oplus_1026

*ಇನ್ನೂ ಎರಡುವರೆ ವರ್ಷ ಸಿದ್ರಾಮಯ್ಯನವರೇ ಮುಖ್ಯಮಂತ್ರಿ,,!ರಾಯರಡ್ಡಿ ಹೇಳಿಕೆ,,*

 

                Breakingnews:-ನಿರ್ಭಯ ದೃಷ್ಟಿ ನ್ಯೂಸ್-

ಕುಕನೂರು : ಇನ್ನೂ ಎರಡುವರೆ ವರ್ಷ ರಾಜ್ಯದ ಆಡಳಿತದಲ್ಲಿ ಸಿದ್ರಾಮಯ್ಯನವರೇ ಮುಖ್ಯ ಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ತಾಲೂಕ ಶಾಸಕರಾದ ಬಸವರಾಜ ರಾಯರೆಡ್ಡಿ ಹೇಳಿದರು.

ಅವರು ಪಟ್ಟಣದಲ್ಲಿ ಗುಲಬುರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಪ-ವಿಭಾಗ ಕಛೇರಿಯ ನೂತನ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ 2018ರಲ್ಲಿಯೇ ನೂತನ ಕುಕನೂರು ತಾಲೂಕಿನಲ್ಲಿ ವಿವಿಧ ಸರಕಾರಿ ಕಛೇರಿಗಳು ಪ್ರಾರಂಭವಾಗಬೇಕಿತ್ತು, ಕಾರಣಾಂತರದಿಂದ 2018ರ ಚುನಾವಣೆಯಲ್ಲಿ ನಾನು ಸೋತಿದ್ದರಿಂದ ತಾಲೂಕಿನಲ್ಲಿ ಇಲ್ಲಿಯವರೆಗೆ ಸರಕಾರಿ ಕಛೇರಿಗಳು ಆಗದೇ ವಿಳಂಬವಾಗಿವೆ. ಸ್ಥಳೀಯ ಮುಖಂಡರು, ಜನ ಪ್ರತಿನಿಧಿಗಳಾದವರು ಆಸಕ್ತಿವಹಿಸಿದಾಗ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಆಗಲು ಸಾಧ್ಯವಾಗುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.

ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ವಿದ್ಯುತ್ ಮಂತ್ರಿ ಕೆ. ಜೆ ಜಾರ್ಜ್ ಅವರಿಗೆ ಹೇಳಿ ಕುಕನೂರು ತಾಲೂಕಿಗೆ ಪ್ರತ್ಯೇಕ ಜೆಸ್ಕಾಂ ಉಪ ವಿಭಾಗ ಮಾಡಿಸಿದೆ.

ವಿದ್ಯುತ್ ಶಕ್ತಿ ಮನುಷ್ಯನ ಮುಖ್ಯವಾದ ಅಂಗವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಕೆಲಸಗಳಿಗೆ ವಿದ್ಯುತ್ ಮುಖ್ಯವಾಗಿದೆ. ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಇದೆ. ನೀರಿನಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚು ಖರ್ಚು ಇಲ್ಲಾ, ಹೈಡ್ರೋ ಎಲೆಕ್ಟ್ರೀಸಿಟಿ, ಸೇರಿದಂತೆ ಕಾವೇರಿ, ಹೊಗೆನಕಲ್, ಮೆಕೆದಾಟು ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದ್ದು, ರಾಜ್ಯದಲ್ಲಿ ವಿದ್ಯುತ್ ಗೆ ಯಾವುದೇ ಕೊರತೆ ಇಲ್ಲಾ, ಸ್ವಲ್ಪ ಹಣದ ಅಭಾವದಿಂದ ವಿದ್ಯುತ್ ಸಮಸ್ಯೆಯಾಗಿತ್ತೇ ವಿನಃ ವಿದ್ಯುತ್ ಗೆ ಸಮಸ್ಯೆ ಇಲ್ಲಾ, ಪಂಚ ಗ್ಯಾರೆಂಟಿ ಯೋಜನೆಯಲ್ಲಿ ರಾಜ್ಯದಲ್ಲಿ 200ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಕರ್ನಾಟಕದಲ್ಲಿ ಒಂದು ಕೋಟಿ ಅರವತ್ರೋಂಬತ್ತು ಲಕ್ಷ ಮನೆಗೆ ಉಚಿತ ವಿದ್ಯುತ್ ಸರಬರಾಜು ಆಗುತ್ತಿದೆ. ಕುಕನೂರು ತಾಲೂಕಿನಲ್ಲಿ 24902 ಫಲಾನುಭವಿಗಳು ಈ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

