• ಎಫ್ಎಲ್ ಎನ್ ಕಲಿಕಾ ಹಬ್ಬ ಉತ್ತಮ ವೇದಿಕೆ:-ಮಾರುತಿ ತಳವಾರ್

ಬ್ರೇಕಿಂಗ್ ನ್ಯೂಸ್:-ನಿರ್ಭಯ ದೃಷ್ಟಿ ನ್ಯೂಸ್******

ಕುಕನೂರು 

ಇತರ ಶಾಲೆಗಳು ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿದಿದ್ದಾರೆ ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಮಾರುತಿ ತಳವಾರ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಕನೂರು ಹೇಳಿದರು.

ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಚನ್ನವೀರ ಶರಣರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿನ್ನಾಳ ಕ್ಲಸ್ಟರ್ ಮಟ್ಟದ 2025 -26ನೇ ಕಲಿಕಾ ಹಬ್ಬ ನೆರವೇರಿತು .

ಕಾರ್ಯಕ್ರಮದ ಉದ್ಘಾಟನೆಯನ್ನು ಶಂಕ್ರಪ್ಪ ಬಿಸನಹಳ್ಳಿ ನೇರವೇರಿಸಿದರು. 

ಮುಖ್ಯ ಅತಿಥಿಯಾದ ಮಾರುತಿ ತಳವಾರ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಕನೂರು ಮಾತನಾಡಿ ಚಟುವಟಿಕೆಗಳು ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ನಡೆಯುತ್ತವೆ. ಸರ್ಕಾರಿ ಶಾಲೆಯ ಕಿರಿಯ ಪ್ರಾಥಮಿಕ ಮಕ್ಕಳ ಕಲಿಕೆಯ ಬಗ್ಗೆ ಸಮುದಾಯದ ಗಮನ ಸೆಳೆಯುವಲ್ಲಿ ಈ ಕಲಿಕಾ ಹಬ್ಬ ಸಹಕಾರಿಯಾಗಿದೆ. ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಆಯಾಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಮಕ್ಕಳು, ಕಲಿಕೆಯ ಸಾಫಲ್ಯತೆಯನ್ನು ಪ್ರದರ್ಶಿಸುತ್ತಾರೆ ಸದವಕಾಶವಾಗಿ ಈ ಕಲಿಕಾ ಹಬ್ಬ ರೂಪುಗೊಂಡಿತು.ಕ್ಲಸ್ಟರ್ ಇತರ ಶಾಲೆಗಳು ತನ್ನ ಶಾಲೆಯು ಕಲಿಕಾ ಮಟ್ಟದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿ ಸಾಗುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿಳಿಯಲು ಕೂಡ ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಸ್ ಡಿಎಂಸಿ ಅಧ್ಯಕ್ಷರು ಶಂಕ್ರಪ್ಪ ಬಿಸನಹಳ್ಳಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಾರ್ಯಕ್ರಮ ವಿದ್ಯಾಭ್ಯಾಸದ ಬಗ್ಗೆ ಸೋಲಿನ ಬಗ್ಗೆ ಚಿಂತಿಸಬೇಡಿ, ಸೋಲು-ಗೆಲುವುಗಳ ಸ್ವೀಕಾರದ ಮನೋಭಾವವನ್ನು ಎಳೆಯ ಮಕ್ಕಳಲ್ಲಿ ಬೆಳೆಸಲು ಇಂತಹ ಚಟುವಟಿಕೆಗಳು ಬೇಕು. ಶಾಲಾ ಸರ್ಕಾರಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ, ದಾಖಲಾತಿಯನ್ನು ಸುಧಾರಿಸುವ,ಸಮುದಾಯದೊಂದಿಗೆ ಬಾಂಧವ್ಯ ವೃದ್ಧಿಸುವ ಸೇತು ಕಾರ್ಯಕ್ರಮವನ್ನು ನಾವೆಲ್ಲರೂ ಯಶಸ್ವಿಗೊಳಿಸೋಣ ಎಂದು.

ಮಹೇಂದ್ರ ಗದಗ ಮತ್ತು ಕನಕಪ್ಪ ಚಲವಾದಿ ಮಾತನಾಡಿ ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲಾಗಿದೆ ಅವಕಾಶದಲ್ಲಿ. ಜೊತೆಗೆ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಹೇಳಿದರು.

ಎಚ್.ಎ .ನದಾಫ್ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ  ಮಹಾಂತೇಶ್ ಅಂಗಡಿ ಮುಖ್ಯೋಪಾಧ್ಯಾಯರು, ಪೀರಸಾಬ್ ದಪೇದಾರ ಸಿಆರ್‌ಪಿ, ಭೀಮರೆಡ್ಡಿ ಸ್ಯಾಡಲ್ಗೇರಿ ಅಧ್ಯಕ್ಷರು ಪಿ ಎಸ್ ಎಸ್ ಎನ್, ಮಾರುತೇಶ್ ತಳವಾರ್, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಕನೂರು, ಉಮೇಶ ಕಂಬಳಿ, ಗ್ರಾಮ ಪಂಚಾಯತ್ ಸದಸ್ಯರಾದ ಚಿದಾನಂದಪ್ಪ ದೊಡ್ಡಮನಿ, ವಿಜಯಲಕ್ಷ್ಮಿ ಮಂಗಳೂರು, ಲಲಿತ ಅಡಗಿಮನಿ, ಗ್ರಾಮದ ಶಿಕ್ಷಣ ಪ್ರೇಮಿಗಳಾದ ಕನಕಪ್ಪ ಚಲವಾದಿ, ಕಳಕಪ್ಪ ಚಲವಾದಿ, ಹನುಮಂತಪ್ಪ ದೊಡ್ಮನಿ, ಸತೀಶ ಕಟ್ಟಿಮನಿ, ಶಿಕ್ಷಕರಾದ ಬಸವರಾಜ ಉಪ್ಪಿನ, ಸತೀಶ್ ಚನ್ನಪ್ಪ ಗೌಡ್ರು, ಪ್ರಭಾಕರ ಅರ್ಕಲ್, ಹನುಮಂತಪ್ಪ ಬಡಿಗೇರ್, ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಗುರುಹಿರಿಯರು ವಿದ್ಯಾರ್ಥಿಗಳು ಇತರರು ಇದ್ದರು.

 

ಸುದ್ದಿ , ಜಾಹೀರಾತು, ಪ್ರಕಟನೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ  9164386713