ಭೀಕರ ಅಪಘಾತ: ಇಬ್ಬರು ಬೈಕ್ ಸವಾರರು ಸಾವು


Breaking news:- ನಿರ್ಭಯ ದೃಷ್ಟಿ ನ್ಯೂಸ್
ಕುಕನೂರು, ಡಿ.07: ಪಟ್ಟಣದ ಕೊಪ್ಪಳ ರಸ್ತೆಯ ರಾಷ್ಟ್ರೀಯ
ಹೆದ್ದಾರಿ 367 ರಲ್ಲಿ ಶನಿವಾರ ರಾತ್ರಿ 10:30ರ ವೇಳೆಗೆ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯ ಕುಕನೂರು ಪಟ್ಟಣ ಹಾಗೂ ಮಸಬಹಂಚನಾಳ ಗ್ರಾಮದ ನಡುವೆ ಬಿ.ವಿ ಶೆಟ್ಟರ್ ಕಲ್ಯಾಣ ಮಂಟಪದ ಹತ್ತಿರ ಇರುವ ಮಗಜಿ ಮಂಗಲ ಭವನದ ಹತ್ತಿರ ಅಪಘಾತ ಸಂಭವಿಸಿದೆ. ಕೊಪ್ಪಳ ಕಡೆಯಿಂದ ಕುಕನೂರು ಕಡೆಗೆ ಬರುತ್ತಿದ್ದ ಕಾರು ಚಾಲಕ ಮಂಜುನಾಥ ಕುರಿ (ಬಾಸಿಂಗದಾರ), ಕುಕನೂರು ಕಡೆಯಿಂದ ಕೊಪ್ಪಳ ಮಾರ್ಗವಾಗಿ ಚಲಿಸುತ್ತಿರುವ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಈರನಗೌಡ ಮತ್ತು ಮುತ್ತಪ್ಪ ಮೋಟಾರು ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಇಬ್ಬರಿಗೆ ಬಾರಿ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು.
ಇವರ ಸಾವಿಗೆ ಕಾರಣನಾದ ಕಾರು ಚಾಲಕ ಮಂಜುನಾಥ ತಂದಿ ನಾಗಪ್ಪ ಕುರಿ@ಬಾಸಿಂಗದಾರ ಕುಕನೂರು ಈತನ ಮೇಲೆ ಕಾನೂನು ಕ್ರಮ ಜರಗಿಸಲು ಫಿಯಾ೯ದಿದಾರರ ಸಾರಾಂಶದ ಮೇಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಅಪಘಾತಕ್ಕಿಡಾದ ಕಾರು KA 37 N 7550 ಹಾಗೂ ಆ ಮೃತರಿಗೆ ಸಂಬಂಧಿಸಿದ ದ್ವಿಚಕ್ರವಾಹನದ ನೋಂದಣಿ ಸಂಖ್ಯೆ KA 25 EK 6946 ಇದ್ದು ಪ್ರಕರಣವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸುದ್ದಿ ಜಾಹೀರಾತಿಗಾಗಿ , ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು,ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713