oplus_1026

ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗೆ ಸರಾಸರಿ 52ಸಾವಿರ ಕೋಟಿ ಕೊಡಲಾಗುತ್ತಿದೆ. ನಮ್ಮ ಸರಕಾರದ ಯೋಜನೆಗಳನ್ನು ನರೇಂದ್ರ ಮೋದಿ ಸರಕಾರ ಕಾಫಿ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಚುನಾವಣೆಯಲ್ಲಿ ತುಂಬಾ ಭ್ರಷ್ಟಾಚಾರ ನಡೆಯುತ್ತಿದ್ದು. ಅವರು ಖರ್ಚು ಮಾಡುವ ಲೆಕ್ಕದಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಹಣ ಮತ್ತು ಜಾತಿಯ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿವೆ. ಆದರೆ ಹಣ ಮತ್ತು ಜಾತಿ ಲೆಕ್ಕಾಚಾರದಲ್ಲಿ ಸಾಮಾನ್ಯ ಜ್ಞಾನವಿಲ್ಲದವರಿಗೆ ಅಧಿಕಾರ ನೀಡಿದರೇ ರಾಜ್ಯದ ಅಭಿವೃದ್ದಿ ಸಾಧ್ಯವಿಲ್ಲ. ಮತದಾರರು ಪ್ರಜ್ಞಾವಂತರಿದ್ದಾರೆ. ಹಣ, ಜಾತಿ ನಡೆಯುವುದಿಲ್ಲಾ.

ರಾಜ್ಯದಲ್ಲಿ ಅಭಿವೃದ್ದಿ ವಿಚಾರದಲ್ಲಿ ಚರ್ಚೆಯಾಗಬೇಕು. ಸಿದ್ರಾಮಯ್ಯನವರ ನೇತೃತ್ವದ ಸರಕಾರ ಇನ್ನೂ ಎರಡುವರೆ ವರ್ಷ ಆಡಳಿತದಲ್ಲಿ ಇರಲಿದೆ ಎಂದು ಮತ್ತೋಮ್ಮೆ ವಿಶ್ವಾಸ ವ್ಯಕ್ತ ಪಡಿಸಿದರು.

ತಾಲೂಕಿನಲ್ಲಿ 7 ಜ್ಯೂನಿಯರ್ ಕಾಲೇಜು, ನರ್ಸಿಂಗ್ ಕಾಲೇಜು, 12ಪಿಜಿ ಸ್ಕೂಲ್, ಕೆಪಿಎಸ್ ಆಂಗ್ಲ ಮಾಧ್ಯಮವಾಗಿದ್ದು ಮಕ್ಕಳಿಗೆ ಅನೂಕೂಲವಾಗಲಿದೆ.

ಸಾಮಾನ್ಯ ಜ್ಞಾನ ಇರುವುದು ಕನ್ನಡ ಶಾಲೆಯಲ್ಲಿ, ಆಂಗ್ಲದ ವ್ಯಾಮೋಹದಿಂದ ಆಂಗ್ಲ ಮಾಧ್ಯಮ ಶಾಲೆಗಳತ್ತ ಪಾಲಕರು ಮುಖ ಮಾಡುತ್ತಿದ್ದು, ಈಗ ಕೆಪಿಎಸ್ ನಿಂದ ಬಡ ಮತ್ತು ಮದ್ಯಮ ವರ್ಗದ ಜನರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ ಎಂದರು.

