ವಿಶ್ವ ಬಂದು ಸೇವಾ ಗುರು ಬಳಗ ಗೋಡೆಯ ಬರಹ ಕಾರ್ಯ ಶ್ಲಾಘನೀಯ:-ಸೋಮಶೇಖರ ಗೌಡ್ರು

ನಿರ್ಭಯ ದೃಷ್ಟಿ ನ್ಯೂಸ್:-***
*ಕುಕನೂರು :-ರ್ಕೊಪ್ಪಳ ಜಿಲ್ಲೆ, ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಬಂದು ಗುರು ಸೇವಾ ಬಳಗದಿಂದ 25ನೇ ಗೋಡೆ ಬರಹ ಕಾರ್ಯಕ್ರಮ ನೆರವೇರಿಸಲಾಯಿತು.
ಸೋಮಶೇಖರ ಗೌಡ್ರು, ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರು ಶಿಕ್ಷಣಾಧಿಕಾರಿ, ವಿಶ್ವ ಬಂದು ಸೇವಾ ಗುರು ಬಳಗದವರ ಗೋಡೆ ಬರಹ ಸೇವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿಶ್ವ ಬಂದು ಸೇವಾ ಯಲಬುರ್ಗಾ- ಕುಕನೂರು ಗುರುಬಳಗದ ಕಾರ್ಯ ಡಿಸೆಂಬರ 2/ 2023 ರಿಂದ ಪ್ರಾರಂಭಗೊಂಡ, ಗೋಡೆ ಬರಹ ಕಾರ್ಯ ಡಿಸೆಂಬರ್ 14 /2025 ಕ್ಕೆ 25ನೇ ರಜತ ಮಹೋತ್ಸವ ಗೋಡೆ ಬರಹ ವಾಗಿದ್ದು. ಇಂತಹ ಗೋಡೆ ಬರಹದಂತಹ ಕಾರ್ಯದಿಂದ ಮಕ್ಕಳಲ್ಲಿ ಇರುವ ಕಲಿಕೆ ಮತ್ತು ಉತ್ಸಾಹ ಹೆಚ್ಚುಸುವಂತಹ ಕಾರ್ಯವನ್ನ ಬಳಗದವರು ನೆರವೇರಿಸಿಕೊಂಡು ಬರುತ್ತಿದ್ದು.
ಇಂದಿನ ದಿನಮಾನಗಳಲ್ಲಿ ಸರಕಾರಿ ನೌಕರಿಯೂ ಒಂದು ದಿನ ರಜೆ ಸಿಕ್ಕರೆ ಸಾಕು, ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಇಚ್ಚಿಸುತ್ತಾರೆ, ಆದರೆ ವಿಶ್ವ ಬಂದು ಸೇವಾ ಬಳಗದವರು ರವಿವಾರ ರಜೆ ದಿನವಾದರೂ ಸಹಿತ ಗೋಡೆ ಬರಹದಂತಹ ಕಾರ್ಯವನ್ನು ನೆರವೇರಿಸಿ ರಜೆಯ ದಿನವನ್ನು ಸಹಿತ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯ ಗೋಡೆ ಬರಹಗಳನ್ನು ನೆರವೇರಿಸುವುದರಿಂದ ಮಕ್ಕಳ ಶಿಕ್ಷಣಕ್ಕೆ ಮತ್ತು ಕಲಿಕೆಗೆ ಸಹಕಾರಿ ಯಾಗಲಿದೆ.ವಿಶ್ವ ಬಂದು ಸೇವಾ ಗುರುಬಳಗದವರ ಇಂತಹ ಕಾರ್ಯ ಶ್ಲಾಘನೀಯ ಎಂದರು.
ಈರಪ್ಪ ಕುಡಗುಂಟಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾತನಾಡಿ ವಿಶ್ವ ಬಂದು ಸೇವಾ ಗುರು ಬಳಗದವರ ಗೋಡೆ ಬರಹ ಕಾರ್ಯದಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ. ಶಾಲೆಯ ಗೋಡೆ ಬರಹದಂತಹ ಕಾರ್ಯದಿಂದ ಶಾಲೆಯು ಸುಂದರ ಕಾಣುವುದರೊಂದಿಗೆ ವಿದ್ಯಾರ್ಥಿಗಳ ಗಮನ ಗೋಡೆ ಬರಹದ ಮೇಲೆ ಬೀಳುವುದರಿಂದ ಮಕ್ಕಳಿಗೆ ಕಲಿಕೆಯ ಮೇಲೆ ಇನ್ನು ಆಸಕ್ತಿ ಹೆಚ್ಚಿಸುತ್ತದೆ ವಿಶ್ವ ಬಂದು ಸೇವಾ ಗುರು ಬಳಗದವರ ಇಂತಹ ಕಾರ್ಯ ಗ್ರಾಮದವರ ಹಾಗೂ ಪಾಲಕರ ಮನಸ್ಸು ಸಂತೋಷವೆನಿಸುತ್ತದೆ ಎಂದು ಮಾತನಾಡಿದರು.
ಎಂ ಎ ರೆಡ್ಡರ್ ನಿವೃತ್ತ ಉಪ ನಿರ್ದೇಶಕರು, ವಿಶ್ವ ಬಂದು ಸೇವಾ ಗುರು ಬಳಗದವರ ಗೋಡೆ ಬರಹ ಕುರಿತು ಮಾತನಾಡಿದರು.
ವಿಶ್ವ ಬಂದು ಸೇವಾ ಗುರು ಬಳಗದವರಿಗೆ ಗೋಡೆ ಬರಹ ಕಾರ್ಯಕ್ಕೆ ಸಹಕಾರಿಯಾಗಲಿ ಎಂದು ಹೊಸಳ್ಳಿ ಶಾಲೆಯ ನಿವೃತ್ತ ಶಿಕ್ಷಕಿ ಮತ್ತು ಕ್ರಿಯಾಶೀಲ ಗುರು ಮಾತೆಯಾದ ಜಯಶ್ರೀ ಬೂದಿಹಾಳ ಅಕ್ಕನವರು 1 ಲಕ್ಷ ರೂಪಾಯಿಯ ಚೆಕ್ ನೀಡಿದರು.
ಶಿಕ್ಷಕರಾದ ಸಂದೀಪ ಈಳಗೇರ ಹಾಗೂ ಶ್ರೀದೇವಿ ಕುಲಕರ್ಣಿ ವಿಶ್ವ ಬಂದು ಸೇವಾ ಗುರು ಬಳಗದವರಿಗೆ ಟೀ ಶರ್ಟ್ ಕೊಡುಗೆ ನೀಡಿದರು.
ವಿಶ್ವ ಬಂದು ಗುರು ಸೇವಾ ಬಳಗದ ಗೋಡೆ ಬರಹ ಕಾರ್ಯಕ್ರಮಕ್ಕೆ ವಣಗೇರಿ ಗ್ರಾಮದಲ್ಲಿ ಊರಿನ ಹಬ್ಬದಂತೆ ಅದ್ದೂರಿಯಾಗಿ ಆಚರಿಸಿ ಇಡೀ ಎರಡು ದಿನ ಸೇವೆಯನ್ನು ನಮ್ಮ ಶಾಲೆಗೆ ಮೀಸಲಿಟ್ಟ ಬಳಗದ ಅಧ್ಯಕ್ಷರಾದ ಸಿದ್ದಲಿಂಗಪ್ಪ ಶ್ಯಾಗೋಟಿಯವರಿಗೆ ಹಾಗೂ ಎಲ್ಲಾ ಸರ್ವ ಸದಸ್ಯರಿಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಗೋಡೆ ಬರಹ ಕಾರ್ಯಕ್ಕೆ ಟಿಫಿನ್ ಹಾಗೂ ಊಟದ ವ್ಯವಸ್ಥೆ ಮತ್ತು ಫಲಹಾರದ ವ್ಯವಸ್ಥೆಯನ್ನು ಮಾಡಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಿಶ್ವ ಬಂದು ಸೇವಾ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಒಂದು ಕಾರ್ಯಕ್ರಮದ ಸಿದ್ಧತೆಯನ್ನ ಬಳಗದ ಸಂಪರ್ಕದಲ್ಲಿ ರೂಪರೇಶಿಯನ್ನು ಮಾಡಿದ ಗೆದ್ದಿಗೇರಿ ಶಾಲೆಯ ಶಿಕ್ಷಕ ಮಂಜುನಾಥ್ ಕೊರಡಕೇರಿ ಹಾಗೂ ಹನುಮೇಶ ಕಬ್ಬಿಣದ , ಸಂಗಯ್ಯ ಹಿರೇಮಠ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಯಶಸ್ವಿಗೊಳ್ಳಲು ಸಾಧ್ಯವಾಗಿದೆ ಎಂದು ವಿಶ್ವ ಬಂದು ಸೇವಾ ಬಳಗದವರು ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ.
ವಿಶೇಷವಾಗಿ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ ಶಾಲೆಯ ಶಿಕ್ಷಕರಿಗೂ, ಹಾಗೂ ಎಸ್ಡಿಎಂಸಿ ಅಧ್ಯಕ್ಷರಿಗೂ, ವಿವಿಧ ಶಾಲೆಯಿಂದ ಆಗಮಿಸಿದ ಶಿಕ್ಷಕರುಂಧದವರಿಗೂ ಗ್ರಾಮದ ಗುರುಹಿರಿಯರಿಗೂ, ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ
ಎಂ ಎ ರೆಡ್ಡರ್ ನಿವೃತ್ತ ಉಪ ನಿರ್ದೇಶಕರು, ವಿಶ್ವ ಬಂದು ಸೇವಾ ಬಳಗದ ಅಧ್ಯಕ್ಷರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ದಯಾನಂದ್ ಹಿರೇಮಠ ಮುಖ್ಯಪಾದ್ಯರು, ಪರಶುರಾಮ ತಳವಾರ, ಮಹಾಂತೇಶ ಹಿರೇಮಠ, ಬಸವರಾಜ, ಶಿವನಗೌಡ ಪೊಲೀಸ ಪಾಟೀಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಬಸವರಾಜ್ ಮೆಣಸಿಗಿ, ಸಿಆರ್‌ಪಿ ಶರಣು ಕುರ್ನಾಳ, ಶಿಕ್ಷಕರ ಪತ್ತಿನ ಸಂಘದ ಹಂಗಾಮಿ ಅಧ್ಯಕ್ಷ ರಮೇಶ ಕಾರಭಾರಿ, ಬೆವೂರು ವಲಯದ ಶಿಕ್ಷಕರು, ಹಾಗೂ ಶಿಕ್ಷಕಿಯರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಗ್ರಾಮದ ಗುರು ಹಿರಿಯರು ಹಾಗೂ ಪಾಲಕರು ಇತರರು ಇದ್ದರು.
ಸುದ್ದಿ ಜಾಹೀರಾತಿಗಾಗಿ,ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713