ಅಂಬೇಡ್ಕರ, ಕಲಮ್, ಪುರಾಣಿಕರು ಆದರ್ಶವಾಗಲಿ- ಪ್ರೊ.ಎಸ್.ವಿ.ಡಾಣಿ

ಕೊಪ್ಪಳ, ಡಿ 17: ವಿದ್ಯಾರ್ಥಿಗಳಿಗೆ ದಮನಿತ ಸಮುದಾಯದ ಪಾಲಿನ ಸೂರ್ಯರಾದ ಡಾ. ಬಿ.ಆರ್. ಅಂಬೇಡ್ಕರ್, ಮಹಾನ್ ಕನಸುಗಾರ ಎ.ಪಿ.ಜೆ ಅಬ್ದುಲ್ ಕಲಮ್, ಮೊದಲು ಮಾನವಾನಾಗು ಎಂಬ ಸಂದೇಶ ಸಾರಿದ ಸಿದ್ದಯ್ಯ ಪುರಾಣಿಕರಂಥವರು ಆದರ್ಶವಾಗಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲ ಸಚಿವರಾದ ಪ್ರೊ. ಶರಣಪ್ಪ ವಿ.ಡಾಣಿಯವರು ಅಭಿಪ್ರಾಯಪಟ್ಟರು.
ಅವರು ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಯಲಬುರ್ಗಾ ಪಿ.ಜಿ ಸೆಂಟರ್ ನ ಗಣಿತ ಶಾಸ್ತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಆಯೋಜಿಸಿದ್ದ ಅಭ್ಯುದಯ-2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಏಕಾಗ್ರತೆಯಿಂದ ಅದ್ಯಯನ ಮಾಡದೇ ಯಶಸ್ಸು ಸಾಧ್ಯವಿಲ್ಲವಾದ್ದರಿಂದ ವಿದ್ಯಾರ್ಥಿಗಳು ನಿರಂತರ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು,ಜಾಗತಿಕ ಸಂಗತಿಗಳನ್ನು ತಿಳಿಯುವಂತಾಗಲು ಅಂತರ್ಜಾಲ ಸೌಲಭ್ಯಗಳನ್ನು ಸಹ ಒದಗಿಸುವುದಾಗಿ ಅವರು ಭರವಸೆ ನೀಡಿದರಲ್ಲದೇ, ಮರು ಭೂಮಿಯಲ್ಲಿ ಸಿಕ್ಕ ಓಯಸ್ಸಿಸ್ ನಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಾಪಿಸಲಾಗಿರುವ ಕೊಪ್ಪಳ ವಿಶ್ವವಿದ್ಯಾಲಯದ ಸದುಪಯೋಗ ಪಡೆದು ಜೀವನದಲ್ಲಿ ಮುಂದೆ ಬರಬೇಕೆಂದರು.
ಪ್ರೊ.ಕೆ.ಎಸ್ ಛತ್ರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಅಧ್ಯಯನದ ಮಹತ್ವದ ಬಗ್ಗೆ ತಿಳಿಸಿದರು. ಈ ವೇಳೆ ಡಾ.ರವೀಂದ್ರ ಬಟಗೇರಿ ಹಾಗೂ ನಾಗಪ್ಪ ಹೂವಿನ ಭಾವಿ ವಿದ್ಯಾರ್ಥಿಗಳಿಗೆ ಹಲವು ಮಾರ್ಗದರ್ಶನ ನೀಡಿದರು.ಮಹಮದ ಮನ್ಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಿತಶಾಸತ್ರ ವಿಭಾಗದ ಉಪನ್ಯಾಸಕರಾದ ಕು.ಅಂಬಿಕಾ, ಮುತ್ತಪ್ಪ ದೇವರಮನಿ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಸಿಬ್ಬಂಧಿ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿರಿದ್ದರು.
ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713