ರೈತರ 36ಲಕ್ಷ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. 21ಸಾವಿರ ಸಬ್ಸಿಡಿ ನೀಡಲಾಗುತ್ತಿದೆ. 45 ಸಾವಿರ ಮಕ್ಕಳಿಗೆ ಸರಕಾರಿ ಶಾಲೆಯ ಯೋಜನೆ ತಲುಪುತ್ತಿವೆ.

ಕ್ಷೇತ್ರದಲ್ಲಿ ಶಾಲೆ, ಕಾಲೇಜು, ರಸ್ತೆ, ವಿದ್ಯುತ್, ಭಾನಾಪೂರನಿಂದ ಗದ್ದನಕೇರಿಯವರಿಗೆ ನ್ಯಾಷನಲ್ ಹೈವೆ, ರೈಲ್ವೇ ಭಾನಾಪೂರನಿಂದ ಈಗ ಕುಷ್ಟಗಿಯವರೆಗೆ ಓಡಾಡುತ್ತಿದೆ ಇನ್ನೂ ಏನು ಬೇಕು ಆ ಅಭಿವೃದ್ದಿ ಕಾರ್ಯಗಳು ಮುಂದೆ ಆಗಲಿವೆ ಎಂದರು.

ಏನು ಗೊತ್ತಿಲ್ಲದ ಅಯೋಗ್ಯರನ್ನ
ಎಂಎಲ್ ಎ ಮಾಡುತ್ತಿರಿ, ಅಧಿಕಾರ, ಆಡಳಿತ ದುರ್ಭಳಿಕೆಯಿಂದ ಅಭಿವೃದ್ದಿ ಸಾಧ್ಯವಿಲ್ಲಾ ಎಂದರು.

ಆರೋಗ್ಯದ ವಿಷಯದಲ್ಲಿ ಕುಕನೂರಿಗೆ 42ಕೋಟಿ ಬಿಡುಗಡೆಯಾಗಿದೆ. ಆದರೆ ಜಾಗೆಯ ಕೊರತೆ ಇದೆ. ತಹಶೀಲ್ದಾರ ಕಚೇರಿ, ನ್ಯಾಯಾಲಯ, ಬುದ್ದ ಬಸವ, ಅಂಬೇಡ್ಕರ್ ಭವನ ನಿರ್ಮಿಸಿ ಜನರಿಗೆ ಅನೂಕೂಲ ಮಾಡಲು ಹೋದರೆ ಕೇಲವೊಂದಿಷ್ಟು ಅಡೆತಡೆಗಳು ಬರುತ್ತಿವೆ. ಶೀಘ್ರ ಪರಿಹಾರವಾಗಲಿದೆ. ಎಲ್ಲಾ ಸರಕಾರಿ ಕಛೇರಿಗಳ ಕಟ್ಟಡ ಶೀಘ್ರದಲ್ಲಿ ಪ್ರಾರಂಭವಾಗಿ ಜನರಿಗೆ ಅನೂಕೂಲವಾಗಲಿವಕಾನೂನು ಮುಂದೆ ಎಲ್ಲರು ಒಂದೇ, ಕೋರ್ಟ್ ನಲ್ಲಿರುವ ನ್ಯಾಯ ಮುಗಿದ ತಕ್ಷಣ ಎಲ್ಲಾ ಅಭಿವೃದ್ದಿ ಕಾರ್ಯ ಪ್ರಾರಂಭವಾಗಲಿವೆ. ತುಂಗಾಭದ್ರಾ ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದೇವೆ. ಮುಧೋಳದಿಂದ, ಕರಮುಡಿ, ಬನ್ನಿಕೊಪ್ಪ, ಮಂಡಲಗಿರಿ, ಕುಕನೂರಿಗೆ ಕೃಷ್ಣ ನೀರು ಬರಲಿದೆ ಎಂದರು.

