*ಮಂಗಳೂರಲ್ಲಿ ರೈತ ದಿನಾಚರಣೆ ಕಾರ್ಯಕ್ರಮ*

ಕುಕನೂರು ತಾಲೂಕ ಮಂಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತ ದಿನಾಚರಣೆ ಹಾಗೂ ಎಂಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕೊಪ್ಪಳ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.
ರಾಘವೇಂದ್ರ ಇಪ್ಕೋ ಮ್ಯಾನೇಜರ್ ಮಾತನಾಡಿ ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು ಬದಲಾವಣೆಗೆ ತಕ್ಕಂತೆ ಬೇಸಾಯ ಕ್ರಮ ಅಳವಡಿಸಿಕೊಳ್ಳುವುದು ಸೂಕ್ತವಾಗಿದ್ದು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಬೇಕು ಭೂಮಿ ಫಲವತ್ತತೆ ಉಳಿಸಿಕೊಳ್ಳುವುದರ ಜತೆಗೆ ಆದಾಯ ಹೆಚ್ಚಿಸುವ ಕೃಷಿ ಪದ್ಧತಿ ಸೂಕ್ತ ಎಂದು ಹೇಳಿದರು.
ಶರಣಪ್ಪ ಹ್ಯಾಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮಾತನಾಡಿ ದೇಶದಲ್ಲಿ ರೈತರನ್ನು ಮತ್ತು ಕೃಷಿಯನ್ನು ಕಡೆಗಣಿಸುವ ಕಾಲ ಬರುತ್ತಿದೆ ರೈತರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಸಂಸ್ಕಾರ ಕಲಿಸಿಕೊಡಬೇಕಾದ್ದು ಅಗತ್ಯವಿದೆ ಎಂದು ಹೇಳಿದರು. ಇಡೀ ಪ್ರಪಂಚದಲ್ಲಿ ಏನೆಲ್ಲಾ ಕಂಡು ಹಿಡಿದರು ಆದರೆ ಒಂದು ಕಾಲು ಅಕ್ಕಿ ಜೋಳ ಕಂಡು ಹಿಡಿಯಲಾಗಿಲ್ಲ ಅಂತಹ ಕಾಳುಗಳನ್ನು ಬಿತ್ತಿ ಬೆಳೆಯುವ ರೈತನೇ ಮಹಾ ವಿಜ್ಞಾನಿ ಎಂದು ಪ್ರತಿಪಾದಿಸಿದ ಅವರು ಕೃಷಿಯಲ್ಲಿ ಸಾಕಷ್ಟು ಉತ್ಪಾದನೆ ಇದ್ದರೂ ಯೋಗ್ಯ ಬೆಲೆ ಸಿಗುತ್ತಿಲ್ಲ ರೈತ ದಿನವಾದ ಇಂದು ನಮ್ಮ ಬದುಕು ಕಟ್ಟಿಕೊಳ್ಳುವ ಸಂಕಲ್ಪ ನಾವೆಲ್ಲ ಮಾಡಬೇಕಾಗಿದೆ ಎಂದು ಹೇಳಿದರು.
ಹನುಮಗೌಡ್ರ ಈಳಗೇರ ಸಿಇಒ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಕ್ರಪ್ಪ ಮಂಗಳಪ್ಪ ಚಿನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ರಾಮಣ್ಣ ಮ್ಯಾಗಳೇಶಿ ಉಪಾಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಈರಣ್ಣ ಉಮಚಗಿ, ಶಂಕ್ರಪ್ಪ ಉಳ್ಳಾಗಡ್ಡಿ, ಮಂಜುನಾಥ ಬಂಡಿ, ಮಂಜುನಾಥ ಕುದ್ರಿಮೋತಿ, ಶಾರಮ್ಮ ಬೂದಗುಂಪಿ, ಸರ್ವ ನಿರ್ದೇಶಕರು,ನಿಂಗಪ್ಪ ಹಿರೇಹಾಳ ಕೃಷಿ ಅಧಿಕಾರಿ,ಗವಿಸಿದ್ದಯ್ಯ ಹಿರೇಮಠ ಕೃಷಿ ಅಧಿಕಾರಿ ವೀರೇಶ ಆರ್ ಡಿ ಸಿ ಸಿ ಬ್ಯಾಂಕ್ ಮ್ಯಾನೇಜರ, ಯಮನೂರಪ್ಪ ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.
ನಿರಂತರ ಸುದ್ದಿ ಜಾಹೀರಾತಿಗಾಗಿ, ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713