oplus_1026

ಇಟಗಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮ

ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಇಟಗಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಬಳಗ ವತಿಯಿಂದ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಹಳೆಯ ವಿದ್ಯಾರ್ಥಿ ಬಳಗದವರಾದ ಮಹೇಶ ದೊಡ್ಡಮನಿ ಮಾತನಾಡಿ ಇಟಗಿ ಶ್ರೀ ಕ್ಷೇತ್ರವು ಮಹಾದೇವ ದೇವಾಲಯದಿಂದ ಪ್ರಚಲಿತವಾಗಿದ್ದು ಇಂತಹ ಐತಿಹಾಸಿಕ ಶಿಲ್ಪ , ಕಲೆಗಳುಳ್ಳ ಪರಂಪರೆಯ ಇಟಗಿ ಗ್ರಾಮದಲ್ಲಿ 1950 ರಲ್ಲಿ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನಾರ್ಜನೆ ಹೊಂದಿ 2025 ನೇ ಇಸವಿಗೆ 75 ವರ್ಷ ಪೂರೈಸುತ್ತಿದ್ದು ಡಿಸೆಂಬರ್ 27 ಶನಿವಾರ ಹಾಗೂ 28 ರವಿವಾರ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮಕ್ಕೆ 5,000 ಸಾವಿರ ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಆಗಮಿಸುತ್ತಿದ್ದು ಈ ಒಂದು ಕಾರ್ಯಕ್ರಮ ಯಶಸ್ವಿಗೆ ಗ್ರಾಮದ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ, ಸಹಾಯ ದೊರಕಿದ್ದು ಈ ಒಂದು ಕಾರ್ಯಕ್ರಮ ಯಶಸ್ವಿಗೆ ಸಹಕಾರಿಯಾಗಿದೆ ಎಂದು ಹಳೆಯ ವಿದ್ಯಾರ್ಥಿಯಾದ ಮಹೇಶ ದೊಡ್ಡಮನಿ ಮಾತನಾಡಿದರು.

ವಜೀರ್ ಸಾಬ್ ತಳಕಲ್ ಮಾತನಾಡಿ ಇಟಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 27, 28, ಶನಿವಾರ ರವಿವಾರ ಕಾರ್ಯಕ್ರಮ ನೆರವೇರಿತಿದ್ದು. ಡಿಸೆಂಬರ್ 27 -12- 2025 ಶನಿವಾರ ಬೆಳಿಗ್ಗೆ 9:00 ಗಂಟೆಗೆ ಶ್ರೀಧರ್ ದೀಕ್ಷಿತ್ ನಿವೃತ್ತ ಪ್ರಾಚಾರ್ಯರು ಧಾರವಾಡ ಇವರಿಂದ ಮಹಾ ಸರಸ್ವತಿ ಭಾವಚಿತ್ರ ಮೆರವಣಿಗೆ ಮತ್ತು ವೆಂಕಟರಾವ್ ಕುಲಕರ್ಣಿಯವರ ಕಂಚಿನ ಮೂರ್ತಿ ಮೆರವಣಿಗೆ, ಚಾಲನೆ ನಂತರ ಕರಡಿ ಮಜಲು, ಡೊಳ್ಳು ಕುಣಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಕಲಾ ತಂಡಗಳಿಂದ ನೃತ್ಯಗಳು, ಶಾಲಾ ಭಾವಚಿತ್ರಗಳು ಹಾಗೂ ಸ್ತಬ್ಧ ಚಿತ್ರಗಳ ಪ್ರದರ್ಶನ ಮತ್ತು ಕುಂಭಮೇಳದೊಂದಿಗೆ ಶ್ರೀ ಮಹೇಶ್ವರ ದೇವಸ್ಥಾನದಿಂದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಮೆರವಣಿಗೆ ನೆರವೇರಿಸಲಾಗುವುದು.

ನಂತರ 11 ಗಂಟೆಯಿಂದ ವೇದಿಕೆ ಕಾರ್ಯಕ್ರಮಗಳು ಜರಗುವದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ತೋಟದ ಸಿದ್ಧರಾಮ ಮಹಾಸ್ವಾಮಿಗಳು ಶ್ರೀ ಜಗದ್ಗುರು ತೋಂಟದಾರ್ಯ ಮಠ ಸಂಸ್ಥಾನ ಮಠ ಡಂಬಳ- ಗದಗ-ಯಡೆಯೂರ, ಮಹದೇವ ಮಹಾಸ್ವಾಮಿಗಳು ಅನ್ನದಾನೇಶ್ವರ ಶಾಖಾಮಠ ಕುಕುನೂರು, ಮುತ್ತಯ್ಯ ಕಳ್ಳಿಮಠ ಇಟಗಿ ವಹಿಸಿಕೊಳ್ಳುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರು ನೆರವೇರಿಸುವರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಜ್ಯೋತಿ ಉದ್ಘಾಟನೆ ನೆರವೇರಿಸುವರು.

ರತ್ನಮ್ಮ ಹಂಚಾಳಪ್ಪ ಭಜಂತ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಇಟಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು,

ನವೀನಕುಮಾರ ಈಶಣ್ಣ ಗುಳಗಣ್ಣನವರ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರು ಕೊಪ್ಪಳ ರವರು
75ನೇ ವರ್ಷದ ವಿಶೇಷ ಧ್ವಜಾರೋಹಣವನ್ನು ನೆರವೇರಿಸುವರು.

ಸಂಗಣ್ಣ ಕರಡಿ ಮಾಜಿ ಸಂಸದರು ಕೊಪ್ಪಳ ರವರಿಂದ
ವಜ್ರ ಮಹೋತ್ಸವದ ಗೀತೆ ಬಿಡುಗಡೆ ನೆರವೇರಿಸಲಾಗುವುದು. ಸುರೇಶ ಇಟ್ನಾಳ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಿಂದ 75 ವಸಂತಗಳನ್ನು ಪೂರೈಸಿದ ವಜ್ರ ಸೀರೆ ಪುಸ್ತಕ ಬಿಡುಗಡೆ ನೆರವೇರಿಸಲಾಗುವುದು. ಬಿಎಂ ಹಳ್ಳಿ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಿಂದ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ನಂತರ ವೆಂಕಟರಾವ್ ಕುಲಕರ್ಣಿ ಅವರ ಕಂಚಿನ ಮೂರ್ತಿ ಅನಾವರಣ ಬಸವ ಪ್ರಭು ಪಾಟೀಲ್ ತಾಲೂಕ ಪಂಚಾಯತ್ ಅಧ್ಯಕ್ಷರು ಯಲಬುರ್ಗಾ ರವರಿಂದ ಅನಾವರಣ ನೆರವೇರಿಸಲಾಗುತ್ತದೆ. ಡಿಸೆಂಬರ್ 27 ದಂದು ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ವಿಶೇಷ ಮುಖ್ಯ ಅತಿಥಿಗಳು ಆಗಮಿಸುತ್ತಿದ್ದು ನಂತರ ನಿವೃತ್ತ ಹೊಂದಿದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಗೌರವ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಸಂಗಪ್ಪ ಗುಳಗಣ್ಣವರ್ ಪ್ರಾಚಾರ್ಯರು ಸರಕಾರಿ ಪದವಿಪೂರ್ವ ಕಾಲೇಜು ನರೇಗಲ್ ಇವರಿಂದ ಉಪನ್ಯಾಸ ಕಾರ್ಯಕ್ರಮ ನೆರವೇರುವುದು. ನಂತರ ಜೀವನ ಸಾಬ್ ವಾಲಿಕಾರ್ ಬಿನ್ನಾಳ ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಅಂತರಾಷ್ಟ್ರೀಯ ಜಾನಪದ ಕಲಾವಿದರು ಇವರಿಂದ ಹಾಸ್ಯ ಸಂಜೆ ನಗೆ ಹಬ್ಬ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ ವಿದ್ಯಾರ್ಥಿಗಳಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿಸಲಾಗುತ್ತದೆ.

