ಕುವೆಂಪು ಸಾಹಿತ್ಯ ಅಧ್ಯಯನದಿಂದ ಒಳ್ಳೆಯ ಭವಿಷ್ಯ- ಪ್ತೊ. ಬಿ.ಕೆ ರವಿ

ಕೊಪ್ಪಳ,ಡಿ-30: ರಾಷ್ಟ್ರ‌ಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕೊಪ್ಪಳ ವಿ.ವಿ. ಕುಲಪತಿಗಳಾದ ಪ್ರೊ. ಬಿ.ಕೆ. ರವಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ತಮ್ಮ ವಿದ್ಯಾರ್ಥಿ ‌ಜೀವನದಲ್ಲಿ‌ ಕುವೆಂಪು ಅವರು, ಸೇರಿದಂತೆ ಅನೇಕ‌ ಹಿರಿಯ ಸಾಹಿತಿಗಳೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರಲ್ಲದೆ, ಅವರ ಸಾಹಿತ್ಯದ ಮಹತ್ವ, ಕುವೆಂಪು ಅವರ ರಾಮಾಯಣ ದರ್ಶನಂ ಕೃತಿ, ಅವರು ಹಳೆಗನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ, ಅವರ ವಿಶ್ವ ಮಾನವ ಸಂದೇಶವನ್ನು ನೆನೆದರು. ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಒಳ್ಳೆಯ ಭವಿಷ್ಯವಿದೆ ಎಂದರು.


ಇದೇ ವೇಳೆ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿಗಳಾದ ಕುಲಸಚಿವರಾದ ಪ್ರೊ.ಎಸ್‌ವಿ.ಡಾಣಿಯವರು ಕುವೆಂಪುರವರು ಹೇಳಿದ ಮತಗಳು ಮನುಜ ಪಥಗಳಾಗಬೇಕೆಂಬ ಮಾತುಗಳು ಸೇರಿದಂತೆ, ಅವರ ವಿಶ್ವ ಮಾನವ ಸಂದೇಶವನ್ನು ಸಕಲರು ಪಸರಿಸಬೇಕೆಂದರು. ವಿ.ವಿ‌. ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುವೆಂಪುರವರ ಭಾವಚಿತ್ರಕ್ಕೆ ಈ ವೇಳೆ ಶ್ರದ್ದಾ ಭಕ್ತಿಗಳಿಂದ ಪೂಜೆ,ಪ್ರಾರ್ಥನೆ ಸಲ್ಲಿಸಲಾಯಿತು. ವಿ.ವಿ.ಯ ಸಕಲ ಬೋಧಕ, ಬೋಧಕೇತರ ಸಿಬ್ಬಂಧಿ ಈ ವೇಳೆ ಉಪಸ್ಥಿತರಿದ್ದರು. ಆರಂಭದಲ್ಲಿ
ಪ್ರದರ್ಶನ ಕಲೆ ವಿಭಾಗದ ಉಪನ್ಯಾಸಕರಾದ ಅನಂತಕುಮಾರ ದೊರೆ,ಶಂಕರಮೇಟಿ ಹಾಗೂ ತಂಡದವರು ಕುವೆಂಪುರವರ ಭಾವಗೀತೆಗಳನ್ನು ಹಾಡಿದರು.
ಪ್ರಾದ್ಯಾಪಕರಾದ ಡಾ. ವೀರೇಶ ಉತ್ತಂಗಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಡಾ ಬಸವರಾಜ ಗಡಾದ ವಂದಿಸಿದರು.

 

ಸುದ್ದಿ ಜಾಹಿರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *