ಸ್ಥಳೀಯ ಸರ್ಕಾರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು:ಫಕೀರಪ್ಪ ಕಟ್ಟಿಮನಿ.

Breaking news:-ನಿರ್ಭಯ ದೃಷ್ಟಿ ನ್ಯೂಸ್*****
ಯಲಬುರ್ಗಾ29: ಮಹಿಳಾ ಸದಸ್ಯರ ಸಾಮರ್ಥ್ಯ ಅಭಿವೃದ್ಧಿ ತರಬೇತಿಯು ಮಹಿಳೆಯರ ನಾಯಕತ್ವ ಗುಣಗಳನ್ನು ಹೆಚ್ಚಿಸಲು ಆರ್ಥಿಕ ಸಬಲೀಕರಣ ಸಾಧಿಸಲು ಮತ್ತು ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಭಾಗವಹಿಸಲು ತರಬೇತಿ ಅವಶ್ಯಕತೆ ಇದೆ ಕೌಶಲ್ಯ ತರಬೇತಿ. ರಾಜಕೀಯ ಜಾಗೃತಿ. ಕಾನೂನು ಅರಿವು. ಮತ್ತು ಸ್ಥಳೀಯ ಆಡಳಿತದಲ್ಲಿ ಪಾಲ್ಗೊಳ್ಳುವಿಕೆ ಸೇರಿವೆ. ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಸೇವೆಗಳು.ನಾಯಕತ್ವ ಮತ್ತು ನಾಯಕತ್ವ ಗುಣಗಳು ಸ್ಥಳೀಯ ಸರ್ಕಾರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಲ ಸಕ್ರಿಯ ವಾಗಿ ಕಾರ್ಯನಿರ್ವಹಿಸಲು ತರಬೇತಿ ಅಶ್ಯವೆಂದು ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ತಾಲ್ಲೂಕು ಪಂಚಾಯತ್ (ಪಂ.ರಾ.)ಸಹಾಯಕ ನಿರ್ದೇಶಕರಾದ ಫಕೀರಪ್ಪ ಕಟ್ಟಿಮನಿ ಯವರು ಹೇಳಿದರು.
ಮಹಿಳಾ ಸಬಲೀಕರಣ ಕೌಶಲ್ಯಗಳ ಮೂಲಕ ಉದ್ಯೋಗ ಸೃಷ್ಟಿ ಮತ್ತು ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ನೆರವಾಗುವುದು.ಕಾನೂನು ಮತ್ತು ರಾಜಕೀಯ ಅರಿವು ಮಹಿಳೆಯರ ರಕ್ಷಣೆಗಾಗಿರುವ ಕಾಯಿದೆಗಳು. ಸ್ಥಳೀಯ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು.ಗ್ರಾಮೀಣಾಭಿವೃದ್ಧಿ ಗ್ರಾಮ ಪಂಚಾಯಿತಿ ಮಟ್ಟದ ಯೋಜನೆಗಳ ಮೇಲ್ವಿಚಾರಣೆ ಮತ್ತು ಯೋಜನೆಗಳ ಬಗ್ಗೆ ತರಬೇತಿಯಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳು ತಿಳಿದು ಕೊಳ್ಳುವ ತರಬೇತಿಗೆ ಮಹಿಳಾ ಸದಸ್ಯರು ಭಾಗವಹಿಸಬೇಕೆಂದು ಕರೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧ ತರಬೇತಿ ಕೇಂದ್ರದಲ್ಲಿ
“ಅಧಿಕಾರ-ಸಾಕಾರ” ವಿಷಯಗಳ ಕುರಿತು ಗ್ರಾಮ ಪಂಚಾಯಿತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗಿತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಗ್ರಾಮ ಪಂಚಾಯಿತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ 3 ದಿನಗಳ ಅವದಿವರಗೆ “ಅಧಿಕಾರ-ಸಾಕಾರ” ನಾಯಕತ್ವ ಬೆಳವಣಿಗೆ ಕುರಿತು ಹೈಬ್ರಿಡ್ ತರಬೇತಿಯನ್ನು ರಾಜ್ಯದಾದ್ಯಂತ ಆಯೋಜಿಸಲಾಗಿದೆ ಸದರಿ ತರಬೇತಿಯನ್ನು ಜನವರಿ ತಿಂಗಳಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ತರಬೇತಿಯನ್ನು 6 ಪ್ರಸರಣಗಳಲ್ಲಿ ಆಯೋಜಿಸಲಾಗಿದೆಂದು ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಭೀಮಪ್ಪ ಹವಳಿ. ಮಲ್ಲಯ್ಯಸ್ವಾಮಿ ಹಿರೇಮಠ.ಹೇಳಿದರು ತರಬೇತಿ 3 ದಿನಗಳ ಅವದಿಯಲ್ಲಿ 2 ದಿನ ತರಬೇತಿ ಕೇಂದ್ರದಲ್ಲಿ ಅಧಿವೇಶನ ನಡೆಯುತ್ತವೆ 1 ದಿನ ಮಾದರಿ ಗ್ರಾಮ ಪಂಚಾಯತ್ ಗಳನ್ನು ಅಧ್ಯಯನಕ್ಕೆ ಕ್ಷೇತ್ರಭೇಟಿ ಮಾಡಿಸಲಾಗುತ್ತದೆಂದು ಆಯೋಜಕರು ಹೇಳಿದರು ಈ ತರಬೇತಿಯಲ್ಲಿ ಬೇವೂರು.ಗಾಣಧಾಳ.ಹಿರೇಮ್ಯಾಗೇರಿ.ಚಿಕ್ಕಮ್ಯಾಗೇರಿ.ಬಳೂಟಗಿ.ಗ್ರಾಮ ಪಂಚಾಯತ್ ಮಹಿಳಾ ಚುನಾಯಿತ ಪ್ರತಿನಿಧಿಗಳು.ಭಾಗವಹಿಸಿದ್ದರು.ವಿಷಯ ನಿರ್ವಾಹಕ ಬಸವರಾಜ ಪಾಟೀಲ.ಶೇಖಪ್ಪ ಭಾನಾಪೂರ.ಮಂಜು.ಇನ್ನಿತರರು ಇದ್ದರರು.
ನಿರಂತರ ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713