ಅಟಲ್ ಬಿಹಾರಿ ವಾಜಪೇಯಿ ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿದ್ದರು:-ಹಾಲಪ್ಪ ಆಚಾರ್  

ಕುಕನೂರು ಪಟ್ಟಣದ ಮಸಬ ಹಂಚಿನಾಳ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ದೇಶದ ಹೆಮ್ಮೆಯ ಮಾಜಿ ಪ್ರಧಾನಮಂತ್ರಿಗಳು ಹಾಗೂ ಅಜಾತಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹಾಲಪ್ಪ ಆಚಾರ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ

ಸಮಾಜ ಮತ್ತು ದೇಶಕ್ಕಾಗಿ ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಇವರು ನೀಡಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. 1994ರಲ್ಲಿ ಇವರನ್ನು ‘ಅತ್ಯುತ್ತಮ ಸಂಸದೀಯ ಪಟು’ ಎಂದು ಗೌರವಿಸಲಾಯಿತು. ಅದರ ಪ್ರಮಾಣ ಪತ್ರದ ಒಕ್ಕಣೆ ಹೀಗಿದೆ : ಅವರ ಹೆಸರಿಗೆ ಅನುಗುಣವಾಗಿ ಅಟಲ್ಜಿ ಖ್ಯಾತ ರಾಷ್ಟ್ರೀಯ ನಾಯಕರು, ಓರ್ವ ಪ್ರೌಢ ರಾಜಕಾರಣಿ, ನಿಸ್ವಾರ್ಥ ಸಮಾಜ ಸೇವಕ, ವಾಗ್ಮಿ, ಕವಿ ಮತ್ತು ಸಾಹಿತಿ, ಪತ್ರಕರ್ತ ಹಾಘೂ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ನಾಯಕ. ಅಟಲ್ಜೀ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ..ಅವರ ಕಾರ್ಯಗಳು ರಾಷ್ಟ್ರೀಯತೆಗೆ ಬದ್ಧವಾಗಿ ಪ್ರತಿಧ್ವನಿಸುತ್ತವೆ.ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ವಾಜಪೇಯಿ ಅವರು ದೂರದೃಷ್ಟಿಯ, ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದ್ದರು. ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿದ್ದರು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಬಸವಲಿಂಗಪ್ಪ ಭೂತೆ, ಶಿವಕುಮಾರ ನಾಗಲಾಪುರ ಮಠ,ಶರಣಪ್ಪ ಬಣ್ಣದಬಾವಿ, ಶಂಭು ಜೋಳದ್, ಹಾಗೂ ಪಕ್ಷದ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಅಮರೇಶ್ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮ ನವರ, ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷರಾದ ಕಲ್ಲೇಶಪ್ಪ ಕರಮುಡಿ,ಬಿಜೆಪಿ ಕುಕುನೂರು ನಗರ ಘಟಕದ ಅಧ್ಯಕ್ಷರಾದ ಬಸವರಾಜ ಹಾಳಕೇರಿ, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕಾಳಿ, ಕರಬಸಯ್ಯ ಬಿನ್ನಾಳ, ಮಂಗಳೇಶ ಮಂಗಳೂರು, ದೊಡ್ಡಯ್ಯ ಗುರುವಿನ, ಚಂದ್ರು ಮರದಡ್ಡಿ, ಪ್ರಕಾಶ ಬೋರಣ್ಣವರ್ ,ವೀರೇಶ ಸಬರದ, ಶಿವರಾಜ ಗೌಡಪ್ಪನವರ್ ,ಮಧು ಬಾರಿಗಿಡದ, ಮಲ್ಲಿಕಾರ್ಜುನ್ ಚೌದ್ರಿ, ಬಾಲರಾಜ ಗಾಳಿ, ಜಗನ್ನಾಥ ಭೋವಿ,ಚಂದ್ರು ಬಗನಾಳ,ಮಸಬ ಹಂಚಿನಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹನುಮಂತ ಬನ್ನಿಕೊಪ್ಪ, ಮುದಿಯಪ್ಪ ವಜ್ರಬಂಡಿ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವೀರೇಶ ಜಲ್ಲಿ, ಭೀಮೇಶ ಬೇವೂರ, ಸಂಗಮೇಶ ಗೊಂದಿ, ಹಾಗೂ ಬಿಜೆಪಿ ಪಕ್ಷದ ಹಿರಿಯರು ಕಾರ್ಯಕರ್ತರು ಇದ್ದರು.

ನಿರಂತರ ಸುದ್ದಿ ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *