ವಿಜ್ಞಾನಕ್ಕೆ ಸಾಹಿತ್ಯ ಕರುಣೆ, ಕಾಳಜಿಗಳು ಜೊತೆಯಾದರೇ ಇವತ್ತಿನ ಅನುಬಂಧ ಪರಿಕಲ್ಪನೆಗೆ ಅರ್ಥಬಂದಂತಾಗುತ್ತದೆ:-ಪ್ರೊ. ಎಸ್.ವಿ. ಡಾಣಿ

ಯಲಬುರ್ಗಾ ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ 20.12.2025 ಶನಿವಾರದಂದು ಕನ್ನಡ ಅಧ್ಯಯನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಭೂಗೋಳಶಾಸ್ತ್ರ ಅಧ್ಯಯನ ವಿಭಾಗಗಳ 2025-26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಲಾ ಮತ್ತು ವಿಜ್ಞಾನ ವಿಭಾಗಗಳು ಸೇರಿ ರೂಪಿಸಿದ್ದ ಈ ಕಾರ್ಯಕ್ರಮಕ್ಕೆ “ಅನುಬಂಧ” ಎಂಬ ಪರಿಕಲ್ಪನೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ. ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ವಿ. ಡಾಣಿ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಅವರು ಮಾತನಾಡಿ ಸಾಹಿತ್ಯ ಬದುಕಿನ ಮೌಲ್ಯವನ್ನು ತಿಳಿಸುವ ಶಾಸ್ತ್ರವಾಗಿದೆ. ಬದುಕಿನ ಕೈಗನ್ನಡಿಯಾಗಿ ಕೆಲಸ ಮಾಡುತ್ತದೆ. ಪಂಪ ಮನುಷ್ಯ ಜಾತಿ ತಾನೊಂದು ವಲಂ ಎಂದು ಸಾರಿದ್ದಾನೆ. ಜಗತ್ತಿನ ಜನರೆಲ್ಲ ಏಕಭಾವದಲ್ಲಿ ಬದುಕಬೇಂಬುದು ಅವನ ಒಲವಾಗಿತ್ತು. ಆನಂತರ ಬಂದ ಬಸವಾದಿ ಶರಣರು ಸೋಹಂ ಎನ್ನದೇ ದಾಸೋಹಂ ಎನ್ನು ಎನ್ನುತ ದುಡಿದದ್ದರಲ್ಲಿ ಇತರರಿಗೂ ಹಂಚಿ ಬದುಕು ಎನ್ನುವ ಸಂದೇಶ ಸಾರಿದರು.
ಹಾಗೆಯೇ ಗಾಂಧಿಯವರು ಹೇಳುವ ಏಳು ಪಾಪಗಳಲ್ಲಿ ಚಾರಿತ್ರ್ಯವಿಲ್ಲದ ಜ್ಞಾನ ಮತ್ತು ಮಾನವಿಯತೆ ಇಲ್ಲದ ವಿಜ್ಞಾನ ದೇಶದ ಬೇಳವಣಿಗೆಗೆ ಮಾರಕವಾಗಬಲ್ಲವು ಎಂದರು. ಇಂದು ವಿಜ್ಞಾನ ಬಹುದೊಡ್ಡ ಪ್ರಗತಿಯನ್ನು ಸಾಧಿಸಿದೆ. ಎಐ ತಂತ್ರಜ್ಞಾನ ಬಂದ ಮೇಲೆ ಜಗತ್ತು ನಮ್ಮ ಮನಸಿಗೆ ಬೇಕಾದ ಹಾಗೆ ಸೃಜಿಸಿ ನೋಡುವ ಸಾಧ್ಯಯತೆಯನ್ನು ರೂಪಿಸಿದೆ. ಸಾಮಾಜಿಕ ಜಾಲತಾಣವು ಜಗತ್ತಿನ ಕಸದ ಬುಟ್ಟಿಯಂತಾಗಿದೆ. ವಿಜ್ಞಾನಕ್ಕೆ ಸಾಹಿತ್ಯ ಕರುಣೆ, ಕಾಳಜಿಗಳು ಜೊತೆಯಾದರೇ ಇವತ್ತಿನ ಅನುಬಂಧ ಪರಿಕಲ್ಪನೆಗೆ ಅರ್ಥಬಂದಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಗಳಾದ ಪ್ರೊ. ಕೆ.ಎಚ್. ಛತ್ರದ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ ಶ್ರಮವಿಲ್ಲದೇ ಯಾವುದೇ ಸಾಧನೆಯಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ನಿರಂತರ ಅಧ್ಯಯನಶೀಲರಾಗಬೇಕು ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ರವೀಂದ್ರ ಬಟಗೇರಿ ಅನುಬಂಧ ಎನ್ನುವ ಪರಿಕಲ್ಪಯನ್ನೆ ಯಾಕೆ ಇಡಲಾಯಿತು ಎನ್ನುವುದನ್ನು ವಿವರಿಸುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಉಪನ್ಯಾಸಕರಾದ. ಡಾ. ಪ್ರಹ್ಲಾದ ಡಿ.ಎಂ.. ಡಾ. ಕಾಳಮ್ಮ, ದೀಪಾ, ಕೋಮಲಾ, ರಾಜಮಾ ಬೇಗಂ, ರೇಖಾ, ಆಶ್ವಿನಿ, ಅಕ್ಷತಾ, ಶರಣಗೌಡ, ಶ್ರೀಕಾಂತ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ನಿರಂತರ ಸುದ್ದಿ ಜಾಹಿರಾತುಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713