*ಮಕ್ಕಳಲ್ಲಿ ಸಂಸ್ಕಾರದ ಮೌಲ್ಯಗಳನ್ನು ತುಂಬಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ,,!ಶಿವಪ್ಪ ಈಬೇರಿ,,*

ಬ್ರೇಕಿಂಗ್ ನ್ಯೂಸ್:-ನಿರ್ಭಯ ದೃಷ್ಟಿ ನ್ಯೂಸ್ -***
ಕುಕನೂರು : ಮಕ್ಕಳ ಪ್ರತಿ ಸಂಸ್ಕಾರ ಮೌಲ್ಯಗಳನ್ನು ತುಂಬುವ ಜೊತೆಗೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲುಭಾ ಕಾರಂಜಿ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ಶಿಕ್ಷಕ ಶಿವಪ್ಪ ಈಬೇರಿ ಹೇಳಿದರು.
ಅವರು ಬುಧವಾರದಂದು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಕೊಪ್ಪಳ, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ, ತಾಲೂಕು ಪಂಚಾಯತ್ ಕುಕನೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ ಕಾರ್ಯನಿರ್ವಹಿಸಿದರು. ಹಮ್ಮಿಕೊಂಡ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಸಿ ನೀರು ಹಿಕುವ ಮೂಲಕ ಚಾಲನೆ ನೀಡಿ ಮಾತನಾಡಿ ಜೋಗುಳ ಪದ, ಹಂತ, ಜನಪದ, ನಾಟಕ, ಪ್ರವಚನಗಳು ಮೂಲಕ ಆದ ಪೀಳಿಗೆಗೆ ಸಂಸ್ಕಾರ ನೀಡಲಾಯಿತು.
ಅದರಂತೆ ಇಂದಿನ ಪೀಳಿಗೆಗೆ ಸಂಸ್ಕಾರದ ಮೌಲ್ಯಗಳನ್ನು ನೀಡಲು ಸರಕಾರ ನೂತನ ಯೋಜನೆಯೊಂದನ್ನು ನೀಡಿ ಅದಕ್ಕೆ ಪ್ರತಿಭಾ ಕಾರಂಜಿ ಎಂದು ಹೆಸರಿಸುವೆ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡಲು ಮುಂದಾಯಿತು ಈ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಹೊರ ಹಾಕಲು ಸಹಕಾರಿಯಾಗಿದೆ.
ನಂತರ ತಾಪಂ ಉಪಾಧ್ಯಕ್ಷ ಪ್ರಭು ಆಚಾರ್ ಮಾಜಿ ಮಾತನಾಡಿ ಈ ಕಾರ್ಯಕ್ರಮ ಆಯೋಜಿಸಲು ಗ್ರಾಮದ ಹಿರಿಯರನ್ನು ಕರೆದು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು ನಡೆಸಿಕೊಟ್ಟರು ಯೋಜನೆ ಮಾಡಿದರು. ಈ ಗ್ರಾಮ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಗ್ರಾಮವಾಗಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮಲ್ಲಿನ ಪ್ರತಿಭೆಗಳು ಬೆಳೆಯಲು ಸಹಕಾರಿಯಾಗಿದೆ.
ನಂತರ ಉಪನ್ಯಾಸಕ ಗವಿಸಿದ್ದಯ್ಯ ಹಿರೇಮಠ ಮಾತನಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆಯುತ್ತಾ ಬಂದಿವೆ. ಅದರಲ್ಲಿ ಮಸಬ ಹಂಚಿನಾಳನಲ್ಲಿ ಅಚ್ಚುಕಟ್ಟಾಗಿ ಪ್ರತಿಭಾ ಕಾರಂಜಿ ನಡೆದಿದೆ. ಪ್ರತಿಭಾ ಕಾರಂಜಿ ಸದುದ್ದೇಶಗಳೆಂದರೇ ಮಕ್ಕಳಲ್ಲಿ ನಾಯಕತ್ವ ಗುಣ ಬೆಳಸಿಕೊಳ್ಳಲು ಉತ್ತಮ ವೇದಿಕೆ. ಶಿಕ್ಷಣ ಎಂದರೇ ಮಕ್ಕಳಲ್ಲಿನ ಸರ್ವಾಂಗೀಣ ಅಭಿವೃದ್ದಿಯಾಗಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳಿಗೆ ಸೂಕ್ತ ಪ್ರತಿಭೆ ಹೊರ ಹಾಕಲು ಸಹಕಾರಿ ಎಂದು ಹೇಳಿದರು.
ಎಸ್ ಡಿಎಂಸಿ ಅಧ್ಯಕ್ಷ ನಿಂಗಪ್ಪ ಗೋಡೆಕರ್ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಪಠ್ಯದ ಜೊತೆಗೆ ಬೆರೆತ ಮಕ್ಕಳ ಪಠ್ಯ ಸ್ಪರ್ಧಾ ಬೆಳೆಯುವವರೊಂದಿಗೆ ತಾಲೂಕ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರತರುತ್ತಾರೆ ಹಾಕುವ ಜೊತೆಗೆ ಶಾಲೆಯಲ್ಲಿ, ಪಾಲಕರ ಉತ್ತಮ ವೇದಿಕೆ ಪ್ರತಿಭಾ ಕಾರಂಜಿ ಹೇಳಿದರು.
ನಂತರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ ಪ್ರತಿಭಾ ಕಾರಂಜಿಯ ಉದ್ದೇಶ ಹಾಗೂ ಆಗುವ ಪ್ರಯೋಜನ ಕುರಿತು ಸವಿಸ್ತಾರವಾಗಿ ಪ್ರಸ್ತುತ.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಮಹೇಶ ಸಬರದ, ಸುರೇಶ್ ಅಬ್ಬಿಗೇರಿ, ಬಸವರಾಜ ಅಂಗಡಿ, ಉಮೇಶ ಕಂಬಳಿ, ಪ್ರಭು ಕುಕನೂರು, ತಿಪ್ಪಣ್ಣ ಚಲವಾದಿ, ಮಹಾವೀರ ಕಲ್ಬಾವಿ, ಶರಣಪ್ಪ ಮುದ್ಲಾಪೂರ, ನಿಂಗಾರೆಡ್ಡಿ ಕರಮುಡಿ, ಶಿವಕುಮಾರ ಮುತ್ತಾಳ, ಅಬ್ದುಲ್ ಖದೀರ, ಎಸ್ ಡಿ ಎಂಸಿ ಅಧ್ಯಕ್ಷ ಗುರುಸಂಗಯ್ಯ ಹಿರೇಮಠ, ಯಮನಪ್ಪ ಈಳಗೇರ, ಗ್ರಾಪಂ ಅಧ್ಯಕ್ಷ ಹನುಮಂತ ಪೂಜಾರ, ಭೀರಪ್ಪ ಕರಿಗಾರ, ಚನ್ನಮ್ಮ ಈಳಗೇರ, ಸುವರ್ಣಮ್ಮ ಗಾಂಜಿ, ರವಿ ಭಜೇಂತ್ರಿ, ಶಿವಪ್ಪ ಈಬೇರಿ, ಶಿವಪ್ಪ ಕಳ್ಳಿ, ಲಕ್ಷ್ಮಣ ಪೂಜಾರ, ಹನುಮಂತ ಟೇಲರ್, ಗೂಳಪ್ಪ ದ್ಯಾಂಪೂರ, ಮಾರುತಿ ತಳವಾರ ಪ್ರಾಚಾರ್ಯ, ಅಶೋಕ ದೇವರಮನಿ, ಬಸವರಾಜ ಉಪ್ಪಿನ, ಸಂಗಪ್ಪ ರಾಜೂರ, ನಾಗರಾಜ ಹನಸಿ, ಎಚ್. ಎ ನದಾಫ್, ಗುರುರಾಜ ನರಗುಂದ ಅಜೀಂ ಪ್ರೇಮಜೀ ಫೌಂಡೇಶನ್, ಶೇಖರಪ್ಪ ದಾಸರ, ಎಸ್ ಡಿ ಎಂಸಿ ಸರ್ವ ಸದಸ್ಯರು, ಗ್ರಾಪಂ ಸದಸ್ಯರು, ಪಾಲಕರು ಹಾಗೂ ಮುಖ್ಯೋಪಾಧ್ಯರು, ಶಿಕ್ಷಕರು, ಸರ್ವ ಸಂಘದ ಪದಾಧಿಕಾರಿಗಳು. ಶಿಕ್ಷಕ ರಾಮಕೃಷ್ಣ ಸ್ವಾಗತಿಸಿದರು.

ಪ್ರತಿಭಾ ಕಾರಂಜಿ ಕ್ಲಸ್ಟರ್ ಯಾಕೆ ಮಾಡುತ್ತಾರೆ ಎಂದರೇ ಇಂತಹ ಕಾರ್ಯಕ್ರಮ ಪ್ರತಿಷ್ಠಿತ ಶಾಲೆಗಳಲ್ಲಿ ಮಾಡುತ್ತಿದ್ದರು. ಆದರೆ ಸರಕಾರಿ ಶಾಲೆಗಳಲ್ಲಿರಲಿಲ್ಲ, 2004ರಿಂದ ಸರಕಾರಿ
ಶಾಲೆಗಳಿಗೆ ಈ ಪ್ರತಿಭಾ ಕಾರಂಜಿ ಪ್ರಾರಂಭವಾಯಿತು. ಇದರಿಂದ ತಾಲೂಕ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ವಿಭಾಗದಿಂದ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೇವಲ ನಾಲ್ಕು ಕೋಣೆಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಗಲಾರದು ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಕಲಿಕೆಯ ಸಾಂಸ್ಕೃತಿಕ ಜೊತೆ ಚಟುವಟಿಕೆ, ಆಟೋಟಗಳಿಂದ, ಚೈತನ್ಯ ಹೆಚ್ಚಿಸುವ ಜೊತೆಗೆ ಕಲಿಕೆಗೆ ಸಹಕಾರಿ.
* ಶಿಕ್ಷಕ ಮಾರುತಿ ತಳವಾರ .*
ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚೆನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 📞 ಕನ್ನಡ9164386713