವ ಹಕ್ಕೂ ಆತನಿಗೆ ಇದೆ.ನಾವು ಗ್ರಾಹಕರು ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಿದಲ್ಲಿ ತಪ್ಪದೆ ರಶೀದಿಯನ್ನು ಪಡೆದುಕೊಳ್ಳಬೇಕು ಅಂದಾಗ ಮಾತ್ರ ನಾವು ಪರಿಹಾರ ಪಡೆದುಕೊಳ್ಳಲು ಹಕ್ಕನ್ನು ಹೊಂದಿರುತ್ತೇವೆ ಎಂದ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮ ವಿರೂಪಾಕ್ಷಪ್ಪ ಕುರ್ತ್ಕೋಟೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಎಂಎಸ್ ನಾಯಕರ್ ಉಪಾಧ್ಯಕ್ಷರು ವಕೀಲರ ಸಂಘದ ಯಲಬುರ್ಗಾ, ಬಸವರಾಜ ಮಂಗಳೂರು ಸಹಾಯಕ ಸರ್ಕಾರಿ ಅಭಿಯೋಜಕರು ರವಿಕುಮಾರ್ ಮಲ್ಲನಗೌಡ ಎಸ್ ಪಾಟೀಲ್ ಪರಸರ್ಕಾರಿ ವಕೀಲರು ಮಹೇಶ್ ಗೌಡ ಪಿಡಿಒ ಬಳಗೇರಿ ಬೆಟ್ಟದೀಶ್ ಮಾಳೆಕೊಪ್ಪ ಸಿ ಡಿ ಪಿ ಓ ಯಲಬುರ್ಗಾ, ಮಹಾಂತೇಶ್ ಇಟಿ ಪ್ರಧಾನ ಕಾರ್ಯದರ್ಶಿಗಳು ವಕೀಲರ ಸಂಘ ಯಲಬುರ್ಗಾ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಮಳಕೊಪ್ಪ, ಹನುಮಕ್ಕ ಗೌಡ್ರು ಶರಣಪ್ಪ ಕುಕುನೂರು, ಈರಪ್ಪ ಕರೆಕುರಿ ಹಾಗೂ ನ್ಯಾಯಾಲಯದ ಸಿಬ್ಬಂದಿಯಾದ ರಾಘವೇಂದ್ರ ಕೋಳಿಹಾಳ್ ಹಾಗೂ ವಿನಾಯಕ್ ಇದ್ದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713