ಕಡಲೆ ಬೆಳೆಗೆ ಕೀಟ ನಿರ್ವಹಣೆ ಕೃಷಿ ಅಧಿಕಾರಿಗಳಿಂದ ಸಲಹೆ

ಕುಕನೂರು, ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಹುಳಿ ಕಡಲೆ ಬೆಳೆಯನ್ನು ಬೆಳೆದಿದ್ದು ಕಡಲೆ ಬೆಳೆಗೆ ಹೂ ಬಿಡುವ ಮತ್ತು ಕಾಯಿ ಕಟ್ಟುವ ಸಂದರ್ಭದಲ್ಲಿ ಕಡಲೆ ಬೆಳೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು ಕಡಲೆ ಬೆಳೆ ಹಸಿ ಗಿಡ ಇರುವಾಗಲೇ ನಟೆರೋಗ ಬಂದು ಕಡಲೆ ಬೆಳೆ ಒಣಗುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ರೈತ ಬಾಂಧವರು ಈ ಪ್ರಮುಖ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಇತ್ತೀಚೆಗೆ ಕುಕುನೂರು ತಾಲೂಕಿನ ಮನ್ನಾಪುರದ ಗ್ರಾಮದ ರೈತರ ಹೊಲದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ರಾಘವೇಂದ್ರ ಅವರು ಅನೇಕ ಸಲಹೆ ಸೂಚನೆಗಳು ಈ ಕೆಳಗಿನಂತೆ ನೀಡಿದರು.
ಕಡಲೆ ಹೂವಾಡುವ ಪ್ರಾರಂಭಿಕ ಹಂತದಲ್ಲಿ ( ಶೇ. 2 ರ ಯೂರಿಯಾ 20ಗ್ರಾಂ ಯೂರಿಯಾ ಪ್ರತಿ ಲೀಟರ್ ನೀರಿಗೆ ಸಿಂಪರಣೆ ಮಾಡಬೇಕು. ಇ.ಡಿ.ಟಿ.ಎ. ರೂಪದ ಶೇ.0.5 ರ ಸತುವಿನ ಸಲ್ವೇಟ್ ಮತ್ತು ಶೇ.0.5 ರ ಕಬ್ಬಿಣ ಸಲ್ವೇಟ್ ಶೇ. 0.2 ರ ಬೋರೆಕ್ಸ್ ಶೇ. 0.1 ರ ಅಮೋನಿಯ ಮಾಲಿ ವ್ಯಾಟ್ ಮಿಶ್ರಣವನ್ನು ಹೂವು ಹಂತದಲ್ಲಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಣೆ ಕೈಗೊಳ್ಳಬೇಕು.
ಹೂ ಮತ್ತು ಕಾಯಿ ಸಂಖ್ಯೆ ಹೆಚ್ಚು ಮಾಡಲು ಬಿತ್ತಿದ 35 ದಿನಗಳ ನಂತರ ಪ್ರತಿ ಲೀಟರ್ ನೀರಿನಲ್ಲಿ ಒಂದು ಮಿಲಿ ಮೀಟರ್ ಟೈ ಕೋಠಿ ಟಾಲಾ ಅಥವಾ ಒಂದು ಮಿಲಿ ಮೀಟರ್, ನೈಟ್ರೋ ಬೆಂಜಿನ್ ಸಸ್ಯವರ್ಧಕವನ್ನು ಸಿಂಪಡಿಸುವುದರಿಂದ ಹೂ ಮತ್ತು ಕಾಯನ್ನು ಹೆಚ್ಚಿಸಬಹುದು. ಕಾಯಿಕೊರೆಯುವ ಕೀಟವಾದೆ ಬಾದೆ ಕಂಡುಬಂದಲ್ಲಿ ಕಾಳು ಕಟ್ಟುವ ಸಂದರ್ಭದಲ್ಲಿ ಪ್ರತಿ ಎಕರೆಗೆ ಹತ್ತು ಶೇರು ಮಂಡಕ್ಕಿಯನ್ನು ಹೊಲದಲ್ಲಿ ಚೆಲ್ಲಾಡುವದರಿಂದ ಪಕ್ಷಿಗಳು ಕೀಡೆಯನ್ನು ತಿನ್ನುವುದ-ರಿಂದ ಬೆಳೆಯನ್ನು ಸಂರಕ್ಷಿಸಬಹುದು.

ಡರ್ಮ 5 ಗ್ರಾಂ ಪ್ರತಿ ನಟರೋಗ ಮತ್ತು ಸೊರಗು ರೋಗ ಬಾದೆಗೆ ಜೈವಿಕ ಶಿಲೀಂದ್ರ ನಾಶಕ ಟೈಕೋ ಲೀಟರ್ ನೀರಿಗೆ ಅಥವಾ ಮೈಕೋ ಜೆಬ್ + ಕಾರ್ಬನ್ ಡೈ ಜಿಮ್ 2.5 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೇರು ತೋಯುವಂತೆ ಸಿಂಪಡಣೆ ಮಾಡಬೇಕು ಅ೦-ದಾಗ ವಿವಿಧ ರೋಗಗಳು ಹತೋಟಿಗೆ ಬರುತ್ತವೆ ಎಂದು ಕೃಷಿ ವಿಜ್ಞಾನಿಗಳು ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮನ್ನಾಪುರ ಗ್ರಾಮದ ಪ್ರಗತಿಪ ರೈತರ ಬಾಪುಗೌಡ ಪಾಟೀಲ್, ನಿಂಗಪ್ಪ ಪಾಟೀಲ್. ತಾಮ್ರಗುಂಡಿ. ಬಸವರಾಜ ಗೌಡ ಮನ್ನಾಪುರ ಮತ್ತು ಕುಕನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ತೇರಿನ್ ಇದ್ದರು.
ಸುದ್ದಿ ಜಾಹಿರಾತಿಗಾಗಿ , ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713