ಡಿಸೆಂಬರ್ 28 -12- 2052 ರವಿವಾರ ದಂದು ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ, ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ ರವರು ವಹಿಸಿಕೊಳ್ಳುವರು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಶೇಖರ ಹಿಟ್ನಾಳ ಸಂಸದರು ಕೋಪ್ಪಳ ನೆರವೇರಿಸುವರು. ಮಧು ಬಂಗಾರಪ್ಪ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರಕಾರ ರವರು ಜ್ಯೋತಿ ಬೆಳಗಿಸುವರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗರಾಜ ಸಿದ್ದಪ್ಪ ಹೊಸಭಾವಿ ಎಸ್ ಡಿ ಎಂ ಸಿ ಅಧ್ಯಕ್ಷರು ವಹಿಸಿಕೊಳ್ಳುವರು. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರು ಹಾಗೂ ಸಂಸದರು ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಗ್ರಾಮದ ಹಿರಿಯರು ಮುಖಂಡರು ಇನ್ನು ಅನೇಕ ಸಂಘ ಪರಿವಾರದ ಹಿತೈಷಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಇತರರು ಆಗಮಿಸುತ್ತಿದ್ದು.

ಈ ಒಂದು ಕಾರ್ಯಕ್ರಮದಲ್ಲಿ ವಿಶೇಷವಾಗಿ 1997 -98ನೇ ಸಾಲಿನ ವಿದ್ಯಾರ್ಥಿಗಳಿಂದ ಶ್ರೀ ವೆಂಕಟರಾವ್ ಕುಲಕರ್ಣಿ ಇವರ ಕಂಚಿನ ಮೂರ್ತಿ ಕೊಡಿಗೆ ಹಾಗೂ ಸೈನಿಕರು ಮತ್ತು ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಗುತ್ತದೆ.
ನಂತರ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಹಾಗೂ ವಿವಿಧ ಶಾಲಾ ಮಕ್ಕಳಿಂದ ಜಾನಪದ ನೃತ್ಯ ಕೋಲಾಟ ಏಕಪಾತ್ರ ಅಭಿನಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು, ವಿವಿಧ ಇಲಾಖೆ ಹಾಗೂ ಸ್ವಸಹಾಯ ಸಂಘಗಳು ಗ್ರಾಮದ ಗುರು ಹಿರಿಯರು ಹಾಗೂ ಇಟಗಿ ಸುತ್ತಮುತ್ತಲಿನ ಗ್ರಾಮಗಳ ಗುರುಹಿರಿಯರು ಹಳೆ ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಹಾಗೂ ಯುವ ಮಿತ್ರರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ನಂತರ 75ನೇ ವರ್ಷದ ವಜ್ರ ಮಹೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಪೋಸ್ಟರ್ ಬಿಡುಗಡೆಗೊಳಿಸಿದರು.

oplus_1026

ಈ ಸಂದರ್ಭದಲ್ಲಿ
ರಾಜಶೇಖರ್ ಹೊಂಬಾಳ, ಶರಣಪ್ಪ ಅರಕೇರಿ, ಸಂಜೀವಪ್ಪ ಸಂಗಟಿ, ರಾಜಾಭಕ್ಷಿ ನೂರುಬಾಷ್ಯ, ಮಲ್ಲಿಕಾರ್ಜುನ ಗುಳಗಣ್ಣವರ್, ವೀರಣ್ಣ ಬೋಳಣ್ಣವರ್, ಸುಭಾಷ್ ಕಾಳನ್ನವರ್, ಇತರರು ಇದ್ದರು.

ವರದಿ ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *