ಬದುಕು ಕಟ್ಟಿಕೊಟ್ಟ “ಸೆಂಟ್ ಸೆವಂತಿ”ಕೈ ಕೊಟ್ಟ ಪದವಿ, ಆಸರೆಯಾದ ಹೂವಿನ‌ ವ್ಯಾಪಾರ ತಾಲೂಕಿನಲ್ಲೊಬ್ಬ ಮಾದರಿ ರೈತ,

ಯಲಬುರ್ಗಾ: ಬದುಕು ಕಟ್ಟಿಕೊಳ್ಳು ಹಲವಾರು ಉದ್ಯೋಗ ಅರಸಿ ಹೊದರು, ಬರೀ ನಿರಾಶೆ, ವಿಫಲತೆ! ಕೊನೆಗೆ ಕೈ ಹಿಡಿದಿದ್ದು ಹೂವಿನ ವ್ಯಾಪಾರ.‌ ಎಂ ಎ ಬಿಎಡ್ ಮಾಡಿದ್ದರು, ಶಿಕ್ಷಣ ಕೈ ಹಿಡಿಯಲಿಲ್ಲ, ಉದ್ಯೋಗ ಅರಸಿ ಬೇರೆ ಕಡೆ ಹೊಗಲಿಲ್ಲ, ಕೃಷಿ ಮಾಡಿ ಕೈಸುಟ್ಟುಕೊಂಡಿದ್ದರು ಕೊನೆಗೆ ಬದುಕು ರೂಪಿಸಿದ್ದು ಸೆಂಟ್ ಸೆವಂತಿ ಹೂ! ತಾಲೂಕಿನ ಮುರಡಿ ತಾಂಡದ ಮಂಜುನಾಥ ಕಮಲಪ್ಪ ಚೌಹ್ವಾಣ ಎಂಬ ರೈತ ತನ್ನ ಸ್ವಂತ ಮೂರು ಎಕರೆ ಹಾಗೂ ಬೇರೆಯವರ 8 ಎಂಟು ಎಕರೆ ಜಮೀನನ್ನು ಗುತ್ತಿಗೆ ಪಡೆದು ಸೆಂಟ್ ಸೆವಂತಿ ಎಂಬ ಹೂ ಬೆಳೆದು, ಯಶಸ್ಸು ಕಂಡಿದ್ದಾನೆ. ತಾಯಿ ಶಾಂತಮ್ಮ ಕಮಲಾನಾಯಕ್ ಮಾಜಿ ತಾ.ಪಂ ಉಪಾಧ್ಯಕ್ಷೆ ಮಗನಿಗೆ ಆಸರೆಯಾಗಿದ್ದಾರೆ. ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಬೆಳೆಯ ನಿರ್ವಹಣೆ:

ಸೆಂಟ್ ಸೆವಂತಿ ಅತಿ ಬೆಡಿಕೆಯ ಹೂವಾಗಿದ್ದು, ಶುಭ ಸಮಾರಂಭಗಳಿಗೆ ಹಾಗೂ ಔಷಧಿ ತಯಾರಿಕೆಗೆ ಅನ್ಯ ಜಿಲ್ಲೆಗೆ ಹಾಗೂ ಅನ್ಯ ರಾಜ್ಯಕ್ಕೆ ಸಾಗಾಣಿಕೆಯಾಗುತ್ತದೆ.‌ಒಟ್ಟು 8 ತಿಂಗಳ ಬೆಳೆಯಾಗಿದ್ದು, ಬಿತ್ತಿದ ಮೂರು ತಿಂಗಳ ನಂತರ ಹೂ ಬಿಡಲು ಪ್ರಾರಂಭವಾಗುತ್ತದೆ. ಕೀಟ ಭಾದೆ ಕಡಿಮೆ ಇದ್ದರು, ಅಧಿಕ ಕರ್ಚಿನ ಬೆಳೆ ಇದಾಗಿದೆ‌.‌ಎಕರೆಗೆ 15 ರಿಂದ 20 ಕ್ವಿಂಟಾಲ್ ಬೆಳೆಯಬಹುದಾಗಿದೆ‌. ಕೆಜಿಗೆ 150- ರಿಂದ 250 ಬೆಲೆ ದೊರಕುತ್ತದೆ. ಹುಬ್ಬಳ್ಳಿ, ವಿಜಯಪೂರ, ಬೆಳಗಾವಿ, ದೂರದ ಮುಂಬೈ ನಗರಕ್ಕೂ ಸೆಂಟ್ ಸೆವಂತಿ ಪೂರೈಕೆಯಾಗುತ್ತಿದೆ.

ನಾಲ್ಕು ಸಾವಿರ ಎಲ್ ಇ ಡಿ ಬಲ್ಬ್ ಅಳವಡಿಕೆ:.

ಸೆಂಟ್ ಸೆವಂತಿ ಬೆಳೆಗೆ ಬಿತ್ತಿದ ಒಂದು ತಿಂಗಳ ನಂತರ ರಾತ್ರಿ ಸಮಯದಲ್ಲಿ ಎಲ್ ಇಡಿ ಬಲ್ಬಗಳ ಮುಖಾಂತರ ಶಾಖ ನೀಡಲಾಗುತ್ತದೆ ಇದರಿಂದ ಸಸಿಯು ಬಲಿಷ್ಟಗೊಳ್ಳುತ್ತದೆ. ಮುಂದೆ ಗುಣಮಟ್ಟದ ಹೂವಿನ ತಳಿ ಬರಲು ಸಹಾಯಕವಾಗುತ್ತದೆ. ಇವರ ಜಮೀನಿನಲ್ಲಿ ಸುಮಾರು ನಾಲ್ಕು ಸಾವಿರ ಎಲ್ ಇಡಿ ಬಲ್ಬಗಳನ್ನು ಅಳವಡಿಸಿದ್ದು, ವಿದ್ಯೂತ್ ನಿರ್ವಹಣೆಗೆ ಜನರೇಟ್ ಅವಲಂಬಿಸಿದ್ದಾರೆ. ರಾತ್ರಿ ಸಮಯದಲ್ಲಿ ಇವರ ತೋಟದ ದೃಷ್ಯ ಅದ್ಭುತವಾಗಿರುತ್ತದೆ. ಪೋಟೋ ಶೂಟ್ ಮಾಡಲು ಯೋಗ್ಯವಾದ ಸ್ಥಳವಾಗಿದೆ.

ಸೆಂಟ್ ಸೆವಂತಿ ಹೂ ಬೆಳೆದು ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿರುವ ರೈತ ಮಂಜುನಾಥ ಚೌಹ್ವಾಣ್.

ಗುಣಮಟ್ಟದ ತಳಿ ಬರಲು ಸಸಿಗಳಿಗೆ ಎಲ್ ಇಡಿ ಬಲ್ಬ್ ಅಳವಡಿಸಿದ್ದು.‌

 

ಸುದ್ದಿ ಜಾಹಿರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *