*ಜೆಸ್ಕಾಂ ಎಇಇ ವಿರುದ್ಧ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಪ್ರತಿಭಟನೆ,,*

Breaking news:- ನಿರ್ಭಯ ದೃಷ್ಟಿ ನ್ಯೂಸ್***

 

*ಜೆಸ್ಕಾಂ ಎಇಇ ನಾಗರಾಜ ಅವರನ್ನು ವರ್ಗಾವಣೆ ಮಾಡುವಂತೆ ಗುತ್ತಿಗೆದಾರರ ಒತ್ತಾಯ,,*

ಕುಕುನೂರು : ಜೆಸ್ಕಾಂ ಎಇಇ ನಾಗರಾಜ್ ಎಂ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ವಿದ್ಯುತ್ ಗುತ್ತಿಗೆದಾರ ಸಂಘದ ಕಾರ್ಯದರ್ಶಿ ವಿಜಯಕುಮಾರ ಅಂಗಡಿಯವರು ಆಗ್ರಹಿಸಿದರು.

ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಯಲಬುರ್ಗಾ ಕುಕುನೂರು ವತಿಯಿಂದ ಜೆಸ್ಕಾಂ ಕಚೇರಿ ಮುಂದೆ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ನಾವು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ ಮತ್ತು ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಯವರಿಗೂ ಕೂಡ ಮನವಿಯನ್ನು ಕೊಟ್ಟಿದ್ದೇವೆ ಆದರೂ ಅಧಿಕಾರಿಯ ವಿರುದ್ಧ ಯಾವುದೇ ರೀತಿಯಾದ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಪಟ್ಟಣದ ಗುದ್ನೇಶ್ವರ ಜಾತ್ರೆಯಲ್ಲಿ 130ಕ್ಕಿಂತ ಹೆಚ್ಚು ಅಂಗಡಿ ಮುಂಗ್ಗಟ್ಟುಗಳಿಗೆ ಮೀಟರ್ ಇಲ್ಲದೆ ನೇರ ವಿದ್ಯುತ್ ಸಂಪರ್ಕ ಕೊಟ್ಟು ಅವರಿಂದ ಸಾವಿರಾರು ರೂಪಾಯಿ ಹಣ ಪಡೆದು, ನೂರಾರು ರಸೀದಿ ಹಾಕಿದ್ದಾರೆ ಇದರ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಕಚೇರಿಯಲ್ಲಿ ಯಾವುದೇ ಗುತ್ತಿಗೆದಾರರು ಫೈಲ್ ಕಳೆದು ಹೋದರೆ ಅದನ್ನು ಕೂಡಲೇ ಹುಡುಕಿಸಿಕೊಡಬೇಕು ಸಿಗದೇ ಇದ್ದಲ್ಲಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿದ ಪ್ರತಿಗಳ ಜೆರಾಕ್ಸ್ ಪ್ರತಿ ಹಾಕಿ ಡುಬ್ಲಿಕೇಟ್ ಫೈಲ್ ಮಾಡಿ ಅಂದೆ ಪೂರ್ಣಗೊಳಿಸಬೇಕು ಎಂದರು.

ಎಲ್ಲಾ ಫೈಲುಗಳನ್ನು ಆಫ್ ಲೈನ್ ಪ್ರೊಸೀಜರ್ ಮಾಡಿ ಆರ್ ಆರ್ ನಂಬರ್ ಆಗಿ ಫೈಲ್ ಹ್ಯಾಂಡ್ ಓವರ್ ಆದಮೇಲೆ ತಾವೇ ಆನ್ಲೈನ್ ಮಾಡಿಕೊಳ್ಳಬೇಕು ಎಂದು ಹತ್ತಾರು ಸಾರಿ ಮನವಿ ಪತ್ರ ಕೊಟ್ಟರು ಸುಧಾರಿಸಿಕೊಳ್ಳದ ಕಂಪ್ಯೂಟರ್ ಆಪರೇಟರ್ ಮಂಜುನಾಥ ವೀರಾಪುರ ಅವರನ್ನು ಕೆಲಸದಿಂದ ಕೂಡಲೇ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದು ಆಗ್ರಹಿಸಿದ್ದಾರೆ.

ಕಚೇರಿ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಇಇ ಅವರು ತಮ್ಮ ಉಪವಿಭಾಗ ಕುಕನೂರಿನಲ್ಲಿ ವಾಸ್ತವ್ಯ ಮಾಡಬೇಕು. ಕಳೆದ ವರ್ಷ ಜಾತ್ರೆಯ ಫೈಲುಗಳ ಡಿಪೋಸಿಟ್ ನಲ್ಲಿ ಉಳಿದ ಹಣ ಮರುಪಾವತಿ ಮಾಡಬೇಕು ಇದನ್ನು ಸಮಗ್ರ ಇ.ಡಿ ಅವರಿಂದ ತನಿಖೆಗೆ ಆದೇಶಿಸಬೇಕು ಎಂದರು.

ಎಲ್.ಸಿ ಕೇಳಿದ ನಂತರ ಶಾಖಾಧಿಕಾರಿಗಳು ಗುತ್ತಿಗೆದಾರರಿಗೆ ಬೇಗನೆ ಎಲ್.ಸಿ ಯನ್ನು ಕೊಡಬೇಕು ಇದನ್ನು ಎಲ್.ಎಮ್ ಗಳ ಆಕಾರ ನೀಡಬೇಕು ತಾತ್ಕಾಲಿಕ ವಿದ್ಯುತ್ ಕ್ಲೋಸಿಂಗಗೆ ಶಾಖಾಧಿಕಾರಿಗಳೇ ರೀಡಿಂಗ್ ರಿಪೋರ್ಟ್ ಎರಡು ದಿನಗಳ ಒಳಗೆ ನೀಡಬೇಕು ಎಂದು ತಿಳಿಸಿದರು.

ಕುಕುನೂರು ತಾಲೂಕಿನ ಗ್ರಾಮಗಳ ಟಿ.ಸಿ.ಗಳ ಓವರ್ ಲೋಡ್ ಇದೆ ಎಂದು ಅಂದಾಜು ಹೇಳುವುದು ಬೇಡ ಇಡೀ ತಾಲೂಕಿನ ಟಿ.ಸಿ.ಗಳನ್ನು ತಪಾಸಣೆ ಮಾಡಿ ಲೋಡ್ ರಿಪೋರ್ಟ್ ವರದಿಯನ್ನು ಕೊಡಬೇಕು. ಗುತ್ತಿಗೆದಾರರ ಅವಾರ್ಡ್ ಇದ್ದು ಎಲ್ಲರಿಗೂ ಸರದಿ ಪ್ರಕಾರ ಕೆಲಸಗಳನ್ನು ವಿತರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ವಿಜಯಕುಮಾರ ಮರಾಠಿ, ಉಪಾಧ್ಯಕ್ಷ ಸಂಗಯ್ಯ ಸಾವಳಗಿ ಮಠ, ಸಹ ಕಾರ್ಯದರ್ಶಿ ಮಹೇಶ್ ವಕ್ಕಳದ, ಕೊಪ್ಪಳ ಜಿಲ್ಲೆಯ ಉಪಾಧ್ಯಕ್ಷ ಪಾಟೀಲ್,ಯಲಬುರ್ಗಾ ಅಧ್ಯಕ್ಷ ಲಾಲ್ ಸಾಬ್ ವಾಲಿಕಾರ್, ಉಪಾಧ್ಯಕ್ಷ ಅಶೋಕ ಅರಕೇರಿ ಸರ್ವ ಸದಸ್ಯರೂ ಉಪಸ್ಥಿರಿದ್ದರು.

 

ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

 

Leave a Reply

Your email address will not be published. Required fields are marked *