ಜನರ ಸೇವೆ ದೇವರ ಸೇವೆ ಎನ್ನುವ ಉದ್ದೇಶದೊಂದಿಗೆ ನಾನು ಕ್ಷೇತ್ರದಲ್ಲಿ ಕೆಲಸ ಮಾಡುವೆ. ಜನಗಳು ನನಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ, ಆದರೆ ನಾನು ಯಾರೋಬ್ಬರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲಾ ನನಗೆ ಅಭಿವೃದ್ದಿ ಮುಖ್ಯ. ಈಗ ಎರಡುವರೆ ವರ್ಷ ಕಾಲ ಅಭಿವೃದ್ದಿಯಾಗಿವೆ. ಇನ್ನೂ ಕ್ಷೇತ್ರ ಅಭಿವೃದ್ದಿ ಆಗಲಿದೆ ಎಂದರು.

ಸ್ಥಳೀಯ ಆಡಳಿತದಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಗ್ರಾಮಗಳ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

ನಂತರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸುನೀಲ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಕುಕನೂರಿಗೆ ನೂತನ ಉಪ-ವಿಭಾಗವಾಗಿ ಪ್ರಾರಂಭಗೊಂಡಿರುವುದರಿಂದ ಪ್ರತ್ಯೇಕ ಅನುಧಾನ ಬರುತ್ತಿದ್ದು, ನಮ್ಮ ಜೆಸ್ಕಾಂಗೆ ಸಂಬಂಧಪಟ್ಟ ಸುಧಾರಣಾ ಕಾಮಗಾರಿಗಳು ಹಾಗೂ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನೂಕೂಲವಾಗಲಿದೆ.

ಕುಕನೂರು ಪಟ್ಟಣ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ತಾಲೂಕಿನ ವ್ಯಾಪ್ತಿಯ ವಿದ್ಯುತ್ ಗೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ತ್ವರಿತವಾಗಿ ಬಗೆ ಹರಿಸಿ ವಿದ್ಯುತ್ ಗ್ರಾಹಕರಿಗೆ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನೂಕೂಲವಾಗಲಿದೆ.

ಮಾನ್ಯ ಘನ ಕರ್ನಾಟಕ ಸರಕಾರ ಪಂಚ ಗ್ಯಾರೆಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆ ಕುಕನೂರು ತಾಲೂಕಿನಲ್ಲಿ 24902 ಫಲಾನುಭವಿಗಳು ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಗ್ಯಾರೆಂಟಿ ಯೋಜನೆ ಅಧ್ಯಕ್ಷ ಸುದೀರ್ ಕೊರ್ಲಳ್ಳಿ, ಸಂಗಪ್ಪ ಗುತ್ತಿ ಮುಖಂಡರಾದ ಸತ್ಯನಾರಾಯಣ ಹರಪನಹಳ್ಳಿ, ಮಂಜುನಾಥ ಕಡೇಮನಿ, ಈರಪ್ಪ ಕುಡಗುಂಟಿ, ಯಂಕಣ್ಣ ಯರಾಶಿ, ಹಂಪಯ್ಯ ಹಿರೇಮಠ, ಹನುಮಂತಗೌಡ ಚಂಡೂರ್, ಕುದ್ರಿಮೋತಿ ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ, ಪಪಂ ಅಧಿಕಾರಿ ನಾಗೇಶ ಸೇರಿದಂತೆ ಮಹಿಳಾ ಮುಖಂಡರು, ಜೆಸ್ಕಾಂ ಅಧಿಕಾರಿಗಳು ಸಾರ್ವಜನಿಕರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದವರು, ಅಧಿಕಾರಿಗಳು ಸಾರ್ವಜನಿಕರು, ನಾಡಗೀತೆ ಪ್ರಸ್ತುತ ಪಡಿಸಿ ಗೌರವ ಸಲ್ಲಿಸಿದರು.

 

ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *